ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

(ಹಿಂ)ಬಾಲಕರಿಗೂ ಸೈಕಲ್: ಸರ್ಕಾರಿ ಯೋಜನೆ ವಿಫಲ

ಬೊಗಳೂರು, ನ.14- ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಪ್ರಕಟವಾದಾಗ ಹುಡುಗಿಯರೇ ಮೇಲುಗೈ ಸಾಧಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ವೇದ್ಯವಾದ ಸಂಗತಿ. ಇತ್ತೀಚೆಗೆ ಕರ್ನಾಟಕ ಸರಕಾರವು ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್‌ಗಳನ್ನು ವಿತರಿಸಿ ಅವರನ್ನು ಮತ್ತಷ್ಟು ವೇಗವಾಗಿ ಮುಂದುವರಿಯುವಂತೆ ಮಾಡಿರುವುದರಿಂದ ಆತಂಕಗೊಂಡಿರುವ ಹುಡುಗ ವಿದ್ಯಾರ್ಥಿ ಸಮುದಾಯವು ಸರಕಾರಕ್ಕೆ ಮೊರೆ ಹೋಗಿದೆ. ಒಟ್ಟಿನಲ್ಲಿ ಸರಕಾರದ ಯೋಜನೆಯೊಂದು ಅಸಫಲವಾಗುವ ಮೂಲಕ ಬಾಲಕರು ಹಿಂ-ಬಾಲಕರೇ ಆಗಿಯೂ, ಬಾಲಕಿಯರು ಮುಂ-ಬಾಲಕಿಯರೇ ಆಗಿಯೂ ಉಳಿಯುವಂತಾದ ಕತೆಯಿದು. (Bogaleragale.blogspot.com)

ರಂಜಿತ, ಬಾಗಿಲ್ತೆಗಿ ಪುಟ್ಟಾ........!

ಈಗಾಗಲೇ ೨೫-೩೦ ವರ್ಷಗಳು ಸಂದಿವೆ. ಮಕ್ಕಳು ದೊಡ್ಡವರಾಗಿ ಬೆಳೆದು, ರೆಕ್ಕೆ-ಪುಕ್ಕಗಳು ಬಂದು ಎಲ್ಲೆಲ್ಲೊ ಹಾರಿಹೋಗಿದ್ದಾರೆ. ಒಟ್ಟು ೪೦ ವರ್ಷಗಳಕಾಲ ಮುಂಬೈವಾಸ. ಈಗ ೨೩ ವರ್ಷಗಳಿಂದ ನಮ್ಮ ಸ್ವಂತ ಮನೆಯಲ್ಲಿ ಘಾಟ್ಕೋಪರ್, ನಲ್ಲಿದ್ದೇವೆ. ಆದರೂ ನಾವು ಬೊಂಬಾಯಿನ ಶಿವಾಜಿ ಪಾರ್ಕ್ ನಲ್ಲಿ ಕಳೆದ ೧೦ ವರ್ಷಗಳು ನಿಜಕ್ಕೂ ಅವಿಸ್ಮರಣನೀಯ. ಏಕೆಂದರೆ ಇಲ್ಲಿ ನಮ್ಮ ಇಬ್ಬರು ಮಕ್ಕಳ ಮೊದಲ ಪ್ರಾಥಶಾಲೆಯ ವಿದ್ಯಾಭ್ಯಾಸದ 'ವಿಧಿ' ನಡೆಯಿತು. ೨-೩ ಕನ್ನಡ ಪರಿವಾರಗಳು ನಮ್ಮ ಸಹವರ್ತಿಗಳು ನಮ್ಮೊಡನೆ ವಾಸವಾಗಿದ್ದರು. ಮೇಲಾಗಿ ಕರ್ನಾಟಕಸಂಘ ನಮಗೆ ಅತಿ ಸಮೀಪ. ಎಲ್ಲಾ ಕಾರ್ಯಕ್ರಮಗಳಿಗೂ ಬಿಡದೆ ಹೋಗುತ್ತಿದ್ದೆವು.

