ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಯೂರದಲ್ಲಿ ತೇಜಸ್ವಿ

ನಮಸ್ತೆ,

 ಈಗಾಗಲೇ ತಿಳಿದಿಲ್ಲದವರಿಗೆ..

 ಈ ಬಾರಿಯ ಮಯೂರ ತೇಜಸ್ವಿಯವರ ಮೇಲೆ ವಿಶೇಷ ಸಂಚಿಕೆ ತಂದಿದೆ. ಒಳ್ಳೆಯ ಲೇಖನಗಳಿವೆ. ಆಸಕ್ತರು ಓದಬಹುದು..

ವಂದನೆಗಳು,

 ವಸಂತ್ ಕಜೆ

ಮಾಹಿತಿ ತಂತ್ರಜ್ಞಾನ, ಕನ್ನಡ ಮತ್ತು ಶಿಕ್ಷಣ ಬಗ್ಗೆ ಅರ್ಧ ದಿನದ ಕಾರ್ಯಾಗಾರ

ಶೈಕ್ಷಣಿಕ ಕ್ಷೇತ್ರದಲ್ಲಿ ಗಣಕಗಳ, ಅದರಲ್ಲೂ ಕನ್ನಡ ಭಾಷೆಯ ಮೂಲಕ ಬಳಸುವುದರಲ್ಲಿ ಮೂರು ವಿಭಾಗಗಳಿವೆ. ಗಣಕ ಎಂದರೇನು ಎಂಬುದನ್ನು ಕನ್ನಡ ಭಾಷೆಯಲ್ಲಿ ತಿಳಿಸುವುದು ಮೊದಲನೆಯದು. ಕನ್ನಡ ಭಾಷೆಯಲ್ಲಿ ಗಣಕಾಧಾರಿತ ಶಿಕ್ಷಣವನ್ನು ಬಳಸಿ ಬಹುಮಾಧ್ಯಮದ (multimedia) ಕಲಿಕಾರಂಜನೆಯ (edutainment) ಮೂಲಕ ಕನ್ನಡ, ವಿಜ್ಞಾನ, ಗಣಿತ, ಇತ್ಯಾದಿಗಳನ್ನು ಹೇಳಿಕೊಡುವುದು ಎರಡನೆಯದು.

ಸಮುದ್ರಕ್ಕೆ ಕಬ್ಬಿಣದ ಪುಡಿ ಸೇರಿಸಿದರೆ, ವಾತಾವರಣ ಶುದ್ಧ?(ಇ-ಲೋಕ-26)(10/6/2007)

 ಇದೇನು ಮ್ಯಾಜಿಕ್ ಎನು ಎಂದು ಹುಬ್ಬೇರಿಸದಿರಿ. ಹೌದು ಕಬ್ಬಿಣದ ಸೂಕ್ಷ್ಮ ಪುಡಿಯನ್ನು ಸಾಗರಕ್ಕೆ ಸೇರಿಸಿದರೆ, ಸಮುದ್ರದ ನೀರಿನಲ್ಲಿರುವ ಪಾಚಿ ಬೆಳವಣಿಗೆ ಅಧಿಕವಾಗುತ್ತದೆ. ಈ ಪಾಚಿ ಸಸ್ಯಕ್ಕೆ ಒಂದು ಸ್ವಾರಸ್ಯಕರ ಗುಣವಿದೆ. ಇದು ಸೂರ್ಯಪ್ರಕಾಶವಿದ್ದಾಗ, ಕಾರ್ಬನ್ ಡಯಾಕ್ಸೈಡ್ ಅನಿಲವನ್ನು ಹೀರಿಕೊಳ್ಳುತ್ತದೆ.

ಬದುಕು ಜಟಕಾಬಂಡಿಯ ನಾಲ್ಕು ಗಾಲಿಗಳು

ಜಿ ಟಿ ನಾರಾಯಣ ರಾವ್ ಅವರು ವೈಜ್ಞಾನಿಕ ಮನೋಭಾವನೆ ಬಗ್ಗೆ, ನಾಸ್ತಿಕತೆ- ಅಸ್ತಿಕತೆ ಬಗ್ಗೆ ಬರೆದ ಲೇಖನ ಇಲ್ಲಿದೆ: ಲೇಖನ ಉದಯವಾಣಿಯದ್ದು.

http://68.178.224.54/udayavani/special.asp?contentid=423256&lang=2

ಯಕ್ಷಗಾನವಾಗಿ "ಮುಂಗಾರುಮಳೆ"

