ಕನ್ನಡದಲ್ಲಿ ತಾಂತ್ರಿಕ ಪಾಠ
ಸ್ನೇಹಿತರೇ,
ಸಂಪದದ ಬಳಗದಲ್ಲಿ ಸುಮಾರು ಜನ ಸಿ, ವಿ.ಬಿ ಇತ್ಯಾದಿ ಪ್ರೋಗ್ರಾಮ್ ಲಾಂಗ್ವೇಜುಗಳಲ್ಲಿ ಪರಿಣಿತರಿರುವುದು ಸರಿಯಷ್ಟೇ. ನನಗೆ ಈ ಯಾವ ಭಾಷೆಗಳೂ ಗೊತ್ತಿಲ್ಲ. ಕಲಿಯಬೇಕು ಎನ್ನುವ ಉತ್ಸಾಹವಿದೆ. ಆದರೆ ಇಂಗ್ಲೀಷಿನಲ್ಲಿ ಉಪಯೋಗಿಸುವ ಪಾರಿಭಾಷಿಕ ಪದಗಳ ಅರ್ಥಗಳು ತಲೆಗೆ ಹೋಗುವುದು ಕಷ್ಟ ಸಾಧ್ಯ. ತಿಳಿದವರು ಯಾರಾದರೂ ಸಂಪದದ ಮೂಲಕವೇ, ಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ಹೇಳಿಕೊಡತ್ತೀರಾ? ಕಲಿಯುವರಿಗೆ ಅತ್ಯಂತ ಉಪಕಾರವಾಗುವುದು. ಬೇಕಿದ್ದರೆ ಇದಕ್ಕೇ ಒಂದು ವಿಭಾಗವನ್ನೂ ಪ್ರಾರಂಭಿಸಬಹುದಲ್ಲವೇ?
- Read more about ಕನ್ನಡದಲ್ಲಿ ತಾಂತ್ರಿಕ ಪಾಠ
- 3 comments
- Log in or register to post comments