ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಾಷಾ ಪ್ರಯೋಗ ಲಹರಿ

ಭಾಷೆಯ ಪ್ರಯೋಗವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನರೂಪ ತಾಳುವುದನ್ನು ಎಲ್ಲರೂ ಗಮನಿಸಿಯೇ ಇದ್ದೇವೆ. ಹೀಗೆ ಆಯಾ ಪ್ರಾಂತ್ಯದಲ್ಲಿಯೂ ಮತ್ತೊಂದಿಷ್ಟು ಒಳವೈವಿಧ್ಯಗಳನ್ನು ಕಾಣಲಿಕ್ಕೆ ಸಾಧ್ಯ. ಜನಾಂಗೀಯ ಪ್ರಭೇದ ಎಂದರೂ ಆದೀತೇನೊ. ಕೆಲ ವರ್ಷಗಳ ಹಿಂದಿನವರೆಗೂ ಕೊಪ್ಪಳದಲ್ಲಿ ಸ್ಥಳೀಯ ಸಾರಿಗೆಗೆ ಕುದುರೆಗಾಡಿಗಳ ಉಪಯೋಗ ಹೆಚ್ಚು ರೂಢಿಯಲ್ಲಿತ್ತು. (ಈಗಲೂ ಕುದುರೆ ಗಾಡಿಗಳು ಇವೆಯಾದರೂ ಆಟೋರಿಕ್ಷಾಗಳ ಪ್ರಾಬಲ್ಯ ಜಾಸ್ತಿ) ಟಾಂಗಾ ಎಂದು ಇವುಗಳನ್ನು ಕರೆಯುತ್ತಾರೆ. ಇವುಗಳ ಮಾಲಿಕರು ಶೇಕಡಾ ೯೯ ಮುಸ್ಲಿಮರು. ಆದರೂ ಕರ್ಮಠ ವರ್ಗದವರಲ್ಲ. ನನಗೆ ತಿಳಿದಂತೆ ಸಾಂಪ್ರದಾಯಿಕ ಮಸೀದಿಯಲ್ಲಿ ಇವರ ವ್ಯವಹಾರಗಳೇನೂ ನಡೆಯುವುದಿಲ್ಲ. ಹೆಸರುಗಳೂ ಸಹ ಅಷ್ಟೇ. ಹುಶೇನಪ್ಪ, ಯಮನೂರಪ್ಪ, ರಾಜಾ ಭಕ್ಷಿ, ಕಾಶೆಮ್ಮ (ಹೆಣ್ಣು) ಯಮನೂರವ್ವ (ಹೆಣ್ಣು) ಹೀಗೆ ಒಂದು ರೀತಿಯ ಸೂಫಿ ಎನ್ನುವ ಮನಸ್ತತ್ತ್ವದವರು. ಭಾಷೆಯೂ ಇದೇ ರೀತಿ, ಒಂದಿಷ್ಟು ಉರ್ದು ಒಂದಿಷ್ಟು ಕನ್ನಡ. ಯಾವ ಸಂದರ್ಭದಲ್ಲಿ ಯಾವ ಭಾಷೆಯು, ಯಾವ ಜಾಗದಲ್ಲಿ ಮಿಶ್ರಣವಾಗುತ್ತದೆ ಎಂದು ಅವರ ಬಾಯಿಗಷ್ಟೇ ಗೊತ್ತು. ಅದರ ಅರ್ಥ ಎದುರಿಗಿರುವವ ಇನ್ನೊಬ್ಬ ಯಮನೂರಪ್ಪನೇ ಆಗಿದ್ದರೆ ಮಾತ್ರ ಗೊತ್ತಾಗಲು ಸಾಧ್ಯ. ಇಲ್ಲವಾದರೆ ಇವರೊಂದಿಗೆ ಯಾವುದಾದರೂ ರೀತಿಯಲ್ಲಿ ನಿತ್ಯ ವಹಿವಾಟು ಇರಬೇಕು. ಇಲ್ಲಿ ನೋಡಿ ಒಂದೆರಡು ತಮಾಶೆಯ ಸಂವಾದ ಪ್ರಸಂಗಗಳಿವೆ.

