ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಮೊದಲ ಬ್ಲಾಗು !

ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಮನುಷ್ಯಳಾದ ಮೇಲೆ ಬ್ಲಾಗೊಂದು ಇರಬೇಕು ಎಂದು. ಈಗ ನನ್ನ ಬ್ಲಾಗಿನ ಮೊದಲ ಬರಹ ಬರೆಯುತ್ತಿದ್ದೇನೆ. ಮುಂದುವರೆಸಲು ಪ್ರಯತ್ನ ಮಾಡುತ್ತೇನೆ. ಪತ್ರಿಕೆಗಳಿಗೆ ಬರೆಯುವುದು ಒಂದು ರೀತಿಯಿಂದ ಸುಲಭ. ಅದಕ್ಕೊಂದು ಕೊನೆ ದಿನಾಂಕ ಇರುತ್ತೆ. ಶತಾಯ ಗತಾಯ ಅದರೊಳಗೇ ಬರೆದು ಮುಗಿಸಬೇಕು.

ನನ್ನ ಅಂತರ್ಜಾಲ ಪುಟ ನೋಡಿ ನಿಮ್ಮ ಅನುಭವ ತಿಳಿಸಿ

ನ್ನ ಅಂತರ್ಜಾಲ ಪುಟ ಕನ್ನಡ ಮತ್ತು ಇಂಗ್ಲಿಷ್ ನಲ್ಲಿದೆ. ಅದನ್ನು ಇನ್ನೂ ಚೆಂದ ಮಾಡಲು ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದೇನೆ.

ನಿಮ್ಮ ಅನಿಸಿಕೆಗಳನ್ನ ನನಗೆ ತಿಳಿಸಿ. ನನ್ನ ಅಂತರ್ಜಾಲದ ಹೆಸರು belaku.net

 

ಪ್ರಶ್ನೆ - ಉತ್ತರ

ಧಿಗ್ಗನೆ ತಿರುಗಿ ಕೇಳಿದ ಪ್ರಶ್ನೆಗೆ
ಉತ್ತರ ಏನು ನೀಡಲಿ
``ಬೇಗ ಬೇಗ'' ಎಂದು ಒತ್ತಾಯಿಸಿದರೆ
ಮತ್ತಿನ್ನೇನು ಹೇಳಲಿ

ಯಾಕೀ ಪ್ರಶ್ನೆ? ನಾನೇ
ಕೇಳಿದೆ ಮರು ಪ್ರಶ್ನೆ
ಪ್ರಶ್ನೆಗೆ ಪ್ರಶ್ನೆ ಅಲ್ಲ ಉತ್ತರ
ನನ್ನ ಪ್ರಶ್ನೆಗೇನು ಉತ್ತರ
ಮತ್ತದೇ ಪ್ರಶ್ನೆ

ನೀನು ಯಾರು?
ಅರೇ ನಾನು ನಾನೇ ಇನ್ಯಾರು ಆಗಲು ಸಾಧ್ಯ?
ಪ್ರಶ್ನೆ ಬೇಡ ಬೇಕು ಉತ್ತರ

(ಅಕ್ಷರ) ದುಃಖ ನಿವೇದನೆ.

ಮನದೊಳಗೆ ಮೊನೆಯಾಡಿಸುವ ಹಳೆ ನೆನಪಿನ ಮುಳ್ಳಿಗೆ, ಕೇಳುತ್ತಿರುವ ಗಝಲ್ ಭಾವಗಳು ಬಲ ತುಂಬಿ, ಹೀಗೊಂದು (ಅಕ್ಷರ) ದುಃಖ ನಿವೇದನೆ.

ಹಚ್ಚಿದ ದೀಪ ಆರಲೇಬೇಕು,
ಮುಡಿದ ಹೂವು ಬಾಡಲೇಬೇಕು,
ಮತ್ತೆ ಮತ್ತೆ ನೆನಪಾಗಿಯೂ
ನಿನ್ನ ಮರೆಯಲೇಬೇಕು..

ಒಂಟಿ ನಾನು
ನೀನು ಬರುವ ಮುಂಚೆ;
ಒಂಟಿ ನಾನು
ನೀನು ಹೋದ ಮೇಲೆ ಕೂಡಾ;
ನೀನು ಬಂದರೇನು, ಬರದಿದ್ದರೇನು..

ಮೂರ್ತಿ ಅನಾವರಣ, ಅಸೂಯೆ ಅನಂತ !

ಮೂರ್ತಿ ಅನಾವರಣ, ಅಸೂಯೆ ಅನಂತ

                                                                                                          - ವಾಙ್ಮಯಿ, ಬಿಜಾಪುರ.

ಶಿಲ್ವೆಪುರ

ಬೆಂಗಳೂರಿನಿಂದ ಹೆಸರಘಟ್ಟಕ್ಕೆ ಹೋಗುವ ದಾರಿಯಲ್ಲಿ ಬಾಣಾವರ ದಾಟಿ ತರಬನಹಳ್ಳಿಯ ಬಳಿ ಬಲಕ್ಕೆ ತಿರುಗಿ ಮೂರು ಕಿಲೋಮೀಟರು ಕ್ರಮಿಸಿದರೆ ಸಿಗುವ ಊರು ಶಿಲ್ವೆಪುರ. ಚಿಕ್ಕಬೆಟ್ಟಳ್ಳಿ ಮಾರ್ಗವಾಗಿ ಶಿವಕೋಟೆಗೆ ಸಾಗುವ ರಸ್ತೆಯಲ್ಲಿ ಬ್ಯಾಲದಕೆರೆ ಬಳಿ ಎಡಕ್ಕೆ ಮೂರು ಕಿಲೋಮೀಟರು ನಡೆದರೂ ಈ ಊರು ಸಿಗುತ್ತದೆ. ಈ ಊರಿನ ಇತಿಹಾಸ ಕೇವಲ ೧೨೦ವರ್ಷಗಳ ಈಚಿನದು.

ದೊರೆಸಾನಿಪಾಳ್ಯ (ಅಮಲೋದ್ಭವಿ ನಗರ)

೧೮೭೬ ರಿಂದ ೧೮೭೮ರವರೆಗೆ ತಲೆದೋರಿದ ಭೀಕರ ಕ್ಷಾಮಕ್ಕೆ ಸಾವಿರಾರು ಜನರು ಮರಣವನ್ನಪ್ಪಿ, ಅನೇಕ ಸಾವಿರ ಜನರು ತಮ್ಮ ಹಳ್ಳಿಗಳನ್ನು ತೊರೆದು ಉದರ ಪೋಷಣೆಗಾಗಿ ಪಟ್ಟಣಗಳನ್ನು ಆಶ್ರಯಿಸಬೇಕಾಯಿತು.