ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯಾರ ಬುದ್ಧಿ ಹೆಚ್ಚು ನೀವೆ ಹೇಳಿ....>

೭ನೆ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ ಒ೦ದು ದಿವಸ ಅ೦ಕಗಣಿತದ ಒ೦ದು ಪ್ರಶ್ನೆಯನ್ನು ಬಿಡಿಸುವದರಲ್ಲಿ ಮಗ್ನ ನಾಗಿದ್ದ. ಆಗ ಶಿಕ್ಷಕ ಅತ್ತನ ಹತ್ತಿರ ಬ೦ದು, ಒ೦ದು ಜ್ನಾನ ವ್ರುದ್ಧಿ ಆಗುವ ಸಮಸ್ಯ ಕೇಳುವೆ ಉತ್ತರಿಸುಎಯಾ? ಎ೦ದರು. ಅದಕ್ಕೆ ವಿದ್ಯಾರ್ಥಿ ಆಗಲಿ ಕೇಳಿ ಎ೦ದ. ಆಗ ಶಿಕ್ಷಕ, ಊಹಿಸು! ಒ೦ದು ಮರದ ಟೊ೦ಗೆಯ ಮೇಲೆ ೫ ಕಪ್ಪು ಪಕ್ಷಿಗಳಿವೆ. ನೀನು ಪಿಸ್ತೂಲೈನಿ೦ದ ಒ೦ದು ಪಕ್ಷಿಗೆ ಗು೦ಡು ಹೊಡೆದೆ. ಅಗ ಅಲ್ಲಿ ಉಳಿದಿರುವ ಪಕ್ಷಿಗಳು ಎಷ್ಟು?

ಎಫ್ ಎಮ್ ರೇಡಿಯೋ ಚಾನಲುಗಳು ಮತ್ತು ಅವುಗಳ ಬಧ್ಧತೆ.

ಇತಿಹಾಸ ಮರುಕಳಿಸುತ್ತಿದೆ. ಜನ ಮತ್ತೆ ರೇಡಿಯೋದ ಕಡೆ ವಾಲುತ್ತಿದ್ದಾರೆ. ೭೦-೮೦ರ ದಶಕದ ನಂತರ ಟಿ ವಿ ಯ ಅಬ್ಬರದಿಂದ ಮೂಲೆಗುಂಪಾಗಿ, ಹಳ್ಳಿಯ ಹಿರಿಯರ ಕೈ ಸೇರಿದ್ದ, ಅಟ್ಟದ ಧೂಳು ತಿನ್ನುತ್ತಿದ್ದ ರೇಡಿಯೋಗೆ ಕಾಯಕಲ್ಪವಾಗಿದೆ. ಸಂತೋಷ. ಜನ ಬಸ್ಸಲ್ಲಿ, ಕ್ಯೂನಲ್ಲಿ ಕಾಯಬೇಕಾದಾಗ ಮೊದಲಿನಂತೆ ಬೋರೆದ್ದು ಹೋಗಬೇಕಾಗಿಲ್ಲ, 10x6 ಕಿಷ್ಕಿಂದೆಯಲ್ಲಿ ಬದುಕೋರು ರಾತ್ರಿಯ ಕತ್ತಲೇಲಿ ನಿರಾಶವದನರಾಗಿ ಕೂರಬೇಕಿಲ್ಲ, ಸಂತೋಷ. ಕೆಲಸ ಮಾಡುತ್ತಲೇ ಮನರಂಜನೆಯನ್ನೂ ಪಡೆಯಬಹುದು. ಅದೂ ಸಂತಸದ ಸಂಗತಿಯೇ!

ಹೋರಾಟಕ್ಕೆ ಕಿಡಿ ಹಚ್ಚಿಸಿದ ವಿಪರೀತ ಸಿಂಗ್!