ಗಝಲ್

ಗೆಳೆಯ ಆನಂದ ಥಾಕೂರ ಹಿಂದುಸ್ತಾನಿ ಗಾಯಕ ಮುಂಬೈಯಲ್ಲಿ. ಹಾಗೂ ಕವಿ, ಇಂಗ್ಲೀಷನಲ್ಲಿ ಬರೆಯುತ್ತಾನೆ. Waking in December ಅವನ ಮೊದಲ ಕವನ ಸಂಕಲನ. ಕಾವ್ಯ ಮತ್ತು ಶಬ್ದಮಳ್ಳರು ಒಂದು ನಮೂನೆ ಜನ. ಇವನೊಬ್ಬ. ನನಗಿಷ್ಟವಾದ ಅವನ ಗಝಲ್ ಎಂಬ ಕವನದ ಅನುವಾದ ಇಲ್ಲಿದೆ. ನನ್ನ ಕರಡು ಅನುವಾದಗಳನ್ನು ಈಗಾಗಲೇ ನಿಮ್ಮ ಮೇಲೆ ಹೇರಿದ್ದೇನೆ. ಸೈರಿಸಿಕೊಂಡು ಓದಿ ಬಿಡಿ.

ಪೂರ್ವ ಅಥವಾ ಅಪರ ಪ್ರಯೋಗ?

ಹಿಂದೊಮ್ಮೆ ಕರ್ಮವೀರ ವಾರಪತ್ರಿಕೆಯಾಗಿ ಹೊರಬರುತ್ತಿತ್ತು. ಒಮ್ಮಿಂದೊಮ್ಮೆಲೇ ಅದರ ಹೊರ ಪದರಲ್ಲಿ ಸತ್ತ ಕರುವಿನ ಚಿತ್ರವಿದ್ದು, ಇನ್ನು ಮುಂದೆ ಈ ಪತ್ರಿಕೆಯ ಹೊರಬರುವುದಿಲ್ಲವೆಂಬ ಅಂಕಣ ಪ್ರಕಟವಾಗಿತ್ತು. ಇಂದು ಆ ಚಿತ್ರ ನನ್ನ ಕಣ್ಮುಂದೆ ಬರುತ್ತಿದೆ.

ಚಿಟ್ಟೆ

 ಮರಾಠಿ ಹಾಗೂ ಇಂಗ್ಲೀಷಲ್ಲಿ ಬರೆಯುತ್ತಿದ್ದ ಅರುಣ್ ಕೊಲ್ಹಾಟ್ಕರ್ ಶಬ್ದಪ್ರಯೋಗದಲ್ಲಿ ಎಷ್ಟು ಜಿಪುಣರೋ ಅಷ್ಟೇ ಜಾಣರು. ಅವರ ಹಲವು ಕವನಗಳು ಮಿನಿಮಲಿಸ್ಟ ಶೈಲಿಯಲ್ಲಿವೆ. ಸಣ್ಣಪುಟ್ಟ ವಸ್ತು ವಿಷಯವಾಗಿ ಬಂದು ಅವರ ಕವನಗಳಲ್ಲಿ ಶಬ್ದಗುಣವಾಗಿ ಕಾಣುತ್ತವೆ. ಇಲ್ಲಿ ಅವರ 'ದ ಬಟರ್ ಫ್ಲೈ' ಎಂಬ ಕವನವನ್ನು ಅನುವಾದಿಸಿದ್ದೇನೆ.