ವಿನೂತನ ಉದ್ಯೋಗ ಯೋಜನೆ: ನಿಧಾನಿ ಪ್ರಶಂಸೆ

(ಬೊಗಳೂರು ಕೆಲಸವಿಲ್ಲದ ಬ್ಯುರೋದಿಂದ)
ಬೊಗಳೂರು, ನ.13- ದೇಶವನ್ನು ಕಾಡುತ್ತಿರುವ ನಿರುದ್ಯೋಗ ಎಂಬ ಪಿಡುಗು ನಿವಾರಣೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸುತ್ತಿರುವ ಉಗ್ರಗಾಮಿಗಳಿಗೆ ಭಾರತದ ನಿಧಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. Bogaleragale.blogspot.com

ನಮ್ಮ ಬೆಂಗಳೂರು ಅಥವ ಅವರ್ ಬ್ಯಾಂಗ್ಳೂರ್

ಮಾನ್ಯರೆ,

ಸುವರ್ಣ ಕರ್ನಾಟಕದ ಶುಭ ಸಂಧರ್ಭದಲ್ಲಿ, ಘನತೆವೆತ್ತ ಕರ್ನಾಟಕ ಸರ್ಕಾರ ಜ್ಞಾನಪೀಠ ಪ್ರಶಸ್ತಿ ವಿಜೇತ ಯು. ಆರ್. ಅಂನಂತಮೂರ್ತಿ ಹಾಗು ಹಲವಾರು ಕನ್ನಡಿಗರ ಆಶಯದಂತೆ ಬ್ಯಾಂಗ್ಳೂರ್ ಹಾಗು ಇತರ ನಗರಗಳ ಹೆಸರನ್ನು ಕನ್ನಡದ ಹೆಸರುಗಳಿಂದ ಮರು ನಾಮಕರಣ ಮಾಡಲು ನಿರ್ಧರಿಸಿದೆ. ಈ ವಿಷಯ ಹಲವರ ಪರ-ವಿರೋಧದಿಂದಾಗಿ, ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನ ಮೂಲ ಹೆಸರನ್ನು ಉಳಿಸಲು ಸರ್ಕಾರ ಮುಂದಾಗಿದಕ್ಕೆ ಕನ್ನಡಿಗರೂ ಸೇರಿದಂತೆ ಹಲವಾರು ಅನ್ಯಭಾಷಿಗರು ಎಷ್ಟೋ ಮಂದಿ ಇದಕ್ಕೆ ಅಪಸ್ವರ ಎತ್ತಿದ್ದಾರೆ. ಕೇವಲ ಅನ್ಯಭಾಷಿಗರು ವಿರೋದಿಸಿದರೆ ನಾವು ತಲೆಕೆಡಿಸಿಕೊಳ್ಳುವ ಅಗತ್ಯವೂ ಇರಲ್ಲಿಲ್ಲ. ಬೆಂಗಳೂರಿನ ಮರು ನಾಮಕರಣಕ್ಕೆ ವಿರೋಧಿಸುತ್ತಿರುವ ಕನ್ನಡಿಗರೆಲ್ಲರಿಗೂ ನನ್ನದೊಂದು ಕಿವಿ ಮಾತು. ಕನ್ನಡ ೨೦೦೦ ವರ್ಷಕ್ಕೂ ಹಳೆಯದಾದ ಭಾಷೆ. ದಕ್ಷಿಣ ಭಾರತದ ೨ನೇ ಹಳೆಯ ಭಾಷೆ ಅದು ನಿಮಗೂ ಗೊತ್ತು! ಅನನ್ಯ ಸಂಸ್ಕೃತಿ ವೈಭೋಗತೀತ ಇತಿಹಾಸವಿರುವ ಕನ್ನಡ ನಾಡಿನಲ್ಲಿ, ಊರುಗಳ ಹೆಸರು ಇಂಗ್ಲೀಷದ್ದಾಗಿರಬೇಕೆ? ಮರು ನಾಮಕರಣವನ್ನು ವಿರೋಧಿಸುವವರು ನೀಡುವ ಮೊದಲ ಕಾರಣ ಬೆಂಗಳೂರಿನ ರಸ್ತೆ, ನೈರ್ಮಲ್ಯ ಹೀಗೆ ಹಲವಾರು ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು. ಇವರಿಗೆ ಸಮಸ್ಯೆಗಳು ಬಗೆಹರಿಯುವುದೆಂದು ಹೇಳಿದವರು ಯಾರು? ಸರ್ಕಾರ ಆರೋಗ್ಯ, ನೈರ್ಮಲ್ಯ, ರಸ್ತೆ ಇವುಗಳ ಬಗ್ಗೆ ಆಲೋಚಿಸಬೇಕೆಂದು ಹೇಳುವ ಇವರ ಮಾತು ನಿಜ, ಹಾಗಾದರೆ ಸರ್ಕಾರ ಹಾಗು ಜನತೆ ಭಾಷೆ ಹಾಗು ಸಂಸ್ಕೃತಿಯ ಸಮಸ್ಯೆಗಳಿಗೆ ಆಲೋಚಿಸಬಾರದೆ? ನಮ್ಮ ಭಾಷೆ ಹಾಗು ಸಂಸ್ಕೃತಿಯು ಅಳಿಸುತ್ತಿರುವಾಗ ನಾವೆಲ್ಲರೂ ಕೈಕಟ್ಟಿ ಕೂರಬೇಕೇ? ಹೀಗಿರುವಾಗ ಬ್ಯಾಂಗ್ಳೂರ್ ಹಾಗು ಇತರ ನಗರಗಳ ಹೆಸರನ್ನು ಕನ್ನಡದ ಹೆಸರುಗಳಿಂದ ಮರು ನಾಮಕರಣ ಮಾಡಿದರೆ ತಪ್ಪೇನು?

