ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರಾಣಾಯಾಮ ಪ್ರಯೋಜನಕಾರಿಯೇ?

ಉಸಿರಾಟವನ್ನು ನಿಯಂತ್ರಿಸಿ, ನಮ್ಮ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳಬಹುದು ಎನ್ನುವ ತತ್ತ್ವ"ಪ್ರಾಣಾಯಾಮ"ವೇ? ಅಲ್ಲ ಅದಕ್ಕಿಂತ ಹೆಚ್ಚಿನದೇ? ನಿಮ್ಮ ಅನುಭವ ಹಂಚಿಕೊಳ್ಳಿ.
"ಪ್ರಜಾವಾಣಿ" ಲೇಖನ ಇಲ್ಲಿದೆ:
http://prajavani.net/Content/Jun92007/health2007060831916.asp

ನನ್ನಮ್ಮ

ನಿನ್ನೆ ನನ್ನಣ್ಣನ ಗೂಗಲ್ ಸ್ಟೇಟಸ್ ನಲ್ಲಿ shootout at lokhandwala ಎಂದು ಬರೆದಿತ್ತು; ಅಂದರೆ ಅವನು ಆ ಚಿತ್ರವನ್ನು ನೋಡುತ್ತಿದ್ದಾನೆ ಎಂದರ್ಥ. ೨-೩ ಶಬ್ದಗಳಲ್ಲಿ, ಒಂದು ಗೂಗಲ್ ಐಕಾನ್ ನಲ್ಲಿ ಎಷ್ಟೆಲ್ಲ ವಿಷಯಗಳನ್ನು ಕನ್ವೇ ಮಾಡಬಹುದಲ್ಲ ಎಂದು ನನಗೆ ಆಶ್ಚರ್ಯವಾಯಿತು.

ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

ಈ ಬಗ್ಗೆ ಇಂದು ಚರ್ಚೆ ಆಗಿಯೇ ಆಗುತ್ತದೆ ಅಂತ ಗೊತ್ತಿತ್ತು. ಹಾಗಾಗಿ ಅದನ್ನು ನಾನೇ ಆರಂಭಿಸುವ ಅಂದುಕೊಂಡೆ. ಇಂದಿನ ವಿಜಯಕರ್ನಾಟಕದಲ್ಲಿ ಅನಂತಮೂರ್ತಿಯವರನ್ನು ತೆಗಳಿ ಪ್ರತಾಪ್ ಸಿಂಹರ ಲೇಖನ ಬಂದಿದೆ. ಇಷ್ಟೊಂದು ಬರೆಯಬಾರದಿತ್ತು, ಜಾಸ್ತಿಯಾಯಿತು ಎಂದು ಅನಿಸಿದರೂ ಬರೆದದ್ದು ಸರಿಯಾಗಿಯೇ ಇದೇ ಎಂದೂ ಕಾಣುತ್ತದೆ. ನೀವೇನಂತೀರ?

ಹಿತನುಡಿ

ಇರುವೆಯಿಂದ ಸಂಗ್ರಹಿಸಲ್ಪಟ್ಟ ಧಾನ್ಯ, ನೊಣದಿಂದ ಸಂಗ್ರಹಿಸಲ್ಪಟ್ಟ ಸಿಹಿ (ಜೇನು ತುಪ್ಪ), ಜಿಪುಣನಿಂದ ಸಂಗ್ರಹಿಸಲ್ಪಟ್ಟ ಧನ ಇವುಗಳಿಗೆ ವಿನಾಶ ಕಟ್ಟಿಟ್ಟ ಬುತ್ತಿ.

ತಾಯ್ತನ...

ಧರೆಗೆ ಮೆರಗು ತರುವ ಚೈತ್ರದಂತೆ,
ಬಾನಲಿ ಮೂಡಿದ ಕಾಮನಬಿಲ್ಲಿನಂತೆ,
ಬದುಕ ಇರುಳಿಗೆ ಹುಣ್ಣಿಮೆಯಂತೆ,
ಬಾಳ ಬೇಸರ ಧಗೆ ತಣಿಸುವ ಪನ್ನೀರ ಮಳೆಯಂತೆ,
ಕರುಳ ಕುಡಿಯ ಆಗಮನ,
ಸಾರ್ಥಕ ಭಾವ ಮೊಗದಲಿ,
ಮಮತೆಯ ಸಾಗರ ಹೃದಯದಲಿ,
ಎಷ್ಟೊಂದು ಚಂದಾನೆ
ತಾಯ್ತನ ಹೆಣ್ಣಿಗೆ!

