ಆಬ್ರಹಂ ಲಿಂಕನ್
ನನಗೊಂದು ಮರ ಕಡಿಯುವ ಕೆಲಸ ಕೊಟ್ಟು, ಎಂಟು ಘಂಟೆಗಳ ಕಾಲಾವಕಾಶ ಇತ್ತರೆ, ಆ ಎಂಟರಲ್ಲಿ ಆರು ಘಂಟೆಗಳ ಕಾಲ ನಾನು ನನ್ನ ಕೊಡಲಿಯನ್ನು ಹರಿತಗೊಳಿಸುವುದರಲ್ಲಿ ವಿನಿಯೋಗಿಸುತ್ತೇನೆ.
ನನಗೊಂದು ಮರ ಕಡಿಯುವ ಕೆಲಸ ಕೊಟ್ಟು, ಎಂಟು ಘಂಟೆಗಳ ಕಾಲಾವಕಾಶ ಇತ್ತರೆ, ಆ ಎಂಟರಲ್ಲಿ ಆರು ಘಂಟೆಗಳ ಕಾಲ ನಾನು ನನ್ನ ಕೊಡಲಿಯನ್ನು ಹರಿತಗೊಳಿಸುವುದರಲ್ಲಿ ವಿನಿಯೋಗಿಸುತ್ತೇನೆ.
ಅಗತ್ಯವಿದ್ದಲ್ಲಿ ನಾನು ನಿಧಾನಕ್ಕೆ ನಡೆದೇನೆಯೇ ಹೊರತು ಹಿಂದಕ್ಕೆ ಮಾತ್ರ ಖಂಡಿತ ನಡೆಯುವುದಿಲ್ಲ.
ಸ್ನೇಹಿತರನ್ನಾಗಿ ಮಾಡಿಕೊಳ್ಳುವುದರ ಮೂಲಕ ಕೂಡಾ ನಮ್ಮ ಶತ್ರುಗಳನ್ನು/ವೈರಿಗಳನ್ನು ನಾಶಮಾಡಬಹುದಲ್ಲವೇ?!
ನೆನಪಿಡಿ: ಯಶಸ್ವಿಯಾಗೇ ಆಗುತ್ತೇನೆಂಬ ನಿಮ್ಮ ವೈಯಕ್ತಿಕ ದೃಢನಿರ್ಧಾರ ನಿಮ್ಮ ಯಶಸ್ಸಿನಲ್ಲಿ ಬೇರೆಲ್ಲದಕ್ಕಿಂತ ಪ್ರಮುಖ ಪಾತ್ರ ವಹಿಸುತ್ತದೆ.
ಎಲೈ ವೈದ್ಯರಾಜನೇ, ನಿನಗೆ ನಮಸ್ಕಾರ. ನೀನು ಯಮರಾಜನ ಸೋದರನಿದ್ದಂತೆ!
ಯಮರಾಜನು ಕೇವಲ ಪ್ರಾಣವನ್ನು ಮಾತ್ರ ಅಪಹರಿಸುತ್ತಾನೆ;
ನೀನು ಪ್ರಾಣದ ಜತೆಯಲ್ಲಿ ಹಣವನ್ನೂ/ಸಂಪತ್ತನ್ನೂ ಕೂಡಾ ಅಪಹರಿಸುತ್ತೀಯಲ್ಲ!
(ಅನಗತ್ಯವಾಗಿ ಜನರ ಹಣ ಸುಲಿಗೆ ಮಾಡುವ ವೈದ್ಯರನ್ನು ಹಾಸ್ಯದ ರೂಪದಲ್ಲಿ ಟೀಕಿಸಲಾಗಿದೆ)
ನಿನ್ನೆ ಎ.ಎನ್.ಮೂರ್ತಿರಾಯರು ಬರೆದ ಪಾಶ್ಚಾತ್ಯ ಸಣ್ಣ ಕಥೆಗಳು ಎಂಬ ಪುಸ್ತಕ ಓದಿದೆ. ಅದರಲ್ಲಿರುವ ಏಳು ಕಥೆಗಳಲ್ಲಿ ಮೂರು ಬಹಳೇ ಚೆನ್ನಾಗಿವೆ. ಅವುಗಳಲ್ಲೆರಡನ್ನು ಬೇರೆಡೆ ಈಗಾಗಲೇ ಓದಿದ್ದೆ. ಅವು ಬಹಳ ಚೆನ್ನಾಗಿದ್ದವು . ಅವು ಈ ಪುಸ್ತಕದಲ್ಲಿ ಸಿಕ್ಕವು.
ಇತ್ತೀಚಿನ ಕನ್ನಡ-ಇಂಗ್ಲಿಷ್ ಕಲಿಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೆ ನನ್ನ ತಲೆಯಲ್ಲಿ ಎರಡು ಭಾಷೆಗಳ ಕಲಿಕೆಯ ಬಗ್ಗೆ ಕೆಲವು ವಿಚಾರಗಳು ಹಾದು ಹೋದವು.
