ಭಾರತೀಯತೆ ಅಂದ್ರೆ ಏನು?
ಬರಹ
ನಮ್ಮಲ್ಲಿ ಹಲವರಿಗೆ ಭಾರತೀಯತೆ ಅಂದ್ರೆ ಹಿಂದಿಯಲ್ಲಿ ಮಾತಾಡೋದು, ಹಿಂದಿ ಚಿತ್ರಗಳನ್ನು ನೋಡುವುದು( ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ ) ಎನ್ನುವ ತಪ್ಪು ತಿಳುವಳಿಕೆ ಇದೆ. "ಒಂದು ದೇಶ, ಹಲವು ಭಾಷೆ, ಹಲವು ಸಂಸ್ಕೃತಿ" ಎನ್ನುವುದನ್ನು ನಾವು ಮರೆತಿದ್ದೇವೆಯೆ?
ಹಲವು ಬೇರೆ ಬೇರೆ ತನಗಳಿಂದ ಕೂಡಿ ಒಂದೇತನವನ್ನು ಮೈಗೂಡಿಸಿಕೊಂಡಿದೆ ಎನ್ನುವುದು ಅಪ್ಪಟ ದಿಟ.
ಹಿಂದಿಗೆ ಸಿಗುವಷ್ಟು ಕನ್ನಡಕ್ಕೆ ಅಥವಾ ತುಳುವಿಗೆ ಅಥವ ಕೊಡವಕ್ಕೆ ಬೆಲೆ ಸಿಗುತ್ತಿದಿಯೆ( ನಮ್ಮ ನೆಲೆದಲ್ಲಿಯೆ)? ಬ್ರಿಟಿಷರ ಅಡಿಯಾಳಾಗಿದ್ದ ನಾವು ಈಗ ಹಿಂದಿಗರ ಅಡಿಯಾಳಾಗಿದ್ದೇವೆ ಅನ್ನಿಸುತ್ತದೆ. :( . ಇತ್ತೀಚಿನ ಅಸ್ಸಾಂನಲ್ಲಿ ನಡೆದ ಘಟನೆಗಳು ಇದಕ್ಕೆ ಕನ್ನಡಿ ಹಿಡಿದಂತಿದೆ.
ಭಾರತೀಯತೆಯನ್ನು ಮುಂದೊಡ್ಡಿ ಕನ್ನಡ ನಾಡಿಗೆ ಹಲವು ವಿಷಯಗಳಲ್ಲಿ ವಂಚನೆ ಮಾಡಲಾಗಿದೆ.
ನಿಮಗೇನನಿಸುತ್ತದೆ?
---------
ಕೊನೆಯಾದಾಗಿ, "ಭಾರತೀಯತೆ ಅಂದ್ರೆ ಕೇವಲ ದಾಲ್-ಚಾವಲ್ ಅಲ್ಲ....ರಾಗಿಮುದ್ದೆ - ಉಪ್ಪೇಸರು ಸಾರೂ ಕೂಡ"
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಭಾರತೀಯತೆ ಅಂದ್ರೆ ಏನು?