ನಾವು ಕಳೆದುಕೊಂಡಿರುವ ಸೂಕ್ಷ್ಮಗಳು

ಜನವರಿ ಬಂತೆಂದರೆ ಯಾರು ಯಾರೋ ಡೈರಿ ತಂದು ಕೊಡುತ್ತಿದ್ದರು. ಅದರಲ್ಲಿ ಜಾಸ್ತಿ ಪುಟಗಳು, ಒಂದು ದಿನಕ್ಕೆ ಒಂದು ಪುಟ ಇರುವಂಥವು ಆಯ್ದು ಒಂದೋ ಎರಡೋ ನಾನು ಇಟ್ಟುಕೊಂಡು ಉಳಿದಿದ್ದನ್ನ ಯಾರು ಕೇಳಿದರೆ ಅವರಿಗೆ ಕೊಟ್ಟು ಬಿಡುತ್ತಿದ್ದೆ. ಸಾಮಾನ್ಯವಾಗಿ ನಾನು ಉಳಿಸಿಕೊಂಡವು ಕವಿತೆ ಬರೆಯಲು ಅಥವಾ ಮನಸ್ಸಿಗೆ ಹಿಂಸೆ ತಂದ ಘಟನೆಗಳನ್ನು ಕುರಿತು ಟಿಪ್ಪಣಿ ಬರೆಯಲು ಬಳಕೆಗೆ ಬರುತ್ತಿದ್ದವು. ಥಟ್ಟನೆ ಹೊಳೆದ ಒಂದೆರಡು ಸಾಲುಗಳು ಅಲ್ಲಿ ದಾಖಲಾಗುತ್ತಿದ್ದವು. ಕವಿತೆಯಾಗುವ ಭಾಗ್ಯವಿದ್ದವು ಆಗುತ್ತಿದ್ದವು. ಕೆಲವು ಸಲ ಕವಿತೆಗೆ ವಸ್ತುವಲ್ಲ ಇದು, ಪ್ರಬಂಧಕ್ಕೆ ಸಮ ಅನ್ನಿಸಿದರೆ ಅದು ಅಲ್ಲೇ ಪ್ರಬಂಧವಾಗಿ ಬೆಳೆಯುತ್ತಿತ್ತು; ಅಥವ ಕಥೆಯಾದರೆ ಕಥೆಯಾಗಿ.