ಹುಟ್ಟಿದ ಕೆಲವು ದಿನಗಳ ನಂತರ ಮಗುವು ತನ್ನಿಂತಾನೆ ಉಚ್ಚಾರ ಮಾಡುವ ಮೊದಲ ಅಕ್ಷರ "ಅ" ಹಾಗು ಕನ್ನಡದ ಅಕ್ಷರಮಾಲೆಯಲ್ಲಿರುವ ಮೊದಲ ಅಕ್ಷರ ಕೂಡ "ಅ" ಮತ್ತು "ಆ". ಇದರಿಂದ ಕನ್ನಡ ಭಾಷೆ ಮಗುವಿಗೆ ತುಂಬ ಸ್ವಾಭಾವಿಕವಾಗಿದೆ. ವಿದ್ಯಾಭ್ಯಾಸ ಪ್ರಾರಂಭವಾದ ಮೇಲೆ ಮಕ್ಕಳು ಮೊದಲು ಸ್ವರಾಕ್ಷರಗಳ ಉಚ್ಚಾರ ಕಲಿಯುವುದರಿಂದ ಹಾಗು ಅವುಗಳ ಉಚ್ಚಾರ ಸರಳ- ಸುಲಭವಾಗಿರುವುದರಿಂದ, ಕನ್ನಡ ಮೊದಲು ಕಲಿಯಲು ಬಹಳ ಅನುಕೂಲಕರ ಹಾಗು ಮಕ್ಕಳ ಕಲಿಕೆಯ ಕ್ರಮಕ್ಕೆ ಪೂರಕ.
* ಮಕ್ಕಳು ಕನ್ನಡದಲ್ಲಿ ಮೊದಲು ಸ್ವರಾಕ್ಷಾರಗಳನ್ನು ಕಲಿಯುವುದು ನಂತರ ವ್ಯಂಜನ ತದನಂತರ ಅವರ್ಗೀಯ ವ್ಯಂಜನ, ಹಾಗಾಗಿ ಕಲಿಯುವ ಅಕ್ಷರಗಳ ಈ ಸರಣಿ ಸರಳ ಹಾಗು ಸುಲಭ ಉಚ್ಚಾರಣೆಯಿಂದ ಮೊದಲ್ಗೊಂಡು ಕಷ್ಟ ಉಚ್ಚಾರವಾಗುತ್ತ ಹೋಗುತ್ತದೆ.
* ಮೊದಲು ಸುಲಭ ಉಚ್ಚಾರ ಮಾಡಬಹುದಾದ ಸ್ವರಗಳು( ಅ, ಆ, ಇ, ಈ, ಉ, ಊ, ಋ, ೠ, ಎ, ಏ, ಐ, ಒ, ಓ, ಔ, ಅಂ, ಅಃ). ನಂತರ ಕಷ್ಟವಾದಂತಹ 'ಕ' ವರ್ಗ, 'ಚ' ವರ್ಗ, 'ಟ' ವರ್ಗ, 'ತ' ವರ್ಗ, 'ಪ' ವರ್ಗ ನಂತರ ಅವರ್ಗೀಯ ವ್ಯಂಜನ( ಯ, ರ, ಲ, ವ, ಶ, ಸ, ಹ, ಳ)
* ಇಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಿದರೆ ಒಂದು ವರ್ಗದ ಅಕ್ಷರಗಳ ಉಚ್ಚಾರದ ಅಂತರ ಬಹಳ ಕಡಿಮೆ ಇದೆ. ಉದಾ: 'ಕ' ಮತ್ತು 'ಖ' ಎರಡು 'ಕ' ವರ್ಗಕ್ಕೆ ಸೇರಿವೆ. ಆದರೆ ಇವುಗಳ ಉಚ್ಚಾರದಲ್ಲಿರುವ ಅಂತರ ಕೇವಲ ಉಸಿರಿಗೆ ಒತ್ತು ಕೊಡುವುದು.
* 'ಕ' ವರ್ಗದ ಅಕ್ಷರಗಳು ಉಚ್ಚಾರಣೆಯ ದೃಷ್ಟಿಯಿಂದ 'ಚ' ವರ್ಗಕ್ಕಿಂತ ಸುಲಭವಾಗಿವೆ.
* ಙ, ಞ - ಈ ಅಕ್ಷರಗಳ ಉಚ್ಚಾರಣೆ ಕಠಿಣವಾಗಿದೆಯಾದರೂ ಇವು ಮೊದಲು ಕಲಿಯುವ ಪದಗಳಲ್ಲಿ ಬರುವುದಿಲ್ಲ( ಉದಾ: ಅರಸ, ಆಡು, ಇಲಿ, ಈಶ)
ನಿಮ್ಮ ಕೃತಿಗಳಿಂದ ನೀವು ಯಾವ ರೀತಿಯ ವ್ಯಕ್ತಿಯೆಂದು ತಿಳಿಯುತ್ತದೆ. - ಥಾಮಸ್ ಆಲ್ವಾ ಎಡಿಸನ್
ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಸಲೆಂದೇ ಇರುವ ವ್ಯಾಯಾಮಶಾಲೆ. - ಸ್ವಾಮಿ ವಿವೇಕಾನಂದ
ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿರುವ ದೈವೀ ಶಕ್ತಿಯನ್ನು ಪ್ರಕಟಗೊಳಿಸಿ, ಪ್ರಕಾಶಿಸುವಂತೆ ಮಾಡುವುದೇ ನಿಜವಾದ ಧರ್ಮ!