ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇನ್ನೊಂದು ಒಳೆಯ ಝೆನ್ ಕಥೆ :- ಒಮ್ಮೊಮ್ಮೆ ಹಾಗಾಗುತ್ತದೆ!

ಒಬ್ಬ ಶಿಷ್ಯ ಗುರುವಿನ ಬಳಿ ಹೋಗಿ
"ಗುರುಗಳೇ ನನ್ನಿಂದ ಏಕಾಗ್ರತೆಯನ್ನು ಸಾಧಿಸಲಾಗುತ್ತಿಲ್ಲ ; ಧ್ಯಾನ ಮಾಡಲಾಗುತ್ತಿಲ್ಲ ; ಸಾಧನೆ ಮಾಡಲು ನನ್ನಲ್ಲಿ ಯೋಗ್ಯತೆ ಇಲ್ಲವೇನೋ ಅನಿಸುತ್ತಿದೆ. ಬಹಳ ನಿರಾಶೆಯಾಗಿದೆ" ಎಂದು ಹೇಳುತ್ತಾನೆ.

OLN ರವರ ಪುಸ್ತಕ - ಲೋಕಾಂತ ಏಕಾಂತ

ಇತ್ತೀಚೆಗೆ ಬೆಂಗಳೂರ್‍ಇಗೆ ಹೋದಾಗ ಸಪ್ನ ಪುಸ್ತಕದಂಗಡಿಗೆ ಹೋಗಿದ್ದೆ . ಅಂಗಡಿ ಮುಚ್ಚಲು ಹತ್ತೇ ನಿಮಿಷಗಳು ಇದ್ದವು . ಅವಸರದಲ್ಲಿ ನಾನು ತೆಗೆದುಕೊಂಡ ಪುಸ್ತಕಗಳಲ್ಲಿ OLN ರವರ ಪುಸ್ತಕ ವೂ ಒಂದು .

ಕಿಟಕಿಯಲ್ಲಿ ಕಂಡಾತ

ಒಂದು ದಿನ ಮಧ್ಯಾಹ್ನ ಊಟ ಮುಗಿಸಿ ಕಿಟಕಿಯಾಚೆ ನೋಡುತ್ತಾ ಕುಳಿತಿದ್ದೆ.

ಸ್ಥಳ: ಮುಂಬೈಯ ದಾದರ್‌ನಲ್ಲಿರುವ ಹಳೆಯ ಕಟ್ಟಡವೊಂದರ ಮೂರನೆಯ ಮಹಡಿ. ಕಿಟಕಿಯಿಂದ ಹೊರಕ್ಕೆ ನೋಡಿದರೆ ಅಹ್ಲಾದ ತರುವಂಥದ್ದೇನೂ ಅಲ್ಲಿರಲಿಲ್ಲ. ಆದರೆ ಒಳ್ಳೆಯ ಗಾಳಿ ಬರುತ್ತಿತ್ತು. ಹಾಗಾಗಿ ಕಿಟಕಿಯಿಂದ ಆಕಾಶ ನೋಡುತ್ತಾ ಕುಳಿತುಕೊಳ್ಳುವುದು ಖುಷಿ ಕೊಡುತ್ತಿತ್ತು.

ಈ ಹೊತ್ತಿನಲ್ಲಿ ಒಂದು ಅಸಾಧಾರಣ ವಿದ್ಯಮಾನ ಘಟಿಸಿತು. ಕಪ್ಪಗಿನ ಸ್ಥೂಲ ದೇಹಿಯೊಬ್ಬ ನನ್ನೆದುರು ನಿಂತಿರುವಂತೆ ಭಾಸವಾಯಿತು. ಆತ ಕಿಟಕಿಯ ಹೊರಗಿದ್ದುದರಿಂದ ಶರೀರದ ಮೇಲಿನರ್ಧ ಭಾಗ ಮಾತ್ರ ನನಗೆ ಕಾಣಿಸುತ್ತಿತ್ತು. ಹೀಗೆ ಸುಖಾಸುಮ್ಮನೆ ಯಾರೋ ಕಂಡಂತಾಗುವುದು, ಯಾವುದೋ ಶಬ್ದ ಕೇಳಿಸಿದಂತಾಗುವುದು ಇದೆಲ್ಲಾ ಭ್ರಾಂತಿ ಎಂದು ಮನಶ್ಶಾಸ್ತ್ರದ ಅಧ್ಯಯನದ ವೇಳೆ ಕಲಿತದ್ದು ನೆನಪಿಗೆ ಬಂತು. ಈ ಮೊದಲು ನನಗೆ ಯಾವಾಗಲೂ ಹೀಗಾಗಿರಲಿಲ್ಲ.

