ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಿ. ಎಂ. ಶ್ರೀ ಸಾಹಿತಿ ಮತ್ತು ಸಾಮಾಜಿಕ ಮುತ್ಸದ್ದಿ ... ! !

ಬಿ. ಎಂ. ಶ್ರೀ ಸಾಹಿತಿ ಮತ್ತು ಸಾಮಾಜಿಕ ಮುತ್ಸದ್ದಿ ... ! !

ಮೈಸೂರು ಅಸೋಸಿಯೇಷನ್ ಬಂಗಾರದ ದತ್ತೀ ಹಬ್ಬದ ಪ್ರಯುಕ್ತ ಯೋಗಿಸಲಾಗಿದ್ದ ದತ್ತಿ ಉಪನ್ಯಾಸ ಶನಿವಾರ ೬ ನೇ ಜನವರಿ ೨೦೦೭ರಂದು ಸಯಕಾಲ ೬-೩೦ ಕ್ಕೆ ಶುರುವಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಶ್ಯಾಮಲ ಮತ್ತು ವೃಂದದವರಿಂದ ಬಿ. ಎಂ. ಶ್ರೀ ರವರು ಬರೆದ ಕವನಗಳ ವಾಚನವಾಯಿತು. ಮೊದಲು 'ಕರುಣಾಳು ಬಾ ಬೆಳಕೆ' ಪ್ರಾರಂಭವಾಗಿ 'ವಸಂತ ಬಂದ ಋತುಗಳ ರಾಜ' ದಿಂದ ಮುಕ್ತಾಯವಾಯಿತು. ಮೈಸೂರ್ ಅಸೊಸಿಯೇಷನ್ ಅಧ್ಯಕ್ಷರಾದ ಶ್ರೀ. ದೊರೈಸ್ವಾಮಿಯವರು ಮಾತನಾಡಿ, ದತ್ತಿ ಉಪನ್ಯಾಸಮಾಲೆಯ ೨೫ ನೇ ವರ್ಷದ ಜೊತೆಗೆ ೨೫ ವರ್ಷಗಳಿಂದ ನಡೆದುಕೊಂಡು ಬಂದ ಪತ್ರಿಕೆ, 'ನೇಸರು'ವಿನ ಪ್ರತಿಯನ್ನು ರಾಯರ ಅಮೃತಹಸ್ತದಿಂದ ಬಿಡುಗಡೆಮಾಡಲಾಯಿತು. ಮೊದಲನೆಯ ದಿನದ, ಪ್ರಾಸ್ತಾವಿಕ ಭಾಷಣವನ್ನು ಡಾ. ತಾಳ್ತಜೆ ವಸಂತ ಕುಮಾರ್ ಮಾಡಿದರು. ಎಲ್.ಎಸ್.ಶೇಷಗಿರಿರಾಯರ ಪರಿಚಯ ಹೀಗಿತ್ತು.

ಬುದ್ಧ ಸ್ವೀಕರಿಸಲೊಪ್ಪದ ಉಡುಗೊರೆ!

ಒಮ್ಮೆ ಗೌತಮ ಬುದ್ಧನ ಬಳಿಗೆ ಅವನನ್ನು ತೀವ್ರವಾಗಿ ದ್ವೇಷಿಸುವ ವ್ಯಕ್ತಿಯೊಬ್ಬ ಬಂದನಂತೆ. ಬುದ್ಧನ ಸುತ್ತ ಅನೇಕ ಶಿಷ್ಯಂದಿರು ನೆರೆದಿದ್ದ ಸಮಯ. ಬಂದಾತ ಬುದ್ಧನೊಡನೆ ಚರ್ಚೆಗಿಳಿಯಲು ಬಯಸಿದ. ಬುದ್ಧ ಆತನ ಕೋರಿಕೆಯನ್ನು ಸಂತೋಷದಿಂದ ಸಮ್ಮತಿಸಿದ. ಪ್ರಾರಂಭದಲ್ಲಿ ನೇರವಾಗಿಯೇ ಸಾಗಿದ ಚರ್ಚೆ ಕ್ರಮೇಣ ಅಡ್ಡದಾರಿ ಹಿಡಿಯಿತಂತೆ. ಚರ್ಚೆಗಿಳಿದ ವ್ಯಕ್ತಿ ಬುದ್ಧನ ಬಗೆಗಿನ ವೈಯಕ್ತಿಕ ದ್ವೇಷವನ್ನು ತನ್ನ ಮಾತುಗಳಲ್ಲಿ ವ್ಯಕ್ತಪಡಿಸಲು ಆರಂಭಿಸಿದ. ಸುಳ್ಳು ಆರೋಪಗಳನ್ನು ಹೊರಿಸಿ ಬುದ್ಧನನ್ನು ನಿಂದಿಸಿದ. ಬುದ್ಧ ಮಾತ್ರ ಸ್ವಲ್ಪವೂ ಬೇಸರಗೊಳ್ಳದೇ ಶಾಂತನಾಗಿಯೇ ಕುಳಿತಿದ್ದ. ಅ ವ್ಯಕ್ತಿ ಕೊನೆಗೆ ಅವಾಚ್ಯ ಶಬ್ದಗಳಿಂದ ಬುದ್ಧನನ್ನು ನಿಂದಿಸಲು ಪ್ರಾರಂಭಿಸಿದ. ಇದನ್ನು ಸಹಿಸಲಾರದ ಬುದ್ಧನ ಶಿಷ್ಯಂದಿರು ಆತನನ್ನು ಬಲವಂತದಿಂದ ಹೊರದಬ್ಬಲು ಪ್ರಯತ್ನಿಸಿದಾಗ, ಬುದ್ಧ ನಸುನಗುತ್ತಲೇ ಅವರನ್ನು ತಡೆದ.