(ಬೊಗಳೂರು ಮೀಸಲಾತಿ ಬ್ಯುರೋದಿಂದ)
ಬೊಗಳೂರು, ನ.8- MTVಯಲ್ಲಿ ಕೌಸಲ್ಯಾ ಸುಪ್ರಜಾ ರಾಮ.... ಅಂತ ಸುಪ್ರಭಾತ ಕೇಳಿ ಬಂದರೆ ಹೇಗಿರುತ್ತೆ? ನಿರೀಕ್ಷಿಸುವುದು ಸಾಧ್ಯವೇ ಇಲ್ಲ ಎಂದು ಇಡೀ ಜಗತ್ತು ಅಂದುಕೊಳ್ಳುವ ಮಾತು ಉಲ್ಟಾ ಹೊಡೆದಿದೆ.

ಒಂದು ಅತಿಸಣ್ಣ ಕಥೆ-

ಒಬ್ಬ ಗುರುವಿನ ಹತ್ತಿರ ಒಬ್ಬ ಶಿಷ್ಯ ಅಧ್ಯಯನ ಮಾಡುತ್ತಿದ್ದ . ಅವನು ಯಾವಾಗಲೂ ಓದಿನ ಕುರಿತೇ ಚಿಂತಿಸುತ್ತಿದ್ದ. ಗುರುಗಳು ತಮ್ಮ ಪತ್ನಿಗೆ ಶಿಷ್ಯನಿಗೆ ಊಟದ ಸಮಯದಲ್ಲಿ ತುಪ್ಪದ ಬದಲು ಬೇವಿನ ಎಣ್ಣೆಯನ್ನು ಬಡಿಸಲು ಹೇಳಿದ್ದರು. ಆ ಪ್ರಕಾರ ಅವರು ಪ್ರತಿದಿನ ಬೇವಿನ ಎಣ್ಣೆ ಬಡಿಸಿದರೂ , ಅನ್ನದ ಜತೆ ಅದನ್ನೇ ಕಲಸಿಕೊಂಡು ಉಣ್ಣುತ್ತಿದ್ದ . ಅವನಿಗೆ ಅದರ ರುಚಿ ಗೊತ್ತಾಗುತ್ತಲೇ ಇರಲಿಲ್ಲ. ಏಕೆಂದರೆ ಊಟದತ್ತ ಅವನ ಗಮನ ಇರಲೇ ಇಲ್ಲವಲ್ಲ? .

ಲೈನಕ್ಸ್ ನ ಕನ್ನಡೀಕರಣದ ನಂತರ ಗೂಗ್ಲ್ ಕನ್ನಡೀಕರಣಕ್ಕೆ ಕೈ? - ನಾನು ಮತ್ತು ಜೋಕುಮಾರ !

ಲೈನಕ್ಸ್ ನ ಕನ್ನಡೀಕರಣಕ್ಕಾಗಿ ಹದಿನೈದು ಸಾವಿರ ಶಬ್ದ/ವಾಕ್ಯಗಳ ಅನುವಾದ ಅಗತ್ಯವಿದ್ದು . ನಾನು ಈ ಕೆಲಸಕ್ಕೆ ಕೈ ಹಾಕಿದಾಗ ಅದಾಗಲೇ ಐದುಸಾವಿರದಷ್ಟು ಅನುವಾದ ಆಗಿತ್ತು ಎರಡು ತಿಂಗಳ ಅವಧಿಯಲ್ಲಿ ನಾನೂ ಸುಮಾರು ಐದುಸಾವಿರದಷ್ಟು ಅನುವಾದ ಮಾಡಿದ್ದು ೨/೩ ರಷ್ಟು ಅನುವಾದ ಆದಂತಾಗಿದೆ. ಮುಂದೆ ನನ್ನ ಕೈಸಾಗದೆ ಬಿಟ್ಟಿರುವೆ.

'ಹ್ಹಿ ಹ್ಹಿ'ಯ ಶಾಶ್ವತ ನಿರ್ಗಮನ

ಮೊನ್ನೆ ದೀಪಾವಳಿಯಂದು ೪ ದಿನ ರಜಾ ಇದ್ದರೂ ಎಲ್ಲೂ ಚಾರಣ ಮಾಡಲು ಸಾಧ್ಯವಾಗಲಿಲ್ಲ. ೩ ದಿನ ಮನೆಯಲ್ಲೇ ಕೂತು 'ಫುಲ್ ಬೋರ್' ಹೊಡೆಸಿಕೊಂಡು, ನಾಲ್ಕನೇ ದಿನ ಸೋಮವಾರ ೨೩ ಅಕ್ಟೊಬರ್-ರಂದು 'ನಡೀಪ್ಪಾ ಮಾರಾಯ, ಆಗುಂಬೆಗಾದರೂ ಹೋಗಿಬರೋಣು' ಎಂದು ಯಮಾಹ ಏರಿದೆ.

"ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್."....!

'ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್'.....

ಈ ಹಾಡನ್ನು ರಾಗವಾಗಿ ಹೇಳುತ್ತ, ಭಾವುಕತೆಯ ಉತ್ತುಂಗದಲ್ಲಿ ತೇಲುತ್ತಾ ಅವನ ಲೋಕದಲ್ಲೇ ಕಳೆದುಹೋಗುತ್ತಾನೋ ಎನ್ನಿಸುವಷ್ಟು ಮಗ್ನನಾದ ಒಬ್ಬ ವ್ಯಕ್ತಿ(ತಿರುಕ) ನನ್ನಮೇಲೆ ಗಾಢವಾದ ಪರಿಣಾಮ ಬೀರಿದ್ದಾನೆ ! ಎಲ್ಲರು ಗಮನಿಸುವಂತೆ, ಇತರ ನೇತ್ರಹೀನ ಬಿಕ್ಷುಕರು ತಮ್ಮ ದುಷ್ಕರ್ಮವನ್ನು ಹಳಿದುಕೊಳ್ಳುತ್ತಾ 'ಪಾಪಿ ಪೇಟ್ ಕೆ ಲಿಯ ಕುಚ್ ದೇದೋ ಮಾ; ಜನಮ್ ಸೆ ಅಂಧ ಹೈ, ದಯಾ ಕರೋ' ಎಂದೋ ಮೇರಾ ಕೋಯಿ ನಹಿ ಹೈ; ಇಸ್ ದುನಿಯ ಮೆ' ಇತ್ಯಾದಿ ಗಳು ಅವನ ಹತ್ತಿರವೂ ಸುಳಿಯುವುದಿಲ್ಲ ! ಅವನೊಬ್ಬ 'ಸ್ಥಿತಪ್ರಜ್ಞ'ನಂತೆ ತೋರುತ್ತಾನೆ !

ದಿ|| ರಾಶಿ (ಡಾ| ಎಂ ಶಿವರಾಂ) ಜನ್ಮ ಶತಾಬ್ದಿ ಸಮಾರೋಪ ಸಮಾರಂಭ

ರಾಶಿ

[kn:ರಾ ಶಿವರಾಂ|ರಾಶಿ] ಅವರ ಪುಸ್ತಕಗಳ ಬಿಡುಗಡೆ ಮತ್ತು ಶ್ರೀ ಎಚ್. ಎಸ್. ದೊರೆಸ್ವಾಮಿ ಅವರಿಗೆ ಗೌರವ ಸಮರ್ಪಣೆ

೧೦ - ೧೧ - ೨೦೦೬ ಶುಕ್ರವಾರ ಸಂಜೆ ೬ ಗಂಟೆಗೆ

ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ನಂ ೬, ಬಿ ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು ೫೬೦ ೦೦೪

ಕೊರವಂಜಿ-ಅಪರಂಜಿ ಟ್ರಸ್ಟ್

ಹಾಸ್ಯ ಬ್ರಹ್ಮ ಟ್ರಸ್ಟ್

ಅಂಕಿತ ಪುಸ್ತಕ

ರಾಶಿ ಅವರ ಪುಸ್ತಕಗಳ ಬಿಡುಗಡೆ ಮತ್ತು ಶ್ರೀ ಎಚ್. ಎಸ್. ದೊರೆಸ್ವಾಮಿ ಅವರಿಗೆ ಗೌರವ ಸಮರ್ಪಣೆ

ಉದ್ಘಾಟನೆ ಮತ್ತು ಪುಸ್ತಕಗಳ ಬಿಡುಗಡೆ
[kn:ವಿಶ್ವೇಶ್ವರ ಭಟ್|ಶ್ರೀ ವಿಶ್ವೇಶ್ವರ ಭಟ್]
(ಸಂಪಾದಕರು: [kn:ವಿಜಯ ಕರ್ನಾಟಕ|ವಿಜಯ ಕರ್ನಾಟಕ])