ಬರುವ ವಾರಾಂತ್ಯ ಸಂಪದ ಲಭ್ಯವಿರುವುದಿಲ್ಲ

ಸ್ನೇಹಿತರೆ,

ಈ ವಾರಾಂತ್ಯ ಕೆಲವು maintenance ಕೆಲಸಗಳನ್ನು ಹಮ್ಮಿಕೊಂಡಿರುವ ಸಲುವಾಗಿ ಸಂಪದ
ಎರಡು ದಿನಗಳ ಮಟ್ಟಿಗೆ ಲಭ್ಯವಿರುವುದಿಲ್ಲ. ಆದರೆ ಸಂಪದ ಸರ್ವರ್ ನಲ್ಲಿ ಇರುವ ಇತರೆ
ತಾಣಗಳು ಕಾರ್ಯನಿರ್ವಹಿಸುತ್ತಿರುತ್ತವೆ.

ಮಿಲಿ, ಆನಂದ್, ಗುಡ್ಡಿ ಯಂತಹ ಶ್ರೇಷ್ಟ ಹಿಂದಿ ಚಿತ್ರ ನಿರ್ಮಾಪಕ, ಹೃಷೀಕೇಶ್ ಮುಖರ್ಜಿ ನಿಧನ !

ಹಿಂದೀ ಚಿತ್ರರಂಗದ ಮಹಾನ್ ಹಸ್ತಿ, ಶ್ರೇ‍ಷ್ಟ ನಿರ್ದೇಶಕ, 'ಹೃಷಿದಾ', ತಮ್ಮ ೮೪ ನೆಯ ವಯಸ್ಸಿನಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ರವಿವಾರ, ೨೭ನೆ ಆಗಸ್ಟ್, ೨೦೦೬ ರಂದು ನಿಧನರಾದರು.

ಒಂಟಿಕೊಪ್ಪಲ್ ೮ನೇ ಕ್ರಾಸ್ ಗಣಪತಿ ಮಹೋತ್ಸವ

ಮೈಸೂರಿನ ಒಂಟಿಕೊಪ್ಪಲ್ ೮ನೇ ಕ್ರಾಸಿನಲ್ಲಿ ಕಳೆದ ೪೫ ವರ್ಷಗಳಿಂದ ಗಣಪತಿ ಮಹೋತ್ಸವವನ್ನು ಆಚರಿಸುತ್ತಿದ್ದಾರೆ.

ಕನ್ನಡ ದ್ರಾವಿಡ ಭಾಷೆಯಲ್ಲ ; ಕನ್ನಡಿಗರು ದ್ರಾವಿಡರಲ್ಲ.