ಅರುಣ ಕೊಲ್ಹಾಟ್ಕರರ ಕವನ

 ಭಾರತದಲ್ಲಿ ಇಂಗ್ಲೀಷಿನಲ್ಲಿ ಬರೆಯುವ ಕವಿಗಳಲ್ಲಿ ನನಗೆ ಮೆಚ್ಚುಗೆಯಾಗುವ ಕವಿಗಳಲ್ಲಿ ಅರುಣ್ ಕೊಲ್ಹಾಟ್ಕರ್ ಒಬ್ಬರು. ಅವರ ಕವನಗಳಲ್ಲಿ ಸಮಕಾಲೀನ ಪ್ರಜ್ನೆ ಪರಂಪರೆಯೊಂದಿಗೆ ಮುಖಾಮುಖಿಯಾಗಿ ಅದನ್ನು ತೀವ್ರ ಪರೀಕ್ಷೆಗೆ ಒಡ್ಡುತ್ತಲೇ ಆಧುನಿಕ ಮನಸ್ಸನ್ನೂ ಕೂಡ ಪರೀಕ್ಷಿಸುವ ಹಾಗೂ ಕಾವ್ಯ ಮುಖೇನ ಅಂದನ್ನು ಇಂದಲ್ಲಿ ಒಂದಾಗಿಸಿಕೊಳ್ಳುತ್ತದೆ. ಹರಿತವಾದ ಕೊಂಚವೂ ಕೊಬ್ಬಿರದ ಸಪೂರ ದೇಹದ ಕವನಗಳನ್ನು ಬರೆದಿದ್ದಾರೆ. ಅವರ ಜೆಜುರಿ ಎಂಬ ಕವನಗುಚ್ಛವು ಬಹಳ ಹೊಗಳಿಕೆಯನ್ನೂ, ತೆಗಳಿಕೆಯನ್ನೂ ಗಳಿಸಿತು. ತೆಗಳುವವರು ಆ ಪದ್ಯದಲ್ಲಿ ನಗರವಾಸಿಯೊಬ್ಬ ಜೆಜುರಿ ಎಂಬ ಬಹುಜನರಿಗೆ ಪೂಜ್ಯವಾದ ಜಾಗಕ್ಕೆ ಹೋಗಿ ಭಕ್ತರನ್ನು, ಅವರ ಭಕ್ತಿಯನ್ನು ಅವಮಾನ ಮಾಡುತ್ತಿರುವುದನ್ನು ಕಂಡಿದ್ದಾರೆ. ಹಾಗೆ ನೋಡಿದರೆ, ಈ ಕವನದಲ್ಲಿ ಹೆಚ್ಚು ವ್ಯಂಗ್ಯಕ್ಕೆ ಒಳಗಾಗುವವ ಆಧುನಿಕನೇ. ಅದಕ್ಕೆ ಉದಾಹರಣೆಯಾಗಿ  ಓಲ್ಡ ವುಮನ್ ಎಂಬ ಕವನ ನೋಡಬಹುದು. ಇದರಲ್ಲಿ ಮುದುಕಿಯೊಬ್ಬಳು ಒಂದು ಮಂದಿರವನ್ನು ತೋರಿಸುತ್ತೇನೆ, ಎಂಟಾಣೆ ಕೊಡು ಎಂದು ನಿರೂಪಕನ ಬೆನ್ನು ಬೀಳುತ್ತಾಳೆ. ಆ ನಿರೂಪಕ ಅವಳನ್ನು ನಿಷ್ಠುರವಾಗಿ ಕಾಣುತ್ತಾನೆ. ಅಷ್ಟರಲ್ಲಿ ಅವಳು ಹೇಳುವ ಒಂದು ಮಾತು ಅವನನ್ನು ನಾಚಿಕೆಗೀಡು ಮಾಡುತ್ತದೆ.
ಈ ಕವನದಲ್ಲಿನ ಜಾಣ್ಮೆ ಮಹತ್ತರವಾದ್ದು. (ನನ್ನ ಅನುವಾದ ಅದನ್ನು ಚೆನ್ನಾಗಿ ಮೂಡಿಸಿಲ್ಲ, ಮನ್ನಿಸಿ). ಖಚಿತ ರೂಪಕಗಳೊಂದಿಗೆ ಚಿಕ್ಕ ಚೊಕ್ಕ ಮೂರು ಸಾಲುಗಳ ಸ್ಟಾನ್ಜಾಗಳಲ್ಲಿ ಇದನ್ನು ಬರೆಯಲಾಗಿದೆ. ಇಲ್ಲಿ 'ತಾನು' ವನ್ನು ನೀನು ಎಂದು ದೂರಗೊಳಿಸಿ ನೋಡಲಾಗಿದೆ. ಆ 'ನೀನು'ವಿನ ಸುಳ್ಳು ಹೆಚ್ಚುಗಾರಿಕೆ ಅಂತ್ಯದಲ್ಲಿ ಚೂರುಚೂರಾಗುವ ಚಿತ್ರ ಸೊಗಸಾಗಿದೆ. ನನ್ನ ಉದ್ಧಟ ಅನುವಾದ:

ಚೌತಿಯ ಶುಭಾಶಯಗಳು

ಚೌತಿ ಹತ್ತಿರಾಗುತ್ತಿದೆ. ಶಾಪಿಂಗ್ ಮಾಲ್‌ಗಳಲ್ಲಿ, ಸಣ್ಣಪುಟ್ಟ ಅಂಗಡಿಗಳಲ್ಲಿ, ಕೊನೆಗೆ ಫೂಟ್‌ಪಾತ್‌ನ ಮೇಲೂ ಸಾಲಾಗಿ ಇರಿಸಿರುವ ಗಣೇಶನ ಮೂರುತಿಗಳು! ದಾರಿಯ ಮೇಲೆ ಹೋಗುವ ಬರುವ ಮಂದಿಯೆಲ್ಲಾ ನೋಡಿಯೇ ನೋಡುತ್ತಾರೆ ಇವನ್ನು. ದೊಡ್ಡ ದೊಡ್ಡ ಮೂರ್ತಿಗಳು ಹಿಂದಿನ ಸಾಲಿನಲ್ಲಿ; ಸಣ್ಣವು ಮುಂದೆ. ಸಡನ್ನಾಗಿ ನೋಡಿದರೆ, ಶಾಲೆಯಲ್ಲಿ ಪಾಠ ಕೇಳಲು ಕುಳಿತ ಮಕ್ಕಳಂತೆ ಭಾಸವಾಗುತ್ತದೆ. ಅಥವಾ ಗ್ರೂಪ್ ಫೋಟೋ ತೆಗೆಯಲು ಕೂರಿಸಿದಂತೆ.