"ಮುಂಗಾರುಮಳೆ" ಚಲನಚಿತ್ರವನ್ನು ಯಕ್ಷಗಾನ ಪ್ರಸಂಗವಾಗಿ ಆಡಿ ತೋರಿಸುವ ಪ್ರಯೋಗ ಇಂದು ಉಡುಪಿಯಲ್ಲಿ ನಡೆಯಲಿದೆ. ಚಲನಚಿತ್ರದ ಪದ್ಯಗಳ ಜತೆ ಬೇಂದ್ರೆಯವರ ಕವನವೂ ಬಳಕೆಯಗಲಿದೆ.
ವಿವರಗಳಿಗೆ ವಿಕಾಸ ನೇಗಿಲೋಣಿಯವರ ಲೇಖನ "ಉದಯವಾಣಿ"ಯಲ್ಲಿ:
http://68.178.224.54/udayavani/special.asp?first=y&contentid=423246&lang=2

ಮದ್ದು

ನಿನ್ನ ಕುರುಡಿಗೆ
ನನ್ನ ಸೊಂಟ, ಎದೆ, ತುಟಿ, ಕಣ್ಣು, ಹುಬ್ಬು, ಹೆರಳು
ಇವುಗಳದೇ ಸಂಭ್ರಮ

ನನ್ನ ದಿಟ್ಟ ಹೆಜ್ಜೆ ನಡುವಿನ ಅನುಮಾನ
ಮತ್ತು ಗಟ್ಟಿ ದನಿಯಾಳದ ನಡುಕ
ನಿನ್ನ ಸಂಭ್ರಮಕ್ಕೆ ಮದ್ದರೆಯುತ್ತವೆ
ಮೌನವಾಗಿ.

ಪ್ರೆಸೆಂಟ್ ಸಾರ್ ಎನ್ನೋ ಬದಲು ಪ್ರೆಸಿಡೆಂಟ್ ಸಾರ್ ಅಂದ ಹುಡುಗ ಈಗ ಏನಾಗಿದ್ದಾನೆ?

ತಿರುಮಲೇಶ್ವರ ಭಟ್ ಅವರು ವಿಕದಲ್ಲಿ ಒಬ್ಬ ಹುಡುಗನ ಬಗ್ಗೆ ಬರೆದಿದ್ದಾರೆ. ಹಳ್ಳಿಯ ಆ ಹುಡುಗ ತರಗತಿಯಲ್ಲಿ ಹಾಜರಿ ಹೇಳುವಾಗ "ಪ್ರೆಸೆಂಟ್ ಸಾರ್" ಅನ್ನದೆ ತಪ್ಪಿ "ಪ್ರೆಸಿಡೆಂಟ್ ಸಾರ್" ಅಂದು ಸಹಪಾಠಿಗಳಿಂದ ಗೇಲಿಗೀಡಾದ. ಅವಮಾನದಿಂದ ಉಗ್ಗುವಿಕೆ ಶುರುವಾಯಿತು. ಯಾರು ಆ ಹುಡುಗ? ಈಗ ಏನಾಗಿದ್ದಾನೆ?
http://vijaykarnatakaepaper.com/pdf/2007/06/08/20070608a_006101002.jpg

ಎಲ್ಲಿದೆ ಮುಕ್ತಿ

ಎಲ್ಲಿದೆ ಮುಕ್ತಿ
ಬೆಟ್ಟದ ತಪ್ಪಲಲ್ಲೋ,
ಹೆಣ್ಣಿನ ನಿತಂಬಗಳಲ್ಲೋ?
ಯವ್ವನ ಪೂರ್ತಿ ಇದನ್ನೇ ಕೇಳುತ್ತದೆ!
(ಮುಪ್ಪಿಗೆ ಉತ್ತರಿಸುವ ಶಕ್ತಿಯೇ ಇಲ್ಲ!!)

ಬೆಟ್ಟವಲೆದರೂ, ಕಾಡು-ಮೇಡು
ಸುತ್ತಿದರೂ ಭಗವಂತನ ಪತ್ತೆಯಿಲ್ಲ.

ಜೀವ ಕೇಳುವುದಿಲ್ಲ,
ಹುಲ್ಲುಕಡ್ಡಿ ಜೀವ ತಳೆದು ಹೆಣ್ಣಾಗುವುದಾದರೆ
ಈ ಹುಲ್ಲು ಕಡ್ಡಿಯ ಮೇಲಿನ ಪ್ರೇಮ
ಅದೆಂತು ಆಗಸಕ್ಕೇರಬಹುದು!

ಪತ್ತನಾಜೆ ಪದದ ಅರ್ಥ ಹೇಳಿ!

ಪತ್ತನಾಜೆ ಶಬ್ದವನ್ನು ಕೇಳಿದ್ದೀರಾ?
ಯಕ್ಷಗಾನಕ್ಕೆ ಸಂಬಂಧಿಸಿದ ಈ ಶಬ್ದ ಒಂದು ಸಂದರ್ಭಕ್ಕೆ ಸಂಬಂಧಿಸಿದೆ.
ಈ ವರ್ಷದ ಪತ್ತನಾಜೆ ಕಳೆದು ಹೋಯಿತು.