ಸುಮಾರು ಸಮಯ ಬುದ್ಧನನ್ನು ನಿಂದಿಸಿದ ಆ ವ್ಯಕ್ತಿ ಕೊನೆಗೆ ತಾನಾಗಿಯೇ ಹೊರಟು ಹೋದನಂತೆ. ಬುದ್ಧ ಏನೂ ನಡೆದೇ ಇಲ್ಲವೆಂಬಂತೆ ನಗುತ್ತಾ ಕುಳಿತಿದ್ದ. ಆದರೆ ಈ ಘಟನೆಯಿಂದ ಬಹಳವಾಗಿ ನೊಂದ ಆನಂದನೆಂಬ ಆಪ್ತ ಶಿಷ್ಯ ಬುದ್ಧನನ್ನು ಕೇಳಿಯೇಬಿಟ್ಟ - "ಆತ ಸುಳ್ಳು ಆರೋಪಗಳನ್ನು ನಿಮ್ಮ ಮೇಲೆ ಹೊರಿಸಿ, ಅವಾಚ್ಯ ಶಬ್ದಗಳಿಂದ ನಿಮ್ಮನ್ನು ಅವಮಾನಿಸಿದರೂ ನೀವು ಸುಮ್ಮನೇ ಇದ್ದೀರಲ್ಲ, ಇದು ಸರಿಯೇ? ಆತನಿಗೆ ಸರಿಯಾಗಿ ಪ್ರತ್ಯುತ್ತರ ಕೊಡಬಾರದಿತ್ತೇ?".

ಪಾಬ್ಲೊ ಪಿಕಾಸೊ

ಪ್ರಖರ ಸೂರ್ಯನನ್ನು ಒಂದು ಹೊಳೆಯುವ ಹಳದಿ ಬೊಟ್ಟಿನಂತೆ ಚಿತ್ರಿಸುವ ಚಿತ್ರಕಾರರಿದ್ದಾರೆ. ಆದರೆ ಎಲ್ಲೋ ಕೆಲವು ಚಿತ್ರಕಾರರು ಮಾತ್ರ ತಮ್ಮ ಬುದ್ಧಿವಂತಿಕೆ ಮತ್ತು ಕಲಾವಂತಿಕೆಯಿಂದ ಹಳದಿ ಬೊಟ್ಟೊಂದನ್ನು ಹೊಳೆಯುವ ಪ್ರಖರ ಸೂರ್ಯನನ್ನಾಗಿ ಮಾರ್ಪಡಿಸುತ್ತಾರೆ!

ಪಾಬ್ಲೊ ಪಿಕಾಸೊ

ನನಗೆ ಯಾವ ಕೆಲಸವನ್ನು ಮಾಡಲು ಬರುವುದಿಲ್ಲವೋ ಅದನ್ನೇ ಮೊದಲು ಮಾಡಲು ಪ್ರಯತ್ನಿಸುತ್ತೇನೆ. ಈ ರೀತಿ ಮಾಡುವುದರ ಮೂಲಕ ನಾನು ಹೊಸದನ್ನು ಕಲಿಯುತ್ತಲೇ ಇರುತ್ತೇನೆ.

ಸುಭಾಷಿತ

ಒಳ್ಳೆಯ ಮಾತುಗಳಿಂದ ಎಲ್ಲರಿಗೂ ಸಂತೋಷವಾಗುತ್ತದೆ.
ಹಾಗಾಗಿ ಯಾವಾಗಲೂ ಒಳ್ಳೆಯ ಮಾತುಗಳನ್ನೇ ಆಡಬೇಕು.
ಮಾತಿಗೇನಾದರೂ ಬಡತನ ಉಂಟೇ?