ವಿಜ್ಞಾನಿಗಳ ನುಡಿಮುತ್ತುಗಳು
ಏನೊಂದೂ ತಪ್ಪು ಮಾಡದವನು ಹೊಸದೇನನ್ನೂ ಪ್ರಯತಿಸಿರುವುದಿಲ್ಲ! - ಆಲ್ಬರ್ಟ್ ಐನ್ಸ್ಟೈನ್
ಏನೊಂದೂ ತಪ್ಪು ಮಾಡದವನು ಹೊಸದೇನನ್ನೂ ಪ್ರಯತಿಸಿರುವುದಿಲ್ಲ! - ಆಲ್ಬರ್ಟ್ ಐನ್ಸ್ಟೈನ್
ಹಳೆಯ ಗಾದೆ: ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ.
ಹೊಸ ರೂಪ: ಲಾಲೂ ಕೈಯಲ್ಲಿ ಬಿಹಾರ ಕೊಟ್ಟಂತೆ.
ಬೊಗಳೂರು, ಜ.2- KBC (ಕೌನ್ ಬನೇಗಾ ಕಾಮಿಡಿಪತಿ) ಸ್ಪರ್ಧೆಯಲ್ಲಿ ಲಾಕ್ ಮಾಡುವವರು ಬದಲಾದ ಹಿನ್ನೆಲೆಯಲ್ಲಿ ದೇಶದಲ್ಲಿ ವಿಚಿತ್ರ ವಿದ್ಯಮಾನಗಳೂ ನಡೆಯುತ್ತಿದ್ದು, ಕೆಬಿಸಿಯಲ್ಲಿ ಕೇಳಬಹುದಾದ ಪ್ರಶ್ನೆ ಪತ್ರಿಕೆ ಬಯಲಾಗಿದೆ. ಈ ಪ್ರಶ್ನೆ ಪತ್ರಿಕೆ ಬೊಗಳೆ ರಗಳೆ ಕೈಗೆ ಸಿಕ್ಕಿದ್ದು, ಅದನ್ನು ಓದುಗರಿಗಾಗಿ ಇಲ್ಲಿ ಬಯಲು ಮಾಡಲಾಗುತ್ತಿದೆ. ( http://bogaleragale.blogspot.com/ )
ಕರ್ಣಾಟಕ ಸಂಘ, ಮಾಹಿಮ್, ಮುಂಬೈ ನವರು (ಕರ್ಣಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ) ೬, ಜನವರಿ ಯಿಂದ ೧೬ ಜನವರಿ ೨೦೦೭ ರ ತನಕ, ಪ್ರತಿದಿನ ಸಂಜೆ ೬-೩೦ ಕ್ಕೆ ನಾಟಕ ಪ್ರದರ್ಶನ ಆಯೋಜಿಸುತ್ತಿದ್ದಾರೆ. ನಿಮಗೆಲ್ಲರಿಗೆ ಆತ್ಮೀಯ ಆಮಂತ್ರಣ !
ಪ್ಲಾನೆಟ್ ಕನ್ನಡ ಹೊಸ ರೂಪದಲ್ಲಿ ನಿಮ್ಮೆಲ್ಲರ ಮುಂದಿದೆ. ಹಲವು ದಿನಗಳಿಂದ ಈ ಮಾರ್ಪಾಡು ಬಾಕಿ ಇತ್ತು.
ನೋಡಿ:
[:http://planet.sampada.net/]
ನಿಮ್ಮ [:http://sampada.net/contact|ಅನಿಸಿಕೆ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ತಪ್ಪದೆ ಕಳುಹಿಸಿ] - ಇನ್ನೂ ಉತ್ತಮಪಡಿಸುವಲ್ಲಿ ಬಹಳ ಸಹಾಯವಾಗುವುದು.
ಕಂಪ್ಯೂಟರ್ ಬಳಸಿ ಸಹಭೋಜನ!
