ಮೊಬೈಲೇ ಪ್ರವೇಶ ಪತ್ರ!
ಮೊಬೈಲೇ ಪ್ರವೇಶ ಪತ್ರ!
ಮೊಬೈಲ್‌ನ ಬಳಕೆಯನ್ನು ದೂರವಾಣಿ ಕರೆಗೇ ಸೀಮಿತಗೊಳಿಸದೆ, ಅದರ ಉಪಯುಕ್ತತೆಯನ್ನು ವಿಸ್ತರಿಸಿ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಮೊಬೈಲ್ ಸೇವೆ ಒದಗಿಸುವ ಕಂಪೆನಿಗಳು ಪ್ರಯತ್ನಿಸುತ್ತಲೇ ಇವೆ. ಮೊಬೈಲ್ ಸೆಟ್‌ನ ಒಳಗಿರುವ ಚಿಪ್(ಟ್ಯಾಗ್)ನಲ್ಲಿ ಬಳಕೆದಾರನ ವಿವರಗಳನ್ನು ದಾಸ್ತಾನು ಮಾಡಲಾಗುತ್ತದೆ. ಇದರಲ್ಲಿರುವ ವಿವರಗಳನ್ನು ವಾಚಕ ಸಾಧನವೊಂದು ಸಂಪರ್ಕಕ್ಕೆ ಬರದೇ ಓದಬಲ್ಲುದು.ಸಂಗೀತ ಕಚೇರಿಗೋ ಇನ್ಯಾವುದಾದರೂ ಕಾರ್ಯಕ್ರಮಕ್ಕೆ ಟಿಕೆಟನ್ನು ಖರೀದಿಸಲು, ಮೊಬೈಲ್ ಸೆಟ್‌ನ ಮೂಲಕವೇ ಸಾಧ್ಯ. ಟ್ಯಾಗ್‌ನ ವಿವರಗಳನ್ನು ಓದಿ, ಬಳಕೆದಾರನ ಬಗ್ಗೆ ತಿಳಿದುಕೊಂಡು, ಟಿಕೆಟ್ ಖರೀದಿಸಿದ ಬಗ್ಗೆಯೂ ಟ್ಯಾಗ್‌ನಲ್ಲಿ ನಮೂದಿಸಲಾಗುತ್ತದೆ. ನಂತರ ಕಾರ್ಯಕ್ರಮಕ್ಕೆ ಹೋದಾಗ, ಮೊಬೈಲ್ ಒಯ್ಯಲು ಮರೆಯಬಾರದು!ಯಾಕೆಂದರೆ ಅಲ್ಲಿ ಪ್ರವೇಶದ್ವಾರದಲ್ಲಿರುವ ಯಂತ್ರವೊಂದರ ಸಮೀಪ, ಮೊಬೈಲ್ ಒಯ್ದು, ಟ್ಯಾಗ್‌ನಲ್ಲಿ ದಾಖಲಾಗಿರುವ ಟಿಕೆಟ್‌ನ ವಿವರಗಳನ್ನು ಯಂತ್ರ ಗ್ರಹಿಸಿದಾಗಲಷ್ಟೇ ಪ್ರವೇಶದ್ವಾರ ತೆರೆಯುತ್ತದೆ.ಸೇವೆ ಒದಗಿಸುವ ಕಂಪೆನಿ ಯಾವುದೇ ಆಗಿದ್ದರೂ ಈ ಹೊಸ ಸೇವೆ ಒದಗಿಸಲು ಸೇವಾದಾತೃ ಕಂಪೆನಿಗಳು ಒಡಂಬಡಿಕೆಗೆ ಬಂದಿವೆ.
- Read more about ಮೊಬೈಲೇ ಪ್ರವೇಶ ಪತ್ರ!
- Log in or register to post comments