ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಾರೊ ಸಂತೆಗೆ ಹೋಗೋಣ ಬಾ....

ಮನೆಗೆ ಬೇಕಾದ ಸಾಮಾನುಗಳನ್ನು ತರುವ ಕೆಲಸ 4-5 ದಿನಗಳಿಂದ ಬಾಕಿ ಇತ್ತು. ವಾರಾಂತ್ಯಕ್ಕಿಂತ ಒಳ್ಳೆಯ ದಿನ ಇನ್ನ್ಯಾವುದಿದೆ ಅಂತ ನಾನು, ನನ್ನಾಕಿ ಹತ್ತಿರದ ವಾಣಿಜ್ಯ ಸಂಕೀರ್ಣವೊಂದಕ್ಕೆ ಹೋದೆವು. ತಳ್ಳುವ ಗಾಡಿಯೊಂದನ್ನು ಎಳೆದುಕೊಂಡು ನಮಗೆ ಬೇಕಾದ (ಅದಕ್ಕಿಂತ ಹೆಚ್ಚಾಗಿ ಬೇಡವಾದ!) ಎಲ್ಲಾ ಸಾಮಾನುಗಳನ್ನೂ ತುಂಬಿಕೊಳ್ಳುತ್ತಾ ಸಾಗಿದೆವು. ಯಾವುದರ ಬೆಲೆ ಎಷ್ಟು ಎಂದು ಯಾರನ್ನೂ ಕೇಳುವ ಪ್ರಮೇಯವೇ ಬಾರದಂತೆ ಪ್ರತಿ ವಸ್ತುವಿನ ಮೇಲೂ ಅದರ ಬೆಲೆ ಎದ್ದು ಕಾಣುವಂತೆ ನಮೂದಿಸಿದ stickers ಇದ್ದವು. ಖರೀದಿ ಮುಗಿದ ತಕ್ಷಣ ಹಣ ಪಾವತಿಸುವ ಸರದಿಯಲ್ಲಿ ನಿಂತು ಕಾದೆವು. ನಮ್ಮ ಸರದಿ ಬಂದಾಗ, 'ಕೌಂಟರ್'ನಲ್ಲಿ ಇದ್ದ ಮಹಿಳೆ ತನ್ನ ಅಭ್ಯಾಸಬಲದಿಂದ ಎಂಬಂತೆ ಮುಗುಳ್ನಕ್ಕು, "ಹಲೋ, ಹೌ ಆರ್ ಯು?" ಎಂದು ಕೇಳಿ, ನಮ್ಮ ಉತ್ತರಕ್ಕೂ ಕಾಯದೇ, ಎಲ್ಲವನ್ನೂ ಬಿಲ್ ಮಾಡಿದಳು. ಹಣ ತೆತ್ತು ಹೊರಬರುತ್ತಿದ್ದಂತೆ ಯಾಕೋ ಇದ್ದಕ್ಕಿದ್ದಂತೆ ಒಂದು ಯೋಚನೆ ಬಂತು: "ನಮ್ಮ ಈ ವ್ಯವಹಾರಕ್ಕೆ ಸುಮಾರು 40 ನಿಮಿಷ ತಗುಲಿದೆ. ಇಡಿಯ 40 ನಿಮಿಷದಲ್ಲಿ ನಾವು ಯಾರ ಜೊತೆಯಾದರೂ ಸಂಭಾಷಣೆ ನಡೆಸಿದೆವಾ?..". ಏನೋ ಒಂದು ರೀತಿಯ ನಿರ್ವಾತದ ಅನುಭವ.

