ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?

ಸಂಸ್ಕೃತ ಸುಂದರ,ಸುಲಲಿತ,ಸುಶ್ರಾವ್ಯ ಭಾಷೆ.ಆದರೆ ಕೇವಲ ಕೆಲವೇ ಪಂಡಿತರು ಸೇರಿ ವ್ಯಾಕರಣಕ್ಕೇ,ಉಚ್ಛಾರಕ್ಕೇ ಮಹತ್ವ ಕೊಟ್ಟು,ಉಳಿದವರು ಕಲಿಯದಂತೆ, ಕಲಿತವರು ಮಾತನಾಡಲು ಹಿಂಜರಿಯುವಂತೆ ಮಾಡಿದರು.

ಪ್ಯಾರಿಸ್ ಪ್ರಸಂಗ

ನನ್ನ ಮೊದಲ ನೌಕರಿ ಚೆನ್ನೈನಲ್ಲಿ ಆಗಿತ್ತು. ಈ ಘಟನೆ ನಡೆದದ್ದು ನಾನು ಚೆನ್ನೈಗೆ ಕಾಲಿಟ್ಟ ಮೊದಲ ದಿನವೇ.  ಗೆಳೆಯ ವಿಕ್ರಮ್ ಪಾಟೀಲ ಅದಾಗಲೇ ಅಲ್ಲಿ ನೌಕರಿ ಮಾಡುತ್ತಿದ್ದು, 'ಬ್ಯಾಚೆಲರ್ಸ್ ಪ್ಯಾರಡೈಸ್' ಎಂದು ಕರೆಸಿಕೊಳ್ಳುತ್ತಿದ್ದ ಟ್ರಿಪ್ಲಿಕೇನ್-ನಲ್ಲಿ ವಾಸವಾಗಿದ್ದ.

ಜೋಗದ ವಿಶ್ವರೂಪ ದರ್ಶನ

ಅಲ್ಲಿ ರಾಜಾ, ರಾಣಿ, ರೊಕೆಟ್, ರೊಲರ್ ಇಲ್ಲ. ಜಗದ್ವಿಖ್ಯಾತ ಜೋಗಕ್ಕೆ ಹೊಸ ರೂಪ ನೀಡಲು ಅವೆಲ್ಲ ಸಮ್ಮಿಳಿತಗೊಂಡಿವೆ. ಧುಮ್ಮಿಕ್ಕುವ ನೀರು, ಅದು ಬೆಣ್ಣೆಯೊ, ಹಿಟ್ಟೊ ಎಂಬ ಭ್ರಮೆ, ಅದೂ ಸ್ಲೊ ಮೊಶನ್ ನಲ್ಲಿ. ಸದ್ಯಕ್ಕೆ ಜೋಗ ಶಬ್ದಗಳಾಚೆಯ ಜಗತ್ತು, ಛಾಯಾಚಿತ್ರಗಳೂ ಸೆರೆಹಿಡಿಯಲಾರದ ದೈವಿಕ ಔನ್ನತ್ಯಕ್ಕೇರಿಬಿಟ್ಟಿದೆ ಅದರ ವೈಭವ.

ಚಾಣಕ್ಯ ನೀತಿ

ಚಾಣಕ್ಯ ಪಂಡಿತನ ಚಾಣಕ್ಯ ನೀತಿ ದರ್ಪಣ ಎಂಬ ಪುಸ್ತಕದಿಂದ ನನಗೆ ಹಿಡಿಸಿದ ನಾಲ್ಕು ಸುಭಾಷಿತಗಳನ್ನು ಇಲ್ಲಿ ಕನ್ನಡಕ್ಕೆ ತಂದಿದ್ದೇನೆ.

 

ಈ ಚಾಣಕ್ಯ ಪಂಡಿತ ಅರ್ಥಶಾಸ್ತ್ರವನ್ನು ಬರೆದ ಕೌಟಿಲ್ಯನೇ (ಚಂದ್ರಗುಪ್ತನ ಗುರು, ಮಾರ್ಗದರ್ಶಿ), ಅಥವಾ ಬೇರೊಬ್ಬನೇ ಎಂಬುದು ನನಗೆ ತಿಳಿದಿಲ್ಲ.