ಈ ತಲೆಬರಹದ ಬರಹವು ('ಶೀರ್ಷಿಕೆ'ಗೆ ಬದಲಾಗಿ 'ತಲೆಬರಹ', 'ಲೇಖನ'ದ ಬದಲಾಗಿ 'ಬರಹ' ಬಳಸಿದ್ದೇನೆ- 'ಉಪಯೋಗಿ'ಸಿಲ್ಲ . ಇಂದಿನ ಆಂಡಯ್ಯಗೆ ಧನ್ಯವಾದಗಳು. ಈ 'ತಲೆಬರಹದ ಬರಹ ' ಎಂಬುದು ವಿಚಿತ್ರವಾಗಿ ಕಾಣಿಸುವದು ಅಲ್ಲವೇ ? 'ತಲೆಕಟ್ಟಿನ' ಎನ್ನಬೇಕಿತ್ತೇನೋ . ಇರಲಿ ) ನಿನ್ನೆಯ ಪ್ರಜಾವಾಣಿ (೨೭-೮-೦೬) ನಲ್ಲಿದೆ . ಓದಿ. ಅಲ್ಲಿ ಹೇಳಿರುವದೇನೆಂದರೆ - ಕನ್ನಡಿಗರು ಯಾವತ್ತೂ ದ್ರಾವಿಡರೊಂದಿಗೆ , ದ್ರಾವಿಡ ಭಾಷೆಯೊಂದಿಗೆ ಗುರುತಿಸಿಕೊಂಡಿಲ್ಲ . ಮತ್ತು ಕಾಲ್ಡ್ ವೆಲ್ ಮಹಾಶಯನು ಕನ್ನಡ ತೆಲುಗು ಮತ್ತು ಕೆಲವು ವಾಯುವ್ಯ ಭಾರತದ ಭಾಷೆಗಳನ್ನು ಒಂದು ವರ್ಗವನ್ನಾಗಿಸಿ ಅದಕ್ಕೆ 'ದ್ರಾವಿಡಿಯನ್' ಎಂಬ ಹೆಸರಿಟ್ಟಿದ್ದಾನೆ ಅಷ್ಟೇ)

ಬಸವಣ್ಣನವರ ವಚನ: ಚಕೋರಂಗೆ

ಬಸವಣ್ಣನವರ ವಚನ:
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ
ಎನಗೆ ನಮ್ಮ ಕೂಡಲಸಂಗಮದೇವನ ನೆನವುದೆ ಚಿಂತೆ
(ಸ. ಸ. ಮಾಳವಾಡ, ಬಸವಣ್ಣನವರ ವಚನ ಸಂಗ್ರಹ, ೧೯೯೬)

ಇಂದು, ಗಣಪತಿ ಹಬ್ಬ, ಆ ಮಂಗಳಮೂರ್ತಿಯು ನಿಮ್ಮೆಲ್ಲರಿಗೂ ಶುಭಾಶೀರ್ವಾದ ಮಾಡಲಿ !

ಇಂದು ವರಸಿದ್ಧಿವಿನಾಯಕನ ವ್ರತ : ತಾ.೨೭-೮-೨೦೦೬ ಭಾನುವಾರ.

ಭಾದ್ರಪದ ಶುಕ್ಲ ಚತುರ್ಥೀ ಮಧ್ಯಾಹ್ನ ವ್ಯಾಪಿನಿ ಮತ್ತು ಯಾಮದ್ವಯ ವ್ಯಾಪಿನಿಯಿರುವ ದಿನ ಆಚರಿಸತಕ್ಕ ವ್ರತ. ಬೆಳ್ಳಿ ಅಥವ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪ್ರಾಣಪ್ರತಿಷ್ಠಾಪನಾ ಪುರಸ್ಸರ ಪೂಜಿಸಿ ಮೊದಕವನ್ನು ನೈವೇದ್ಯಮಾಡಿ , ಸ್ಯಮಂತಕೊಪಾಖ್ಯಾನ ಕಥೆಯನ್ನು ಶ್ರವಣಮಾಡಬೇಕು. ಸಕಲ ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರಲೂ, ವಿದ್ಯಾಪ್ರಾಪ್ತಿಗಾಗಿಯೂ, ಇಷ್ಟಾರ್ಥ ಸಿದ್ಧಿಗೂ ಈ ವ್ರತ ಪ್ರಸಿದ್ಧವಾಗಿದೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ ಮನೆಮನೆಯಲ್ಲಿ ಪೂಜೆ ಗೊಳ್ಳುವ 'ಗಣಪ' ನನ್ನು ಮಹಾರಾಷ್ಟ್ರದಲ್ಲಿ 'ಸಾರ್ವಜನಿಕ ಮಂಟಪ' ಗಳಲ್ಲಿ ಸ್ಥಾಪಿಸಿ ಪೂಜಿಸುವುದು ವಾಡಿಕೆ.