ಕುಟುಂಬಿಕರ ಜತೆ ಸಹಭೋಜನ ಮಾಡುವುದು ವೃದ್ಧರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುವುದು ನಿಮಗೆ ತಿಳಿದಿರಬಹುದು.ಆದರೆ ಈಗಿನ ಕಾಲಘಟ್ಟದಲ್ಲಿ ಹೆತ್ತವರು ಮತ್ತು ಮಕ್ಕಳು ಬೇರೆ ಬೇರೆ ಕಡೆ ವಾಸವಾಗಿರಬೇಕಾದ ಪರಿಸ್ಥಿತಿಯಿರುವುದು ಸಾಮಾನ್ಯ. ಹೀಗಿದ್ದರೂ ಅವರುಗಳು ಸಹಭೋಜನದ ಅನುಭವ ಪಡೆಯಬಹುದು.ಅಕ್ಸೆಂಚುವರ್ ಎಂಬ ಕಂಪೆನಿ ಜನರಿಗೆ ಸಹಭೋಜನ ಅನುಭವ ಪಡೆಯುವ ಕಂಪ್ಯೂಟರ್ ಆಧಾರಿತ ವ್ಯವಸ್ಥೆಯನ್ನು ಸಿದ್ಧಗೊಳಿಸಿದೆ. ಟಿವಿ,ಕಂಪ್ಯೂಟರ್,ಬ್ರಾಡ್‌ಬ್ರಾಂಡ್ ಸಂಪರ್ಕ ಮತ್ತು ವೆಬ್‌ಕ್ಯಾಮರಾದಂತಹ ಸಾಧನ ಇದಕ್ಕೆ ಬೇಕು.ವೃದ್ಧರು ಅಡುಗೆ ಮಾಡಿ, ಊಟಕ್ಕೆ ಸಿದ್ಧತೆ ನಡೆಸುತ್ತಿರುವಂತೆ, ಊಟದ ಕೋಣೆಯಲ್ಲಿಟ್ಟಿರುವ ಕ್ಯಾಮರಾದಿಂದ ಇದನ್ನರಿಯುವ ಕಂಪ್ಯೂಟರ್ ತಂತ್ರಾಂಶವೊಂದು ಅಂತರ್ಜಾಲ ಮೂಲಕ, ವೃದ್ಧನ ಕುಟುಂಬಿಕರಿಗೆ ಸೂಚನೆ ನೀಡುತ್ತದೆ.ಟಿವಿ ಅಥವಾ ಕಂಪ್ಯೂಟರ್ ಮೂಲಕ ಇದನ್ನರಿಯುವ ಕೌಟುಂಬಿಕರು,ತಮ್ಮ ಟಿವಿ ಚಾನೆಲ್ ಒಂದರಲ್ಲಿ ತಮ್ಮ ಹೆತ್ತವರು ಊಟಕ್ಕೆ ಅಣಿಯಾಗುತ್ತಿರುವುದನ್ನು ಟಿವಿ ಪರದೆಯಲ್ಲಿ ವೀಕ್ಷಿಸುತ್ತಾ, ತಾವೂ ಊಟಕ್ಕೆ ತೊಡಗಬೇಕು. ಅವರ ಚಿತ್ರಗಳು ಹಿರಿಯರ ಟಿವಿ ತೆರೆಯಲ್ಲಿ ಮೂಡತೊಡಗುತ್ತದೆ. ಪರಸ್ಪರರ ಮಾತುಗಳೂ ಕೇಳಿಸುವ ಧ್ವನಿ ವ್ಯವಸ್ಥೆಯೂ ಇದೆ.ಮಾತನಾಡುತ್ತಾ ಊಟ ಮಾಡಬಹುದು. ಏಕಾಂಗಿಯಾಗಿ ಊಟ ಮಾಡುವುದಕ್ಕಿಂತ ಹೆಚ್ಚು ಊಟವನ್ನು ಹಿರಿಯರು ಮಾಡುವುದು ಬಹುತೇಕ ನಿಶ್ಚಿತ!
ಕಂಪ್ಯೂಟರ್ ಬಳಸಲು ಅಂಜುವವರಿಗೂ ಅನುಕೂಲಕರವಾದ ರೀತಿ ಈ ವ್ಯವಸ್ಥೆ ಇರುವುದು ಕಂಪ್ಯೂಟರ್ ಸಾಕ್ಷರರಲ್ಲದವರಿಗೂ ಅನುಕೂಲ ಒದಗಿಸಲಿದೆ. ಪ್ರತಿ ಮನೆಗೂ ಈ ವ್ಯವಸ್ಥೆ ಅಳವಡಿಸಲು ಒಂದು ಸಾವಿರ ಡಾಲರ್ ವರೆಗೆ ಖರ್ಚು ಬರಬಹುದು ಎಂಬ ಅಂದಾಜಿದೆ.
ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯ ಮತ್ತು ಮೈಸೂರ್ ಅಸೋಸಿಯೇಷನ್ ಮುಂಬೈ ಇವರ ಅಶ್ರಯದಲ್ಲಿ
ನಾವು ಏನನ್ನು ಸಾಧಿಸುವ ಸಾಧ್ಯತೆಯಿರುತ್ತದೆಯೋ ಅವೆಲ್ಲವನ್ನೂ ಸಾಧಿಸಿದಲ್ಲಿ, ನಾವೇ ಆಶ್ಚರ್ಯಚಕಿತರಾಗುತ್ತೇವೆ!
ಮನುಷ್ಯ ತಾನು ಏನು ಯೋಚಿಸುತ್ತಾನೋ ಅದೇ ಆಗಿ ಬಿಡುವ ಸಂಭವಗಳೇ ಹೆಚ್ಚು. ನನ್ನಿಂದ ಇದು ಅಸಾಧ್ಯ ಎಂದು ನನಗೆ ನಾನೇ ಪದೇ ಪದೇ ಹೇಳಿಕೊಂಡಲ್ಲಿ, ಕೊನೆಗೆ ನಾನು ಆ ಕಾರ್ಯದಲ್ಲಿ ವಿಫಲನಾಗುವ ಸಂಭವವೇ ಹೆಚ್ಚು. ಇದಕ್ಕೆ ವ್ಯತಿರಿಕ್ತವಾಗಿ, ನಾನಿದನ್ನು ಮಾಡಬಲ್ಲೆ ಎಂಬ ವಿಶ್ವಾಸ ತಳೆದರೆ, ಮೊದಲು ಆ ಕಾರ್ಯವನ್ನು ಸಾಧಿಸಲು ಶಕ್ತಿ ಇಲ್ಲದೇ ಹೋದರೂ ಕ್ರಮೇಣ ಆ ಶಕ್ತಿ ಮೈಗೂಡುತ್ತದೆ.
ನಾವು ಮಾಡುವ ಕೆಲಸದ ಗುಣಮಟ್ಟ ದೇವರನ್ನು ಮೆಚ್ಚಿಸುವುದೇ ಹೊರತು ಕೆಲಸದ ಗಾತ್ರವಲ್ಲ. - ಮಹಾತ್ಮ ಗಾಂಧಿ