ಕನ್ನಡಸಾಹಿತ್ಯಡಾಟ್‌ಕಾಂ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಲಿದೆ

ಮಾನ್ಯರೆ,

ನಮ್ಮ ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ವ್ಯಾಪ್ತಿಯಲ್ಲಿನ ಪರಿಣತಿ, ವಾಣಿಜ್ಯ, ಸೇವೆಯ ಕ್ಷೇತ್ರಗಳಲ್ಲಿ - ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನ ನಕಾಶೆಯಲ್ಲಿ ಹೆಗ್ಗುರುತನ್ನು ಮೂಡಿಸಿರುವ ವಿಷಯ, ನಮಗೆಲ್ಲ ಹೆಮ್ಮೆಯ ವಿಷಯ. ಇದಕ್ಕೆ ರಾಜ್ಯ ಸರ್ಕಾರದ ನೀತಿ-ನಿಯಮಾವಳಿಗಳೂ ಕಾರಣವೆನ್ನುವುದನ್ನು ನಾವೆಲ್ಲ ನಂಬಿದ್ದೇವೆ. ಆದರೆ, ಕನ್ನಡ ಅಥವ ಸ್ಥಳೀಯ ದೇಸಗತಿಗೆ ತಕ್ಕಂತೆ ಕಂಪ್ಯೂಟರ್ ಪರಿಸರ ನಿರ್ಮಾಣವಾಗದೆ, "ಕೇವಲ ಇಂಗ್ಲಿಷ್ ಪರಿಸರ" ಮಾತ್ರ ಸೃಷ್ಟಿಯಾಗಿ ಹೋಗಿರುವ ವಾತಾವರಣ ಆತಂಕಕಾರಿಯೂ ಆಗಿದೆ ಎನ್ನುವುದರಲ್ಲಿಯೂ ಸಂಶಯವಿಲ್ಲ. ಮಕ್ಕಳನ್ನು ಕೇಳಿದರೆ: "ವರ್ಡ್, ಎಕ್ಸೆಲ್, ಪೈಂಟ್ ಇತ್ಯಾದಿ ಬರುತ್ತದೆ.." ಎಂದೆನ್ನುತ್ತಾರೆ. "ಕನ್ನಡವನ್ನು ಕಂಪ್ಯೂಟರ್‌ನಲ್ಲಿ ನೋಡಿದ್ದೀರ?" - ಎಂದು ಪ್ರಶ್ನಿಸಿದಾಗ ಪೆಚ್ಚು ಮುಖಗಳನ್ನು ಹಾಕಿಕೊಂಡು ನಿಲ್ಲುತ್ತಾರೆ. ಈ ದಿಸೆಯಲ್ಲಿ ಕನ್ನಡಸಾಹಿತ್ಯಡಾಟ್‌ಕಾಂ ತನ್ನ ಬೆಂಬಲಿಗರ ಬಳಗಗಳೊಡಗೂಡಿ ಸರ್ಕಾರ ಮತ್ತು ಸಂಬಂಧಿಸಿದವರಿಗೆ ಮನವಿಯೊಂದನ್ನು ಸಲ್ಲಿಸಲಿದ್ದು ಬೇಡಿಕೆಗಳು ಕೆಳಕಂಡಂತಿವೆ...