ಮೂಲವನ್ನೂ ಇಲ್ಲೇ ಬರೆದಿದ್ದೇನೆ.

 

ಶೈಲೇ ಶೈಲೇ ಚ ಮಾಣಿಕ್ಯಂ ಮೌಕ್ತಿಕಂ* ನ ಗಜೇ ಗಜೇ
ಸಾಧವೋ ನಹಿ ಸರ್ವತ್ರ ಚಂದನಂ ನ ವನೇ ವನೇ

 

ಗಿರಿಬೆಟ್ಟಗಳಲೆಲ್ಲ ದೊರೆವುದೆ ಮಾಣಿಕ್ಯ?
ಎಲ್ಲ ಚಿಪ್ಪಿನಲು ಸಿಗುವುದೆ ಮುತ್ತುಗಳು ?
ಕಾಡುಕಾಡಲ್ಲೆಲ್ಲ ಇವೆಯೆ ಗಂಧದ ಮರವು?
ಒಳ್ಳೆಯ ಜನರೆಲ್ಲೆಲ್ಲೂ ಹೇಗೆ ದೊರೆತಾರು?

ಅಭಿಮಾನ್ಯ ಶೂನ್ಯ ಕನ್ನಡಿಗಾ....

ಅನಿಸಿದಂತೆ ನಡೆದಿದೆ
ಬಾಲಗ್ರಹ ಪೀಡಿತ ುದುಪಿ ಸಾಹಿತ್ಯ ಸಮ್ಮೇಳನ ಕೊನೆಗೂ ಮುಂದೂಡಲ್ಪಟ್ಟಿದೆ
ಇಲ್ಲಿ ಎಲ್ಲವೂ ರಾಜಕಾರಣಿಗಳಿಂದ ರಾಜಕಾರಣಿಗಳಿಗಾಗಿ, ರಾಜಕಾರಣಿಗಳೇ ನಡೆಸುವ ಆತಿ ದೊಡ್ಡ .....ಬೇಡ ಬಿಡಿ
ಛೇ shame on us

ಬಿಟ್ಟಿ ಸಲಹೆಗಳು ಕೊಟ್ಟಿದ್ದಿರಾ ? ತಗೊಂಡಿದ್ದಿರಾ ?

ನಾನು ಕೆಲವೊಮ್ಮೆ ಬೇರೆಯವರಿಂದ ಈ ತರದ ಸಲಹೆ ಪಡೆದು "ಮಠ" ಹತ್ತಿದ್ದೇನೆ. :)  "ನಾನು ಹೇಳಿದೆ ಸರಿ, ಅದನ್ನು ನೀನ್ಯಾಕೆ ಕೇಳಿದ?" ಅಂತ ಡೈಲಾಗ್ ಬೇರೆ ಹೋಡೆದ್ರು. ಯಾಕೆ ಅಂತ ಹಲ್ಲು ಕಿರಿದು ಸುಮ್ಮನಾದೆ !!!

ಶಿವನಿಗೆ ಸಡ್ಡು ಹೊಡೆದ ಕೆಚ್ಚೆದೆಯ ಕನ್ನಡಿಗ - ಭಾಗ ಎರಡು

 ಶಿವನಿಗೆ ಸಡ್ಡು ಹೊಡೆದ ಕೆಚ್ಚೆದೆಯ ಕನ್ನಡಿಗ - ಭಾಗ ಎರಡು
ವೆಂಕಟಮಖಿ ಗೋವಿಂದದೀಕ್ಷಿತನ ಮತ್ತು ನಾಗಮ್ಮ ಇವರ ಮಗ. ಇವನಿಗೆ ವೆಂಕಟಾಧ್ವರಿ, ವೆಂಕಟೇಶ್ವರ ದೀಕ್ಷಿತ ಎಂಬ ಹೆಸರೂ ಇತ್ತು.