---ಅಮರ್

ಮಗುಗಳ ಮಾಣಿಕ್ಯ

ಮಳೆ ಬರುವ ಮೊದಲು ಹೋಗಿ ಮನೆ ಸೇರಿಬಿಡಬೇಕು ಎಂಬ ಧಾವಂತದಲ್ಲಿ ಕ್ಯಾಬ್ ಇಳಿದವಳು ಓಡುತ್ತ ಬಂದೆ. ಮುಖ್ಯರಸ್ತೆಯಿಂದ ನಮ್ಮನೆಗೆ ಹೋಗುವಾಗ ಒಂದು ದೊಡ್ಡ ಏರು(ಅಥ್ವಾ ಹಳ್ಳ) ಇಳಿಯಬೇಕು. ನಮ್ಮ ಮನೆಯಿರುವ ಬಡಾವಣೆ ಬೆಂಗಳೂರಿನ ಎತ್ತರದ ಗುಡ್ಡದ ಸರಹದ್ದು. ಹಾಗಾಗಿ ದಿನಾ ಆರೂವರೆಗೆ ಮನೆಗೆ ನಡೆದುಹೋಗುವಾಗ ಅಲ್ಲಿ ಪಶ್ಚಿಮದಂಚಲ್ಲಿ ಅಡಗುತ್ತಿರುವ ಕುಂಚಕೋವಿದ ಬೆಳಕಿನ ಶೂರ ಸೂರ್ಯ ಮಾಮಾ ಟಾಟಾ ಮಾಡುತ್ತಿರುತ್ತಾನೆ. ಅವನು ಆಗಷ್ಟೇ ನೀಡಿ ಹೋದ ಬೆಚ್ಚನೆ ಅಪ್ಪುಗೆಯಿಂದ ಬಾನ್ದೇವಿಯ ಪಡುವಣ ಕೆನ್ನೆ ಕೆಂಪಗೆ ಮಿರಮಿರನೆ ಮಿನುಗುತ್ತಿರುತ್ತದೆ. ದಾರಿಬದಿಯಲ್ಲಿ ಕುಳಿತಿರುವ ಹೂವಾಡಗಿತ್ತಿಯ ಬುಟ್ಟಿಯ ತುಂಬ ಆಗಷ್ಟೇ ಬಿರಿಯುತ್ತಿರುವ ಮೊಗ್ಗಿನ ಘಮ. ಸಂಜೆ ಟ್ಯೂಶನ್ನಿಗೂ ಖುಶಿಯಲ್ಲಿ ಸೈಕಲ್ ರೇಸ್ ಮಾಡಿ ಹೋಗುವ ಪುಟ್ಟ ಹುಡುಗರು.

ನಕ್ಕುಳಹುಳ ಎಂದರೆ ...?

ನಕ್ಕುಳಹುಳ ಕೇಳಿದೀರಾ? ಏನಿದು? ರೈತನ ಮಿತ್ರ ಎಂದು ಇದನ್ನು ಪರಿಗಣಿಸುತ್ತೇವೆ. ಈ ಸುಳಿವು ಗೊತ್ತಾದ ಮೇಲೆ ಇದರ ಅರ್ಥ ಊಹಿಸುವುದು ಕಷ್ಟವಲ್ಲ!

ಸೇಡಿಯಾಪು ಕೃಷ್ಣಭಟ್ಟರು

http://68.178.224.54/udayavani/showstory.asp?news=1&contentid=422705&lang=2
ಪಂಡಿತಶ್ರೇಷ್ಠ ಸೇಡಿಯಾಪು ಕೃಷ್ಣಭಟ್ಟರು ತಮ್ಮ ಹಲವಾರು ಕೃತಿಗಳನ್ನು ರಚಿಸಿದ್ದು ತಮ್ಮ ಕೊನೆಗಾಲದಲ್ಲಿ. ಆಗ ಅವರಿಗೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಅವರ ಬಗೆಗೆ ತಿಳಿದುಕೊಳ್ಳಿ. ಇಂದು ಅವರ ಜನ್ಮದಿನ.