ಮೌನ

ಮೌನ ಬಂಗಾರ ಮೌನ ಚಿನ್ನ
ಆದರೆ ಮಾತು ಬಲು ಚೆನ್ನ

ಮನದಾಳದ ದುಗುಡ
ಮನದ ತಳಮಳ ಮಾತು ವಣಿ೯ಸದಾದಾಗ

ಕನಸಿನ ಬೆನ್ನು ಹತ್ತಿ ಹೋದವನ ಕಥೆ ( ನಾನು ಓದಿದ ಒಳ್ಳೆಯ ಕಥೆ)

ಇದು ನಥೇನಿಯಲ್ ಹ್ಯಾಥೊರ್ನ್ ಎಂಬ ಲೇಖಕ ಬರೆದ ಕಥೆ .

ನಮ್ಮ ಕಥಾನಾಯಕ ಚಿಕ್ಕವನಿದ್ದಾಗ ಒಂದು ಕನಸು ಆಗಾಗ ಬೀಳುತ್ತಿತ್ತು. ಅದು ಹೀಗೆ- ಒಂದು ಕೆಳಮುಖವಾದ ಬಾಣದ ಗುರುತು . 'ಇಲ್ಲಿ ಅಗೆ' ಎಂಬ ಬರಹ . ಅಲ್ಲಿ ಅಗೆದಾಗ ನಿಧಿಯು ಸಿಗುತ್ತದೆ. ಮತ್ತು ಋಷಿ ತರಹದ ಜನರು ಹಿರಿಯರಿಂದೊಡಗೂಡಿ ಬಂದು ನಮ್ಮ ರಾಜ್ಯಕ್ಕೆ ರಾಜನಾಗು ಎಂದು ಕಿರೀಟ ಒಪ್ಪಿಸಿ ಬೇಡಿಕೊಳ್ಳುವರು. ಹಾಗೂ ಸುಂದರಿ ರಾಜಕುಮಾರಿಯೊಬ್ಬಳು ನನ್ನನ್ನು ಮದುವೆಯಾಗು ಎಂದು ಕೇಳಿಕೊಳ್ಳುವಳು.

ಬಿಹಾರದಲ್ಲಿ ಬ್ರೇಕ್ಲಾ ತಂತ್ರ-ಜ್ಞಾನ ವಿವಿ ಆರಂಭ

(ಬೊಗಳೂರು ಶೈಕ್ಷಣಿಕ ಬ್ಯುರೋದಿಂದ)
ಬೊಗಳೂರು, ನ.9- ಐಟಿ ಶಿಕ್ಷಣಕ್ಕೆ ಸೀಟು ದೊರೆಯಲಿಲ್ಲ ಎಂದು ಹಲುಬುವ ವಿದ್ಯಾರ್ಥಿಗಳಿಗೆ ಇದೋ ಬೊಗಳೆ ರಗಳೆ ಬ್ಯುರೋ ಹೊತ್ತು ತಂದಿದೆ ಸಂತಸಕರ ಸುದ್ದಿ. ಐಟಿ, ಬಿಟಿ ಮತ್ತು ಬಿಟ್ಟಿ ಟೆಕ್ನಾಲಜಿಗಳೆಲ್ಲಾ ಹಳತಾಗತೊಡಗಿದ್ದು, ಬಿಹಾರದಲ್ಲಿ ಹೊಸ ತಂತ್ರಜ್ಞಾನ ಕ್ರಾಂತಿಯೊಂದು ನಡೆಯುತ್ತಿರುವುದನ್ನು ನಮ್ಮ ಓದುಗರಿಗೋಸ್ಕರವೇ ಪತ್ತೆ ಹಚ್ಚಲಾಗಿದೆ. (Bogalergale.blogspot.com)