ಗೌರವ ಸಮರ್ಪಣೆ
ಶ್ರೀ ಎಚ್ ಎಸ್ ದೊರೆಸ್ವಾಮಿ
(ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತರು)

ಅಧ್ಯಕ್ಷತೆ
[kn:ಪ್ರೊ.ಜಿ.ವೆಂಕಟಸುಬ್ಬಯ್ಯ|ಪ್ರೊ. ಜಿ ವೆಂಕಟಸುಬ್ಬಯ್ಯ]

ಮುಖ್ಯ ಅತಿಥಿಗಳು
ಶ್ರೀ ಶ್ರೀನಿವಾಸ ವೈದ್ಯ

ತಂದೆಯ ನೆನಪು
ಡಾ| ಓಂಪ್ರಕಾಶ್

ಉಪಸ್ಥಿತಿ:
ಶ್ರೀ ಕೃಷ್ಣ ಸುಬ್ಬರಾವ್, ಶ್ರೀ ಬೇಲೂರು ರಾಮಮೂರ್ತಿ

ಆಧುನಿಕತೆಯ ರೋಗಗಳು

'ನಾವು ಮನುಷ್ಯರಯ್ಯ, ಪ್ರಾಣಿಗಳಲ್ಲ'. ಅದರಲ್ಲೇಕೆ ಸಂಶಯ? ನಾವು ಪ್ರಾಣಿಗಳಲ್ಲವೆಂದೋ ಅಥವಾ ಪ್ರಾಣಿಗಳಿಗಿಂತ ಮಿಗಿಲೆಂದೋ ಹೇಳಿಕೊಳ್ಳದಿದ್ದರೆ ನಮ್ಮ ಅಹಮ್ಮಿಗೆ ಸಂತೃಪ್ತಿ ಯಾಗಬೇಡವೇ? ಈಗಂತೂ 'ಅಹಂ ಪೋಷಣೆ' ಎನ್ನುವುದು ವ್ಯಾಪಾರೀಕರಣದ ಮೂಲಮಮಂತ್ರವೇ ಆಗಿರುವಾಗ, ಅದಕ್ಕೆ 'ಅಗತ್ಯವಾದ ಸರಕುಗಳೆಲ್ಲವೂ' ನಮ್ಮ ಮಾರುಕಟ್ಟೆಗಳಲ್ಲಿ, ಮಾಲು ಮಳಿಗೆಗಳಲ್ಲಿ ಕೈ ಗೆಟಕುವಂತಿರುವಾಗ, ನಾವೂ ಪ್ರಾಣಿಗಳೆಂಬುದು ನೆನಪಾಗುವುದಾದರೂ ಹೇಗೆ?

ನಗರ-ಜಿಲ್ಲಾ ಕೇಂದ್ರಗಳಲ್ಲಿ ವ್ಯಾಪಕವಾಗುತ್ತಿರುವ ಕನ್ನಡಸಾಹಿತ್ಯಡಾಟ್‌ಕಾಂ

 

ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗ ತನ್ನ ಚಟುವಟಿಕೆಗಳನ್ನು ಕರ್ನಾಟಕದ ಜಿಲ್ಲಾಮಟ್ಟದ ವ್ಯಾಪ್ತಿಗೆ ವಿಸ್ತರಿಸಿಕೊಳ್ಳುವ ಸೂಚನೆಯನ್ನು ತೋರಲಾರಂಭಿಸಿದೆ. ಇದಕ್ಕೆ ಉದಾಹರಣೆ ಎನ್ನಬಹುದಾದರೆ, ತುಮಕೂರು ನಗರದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ದಿನಾಂಕ ೦೫-೧೧-೨೦೦೬ ರ ಭಾನುವಾರದಂದು ನೆಡೆದ ಸಭೆ.