ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"ವಿ ಟಿ ಯು ಸಹಯೋಗದಲ್ಲಿ ಕನ್ನಡದಲ್ಲಿ ಇಂಜಿನಿಯರಿಂಗ್ ಶಿಕ್ಷಣ" - ಅನಗತ್ಯ, ನೀವೇನಂತೀರಿ?

ಅಂತೂ ಇನ್ನೊಂದಿಷ್ಟು ನಿರುದ್ಯೋಗಿ ಕನ್ನಡಿಗ ತಂತ್ರಜ್ಞಾನ ಪದವೀಧರರನ್ನು ಹೊರಬಿಡಲು ನಮ್ಮ ಘನ ಸರ್ಕಾರ ತೀರ್ಮಾನಿಸಿದಂತಿದೆ.

Redheaded league ಅನುವಾದ

ಓದುಗರಿಗೆ ಸೂಚನೆ: ಪುಟ ೧೫೦ KB ಕಿಂತ ಹೆಚ್ಚು ದೊಡ್ಡದಿರುವುದರಿಂದ ಲೋಡ್ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು

ಕೆಂಗೂದಲ ಕಿಡಿಗೇಡಿಗಳು.

ಕಳೆದ ಶರದೃತುವಿನಲ್ಲೊಂದು ದಿನ, ನನ್ನ ಗೆಳೆಯ ಶೆರ್ಲಾಕ್ ಹೋಮ್ಸನ ಮನೆಗೆ ಹೋಗಿದ್ದೆ. ಅಲ್ಲಿ ಹಿರಿಯ ವ್ಯಕ್ತಿಯೊಬ್ಬ ನನ್ನ ಗೆಳೆಯನೊಂದಿಗೆ ಸುಧೀರ್ಘ ಚರ್ಚೆಯಲ್ಲಿ ಮುಳುಗಿದ್ದ. ಅವನು ನೋಡಲು ಸಾಕಷ್ಟು ದಪ್ಪನಾಗಿದ್ದು, ಕಡುಕೆಂಪು ಬಣ್ಣದ ಕೂದಲನ್ನು ಹೊಂದಿದ್ದ. ನಾನು ಅವರಿಬ್ಬರ ಮಧ್ಯೆ ಒಳನುಗ್ಗಿದ್ದಕ್ಕೆ ಕ್ಷಮೆ ಕೇಳಿ, ಬಾಗಿಲು ಮುಚ್ಚಿಕೊಂಡು ಹೊರಬರುವುದರಲ್ಲಿದ್ದೆ, ಅಷ್ಟರಲ್ಲಿ ನನ್ನನ್ನು ನೋಡಿದ ಹೋಮ್ಸ್, ಕೈ ಹಿಡಿದು, ಒಳಗೆ ಎಳೆದುಕೊಂಡು ಬಾಗಿಲು ಮುಚ್ಚಿದ.

"ಎಂಥಾ ಸಮಯ..?? ಸಮಯಕ್ಕೆ ಸರಿಯಾಗಿಯೇ ಬಂದಿದ್ದೀಯಾ ವಾಟ್ಸನ್." ಎಂದ ಲೋಕಾಭಿರಾಮವಾಗಿ.

"ಬಹುಶಃ ನೀನು ಯಾವುದೋ ಕೆಲಸದಲ್ಲಿರುವಂತೆ ಕಾಣುತ್ತದೆ"

"ಹೌದು, ಖಂಡಿತವಾಗಿಯೂ"

"ಹಾಗಿದ್ದರೆ ನಾನು ಪಕ್ಕದ ಕೋಣೆಯಲ್ಲಿ ನಿನಗಾಗಿ ಕಾಯುತ್ತೇನೆ."

"ಬೇಕಿಲ್ಲ.." ಎಂದವನೇ ಆ ಅಪರಿಚಿತ ವ್ಯಕ್ತಿಯ ಕಡೆ ತಿರುಗಿ, "ವಿಲ್ಸನ್, ಇವನು ನನ್ನ ಆತ್ಮೀಯ. ನಾನು ಕಂಡಿರುವ ಅತ್ಯಂತ ಕ್ಲಿಷ್ಟ ಹಾಗೂ ಸಂಕೀರ್ಣ ಕೇಸುಗಳನ್ನು ಬಗೆಹರಿಸಲು ನನ್ನ ಸಹಾಯಕನಾಗಿ ದುಡಿದಿದ್ದಾನೆ. ನಿಮ್ಮ ಕೇಸಿನಲ್ಲಿಯೂ ಇವನ ಸಹಾಯದ ಅಗತ್ಯವಿದೆ ಎಂದು ನನಗನ್ನಿಸುತ್ತಿದೆ" ಎಂದ.

ಆ ವ್ಯಕ್ತಿ ಕುಳಿತಿದ್ದ ಕುರ್ಚಿಯಿಂದ ಅರ್ಧ ಎದ್ದಂತೆ ಮಾಡಿ, ನನಗೆ ವಂದಿಸಿದ. ಅವನ ಕೊಬ್ಬಿನಿಂದಾವೃತವಾದ ಕಣ್ಣುಗಳಲ್ಲಿ ನನ್ನೆಡೆಗೆ ಒಂದು ಚಿಕ್ಕ ಪ್ರಶ್ನಾರ್ಥಕ ನೋಟ ಅಡಗಿದ್ದುದು ನನ್ನ ಗಮನಕ್ಕೆ ಬಂತು.