ಆತ್ಮ, ಪಾಪಿ ನೆಲದ ಕೇಂದ್ರ

ಆತ್ಮ, ಪಾಪಿ ನೆಲದ ಕೇಂದ್ರ
          ****

ಪಾಪ, ಆತ್ಮ, ನನ್ನ ಈ ಪಾಪಿ ನೆಲದ ಕೇಂದ್ರವೆ
ಯಾಕೆ ಹೂತಿರುವೆ ಈ ಬಂಡುಕೋರರ ನಡುವಲ್ಲಿ 
ಯಾಕೆ ಒಳಗೊಳಗೇ ಸೊರಗುವೆ, ಕೊರಗ ಸಹಿಸುವೆ
ಹೊರಗೋಡೆಗಳನು ಸಿಂಗರಿಸಿ ಅದ್ದೂರಿ ಬಣ್ಣದಲಿ?  
ಯಾಕಿಷ್ಟು ಧಾರಾಳ ಕಾಸು ಇಷ್ಟು ತುಸುಗಾಲಕ್ಕೆ
ಪಡೆದ ಈ ಮಂಕು ಮಹಲಿಗಾಗಿ ಹೀಗೆ ವ್ಯಯಿಸುವುದು?
ಹುಳುಗಳೇ ನಾಳೆ ವಾರಸುದಾರರು ನಿನ್ನೀ ವೈಭವಕ್ಕೆ
ತಿನ್ನವೇನು ಅದನು? ಹೀಗೇ ತಾನೆ ದೇಹ ಕೊನೆಯಗುವುದು?
ಕಾರಣ ಆತ್ಮವೇ, ಬಾಳು, ಹೇರಿ ಎಲ್ಲ ನಷ್ಟ ಆಳಿನ ಮೇಲೆ
ಸವೆಯುತ್ತ ಆತ ನಿನ್ನ ಗೋದಾಮನ್ನು ಕೊಬ್ಬಿಸುವ
ಕೊಳ್ಳು ದೈವಿಕ ಮುದ್ದತು, ಮಾರಿ ಗಂಟೆಗಟ್ಟಳೆ ಕೊಳೆ
ಪೋಷಿಸು ಅಂತರಂಗವ, ಇನ್ನಿರದಂತೆ ಹೊರ ವೈಭವ;
ಮಾನವರ ಸೇವಿಸುವ ಆ ಸಾವನ್ನೇ ಸೇವಿಸುವಂತೆ
ಸಾವು ಬಂದರೆ ಒಮ್ಮೆ ಮತ್ತೆ ಸಾವೆಂದೂ ಬರದಂತೆ

ಸಹಮನಸ್ಕರ ಮದುವೆಗೆ ತಡೆಯ ತರಲಾರೆ

ಸಹಮನಸ್ಕರ ಮದುವೆಗೆ ಅಡಚಣೆಯ ತರಲಾರೆ
------ ವಿಲಿಯಂ ಶೇಕ್ಸ್ ಪಿಯರ್ (ಸುನೀತ ೧೧೬)

ಮನ್ನಿಸಿ, ನಿನ್ನೆ ಪ್ರಾಸವಿಲ್ಲದೇ ಅನುವಾದಿಸಿದ್ದೆ. ಅದನ್ನು ಬದಲಿಸಿ ಪ್ರಾಸ ಸೇರಿಸುವ ಪ್ರಯಾಸ ಇಲ್ಲಿ ಮಾಡಿದ್ದೇನೆ.