ಎಲ್ಲೆಲ್ಲಿಯೂ ಎದಿರು ಸಿಗುವವರು

ಫಿನ್ಲೆಂಡಿಗೆ ನಾನು ಮೊದಲ ಸಲ ಒಂದೂವರೆ ತಿಂಗಳ ಕಾಲ ಹೋದದ್ದು ೨೦೦೧ರಲ್ಲಿ. ಸುರೇಖಳಿಗೆ ಅಲ್ಲಿ ಆರ್ಟಿಸ್ಟ್-ಇನ್-ರೆಸಿಡೆನ್ಸಿ ಸಿಕ್ಕಿತ್ತು (ಮನೆಯೊಳಗಿರುವ ಕಲಾವಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಶೈಲಿಯಲ್ಲಿ ಕರೆಯಬಹುದು). ನಂತರ ಅದೇ ಸ್ಕಾಲರ್‌ಷಿಪ್ ಗೆಳೆಯ ಪ್ರಕಾಶ್ ಬಾಬುವಿಗೆ. ನಂತರ ನೂರು ಕೋಟಿ ಮಂದಿಯಿರುವ ಸಮಗ್ರ ಭಾರತದಲ್ಲಿ ಅದಕ್ಕೆ ಬಲಿ ಎಚ್. ಎ.ಅನಿಲ್ ಕುಮಾರ್, ಅಂದರೆ ನಾನು. ಮತ್ತು ಇನ್ನೂ ಅಶ್ಚರ್ಯವೆಂದರೆ ನಮ್ಮೆಲ್ಲರ ಆಯ್ಕೆಯಾದದ್ದು ಪ್ಯಾರಿಸಿನ ಯುನೆಸ್ಕೊ ಆಫೀಸಿನಲ್ಲಿ! ಆಯ್ಕೆ ಸಮಿತಿಯಲ್ಲಿ ಬಹುಮಂದಿಗೆ ಭಾರತವು ಭೂಪಟದಲ್ಲೆಲ್ಲಿದೆಯೆಂದೇ ತಿಳಿದಿರಲಾರದು. ಸುರೇಖಳೊಂದಿಗೆ ಇನ್ನೆರೆಡು ಸ್ಟುಡಿಯೊಗಳಲ್ಲಿ ಪೊಲ್ಯಾಂಡಿನ ಕಲಾ ಇತಿಯಾಸಕಾರ್ತಿ ಅಗ್ನೇಷ್ಕ ಹಾಗೂ ಬ್ರೆಜಿಲ್‌ನ ಕಲಾವಿದೆ ಕಾರ್ಲ ಗ್ವಾಲಿಯಾರ್ಜಿ. "ನಮ್ಮೂರು ಗ್ವಾಲಿಯರ್ ಜಿ" ಎಂದು ಭಾರತದಲ್ಲಿ ಹೇಳಿದರೆ ನಂಬುವಷ್ಟು ಆಕೆ ಪಂಜಾಬಿಯಾಗಿ ಕಾಣುತ್ತಿದ್ದಳು. ಆದ್ದರಿಂದ ಸುರೇಖಳ ಒಟ್ಟಿಗೆ ಒಬ್ಬ ಭಾರತೀಯನೊಬ್ಬ ಭಾರತೀಯ, ಪೊಲ್ಯಾಂಡ್, ಬ್ರೆಜಿಲ್ ದೇಶಗಳಿಗೆ ಸೇರಿದ ಮೂವರು ಕಲಾವಿದೆಯರೊಂದಿಗೆ ಫಿನ್ಲೆಂಡ್ ನೋಡಿದ್ದು ಒಂದು ಜೀರ್ಣವಾಗದ ವಿಷಯವಾಗಿತ್ತು. ದಿನದ ಕೊನೆಗೆ ನಾನು ಯಾವ ದೇಶದಲ್ಲಿದ್ದೇನೆಂಬುದೇ ಮರೆತುಹೋಗುತ್ತಿತ್ತು. ಬ್ರೆಜಿಲಿನ ಫುಟ್ಬಾಲ್, ಸಲ್ಮಾ ಹೈಕಳ ಫ್ರಿದ ಕಾರ್ಲೋ, ಪೊಲ್ಯಾಂಡಿನ ಪೊಲ್ಯಾಂಸ್ಕಿ, ವಿಸ್ಕಿ, ಅಗ್ನೇಷ್ಕ, ವೊಡ್ಕ ಇತ್ಯಾದಿಗಳ ಕಾಕ್‌ಟೈಲ್ ಆಗಿಬಿಟ್ಟಿರುತ್ತಿತ್ತು ನನ್ನ ಎರಡು ಕಿವಿಗಳ ಮಧ್ಯ-ಪ್ರದೇಶ.

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಪುಣೆ ಭೇಟಿ

ಗೆಳೆಯರೆ,

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಮುಂಬೈ-ಪುಣೆ, ಪುಣೆ ನಗರದ ಕನ್ನಡಾಸಕ್ತರನ್ನು ಮುಖಾಮುಖಿಯಾಗಿಸುವ ಉದ್ದೇಶದಿಂದ, ಮೊಟ್ಟಮೊದಲ ಭೇಟಿಯನ್ನು ಬರುವ ಭಾನುವಾರ ಹಮ್ಮಿಕೊಂಡಿದೆ.

ಹಸಿವು

 ಹಸಿವು
--- ಜಯಂತ ಮಹಾಪಾತ್ರ (Hunger)

ದೇಹದಾಹದ ಸೆಳವು ನನ್ನಲ್ಲಿ ಇಷ್ಟೆಂದು ನಂಬಲಾರೆ;
ಮೀನುಗಾರನೆಂದ ಅಸಡ್ಡೆಯಿಂದ: ಬೇಕಾ ನಿನಗೆ ಅವಳು.
ನರಜಾಲದಂತೆ ಅವನ ಹಿಂದೆಳೆವ ಬಲೆ; ಶಬ್ದಗಳೇ
ತನ್ನ ಉಳಿವಿನ ಇರಾದೆ ಪೂಜ್ಯಗೊಳಿಸಿತೆಂಬಂತಿದ್ದ ಅವನು.
ಕಣ್ಣೊಳಗೆ ಬಿಳಿಯೆಲುಬು ತೊನೆಯುವುದ ಕಂಡೆ.

ಸ್ಟಾಂಪ ಪೇಪರ ಹಗರಣ ಮತ್ತು ನಮ್ಮ ರಾಜಕೀಯ ವ್ಯವಸ್ಥೆ.

ಕರೀಂ ಲಾಲಾ ತೆಲಗಿ ಮಂಪರು ಪರೀಕ್ಷೆಯಲ್ಲಿ ಬಾಯಿ ಬಿಟ್ಟರೂ ಅದನ್ನು ಅಲ್ಲಗಳೆಯುತ್ತಿರುವ ನಮ್ಮ ಲಜ್ಜೆಗೆಟ್ಟ ರಾಜಕಾರಣಿಗಳಿಗೆ ಏನು ಹೇಳೋಣ. ಬುದ್ಧಿಜೀವಿಗಳೆನಿಸಿಕೊಂಡು ಸಣ್ಣ ಸಣ್ಣ ವಿಚಾರಕ್ಕೆ ಕಚ್ಚಾಡುವ ಇವರು ಈಗ ಜನಸಾಮಾನ್ಯ ನಿಗೆ ಇದರ ನಿಜ ಸ್ಥಿತಿಯ ಅರಿವು ಮೂಡುವಂತೆ ಬರೆಯುವದು ಅವಶ್ಯವಲ್ಲವೆ. ಇಲ್ಲದಿದ್ದರೆ ಸಾಮಾನ್ಯರು ಇದನ್ನು ರಾಜಕೀಯ ಪಿತೂರಿ ಎಂದು ತಿಳಿಯುವ ಅಪಾಯ ಇಲ್ಲವೆ?

ಮಧ್ಯರಾತ್ರಿಯ ಹರಟೆಗಳು

ರಾತ್ರಿ ಊಟವಾದ ಮೇಲೆ, ಕೂಡಲೆ ಮಲಗದೇ, ಏನಾದರೂ ಕೆಲಸಕ್ಕೆ ಬೇಕಾದ್ದು- ಬೇಡದ್ದು ಹರಟುತ್ತ ಬಿದ್ದುಕೊಳ್ಳುವುದು, ಗಂಟೆ ಹನ್ನೆರಡು ಹೊಡೆದ ನಂತರವೇ, "ಏ ಸಾಕು ಮಲ್ಗನ್ರೋ" ಎಂದು ನಿದ್ರಿಸುವುದು, ನಮ್ಮ ಜನ್ಮಕ್ಕಂಟಿದ ವ್ಯಾಧಿ. ನಾವು ಹಿಂದಿನ ದಿನ ತಡರಾತ್ರಿಯವರೆಗೆ, ಏನು ಹರಟುತ್ತಿದ್ದೆವು ಎಂಬುದು, ದೇವರಾಣೆಯಾಗಿಯೂ ನಮಗೆ ಮರುದಿನ ಬೆಳಗ್ಗೆ ನೆನೆಪಿರುವುದಿಲ್ಲ. ಬಹುತೇಕ, ನಮ್ಮಂತಹ ಹೆಚ್ಚಿನ ಬ್ರಹ್ಮಚಾರಿ ಹುಡುಗರ ಹಣೆಬರಹ ಇದೇ ಇರಬೇಕು!