ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆನ್ ರಿಚರ್ಡ್ಸ್

ನಾನು ಯಾವಾಗಲೂ ಹೇಳಿಲ್ಲವೆ? ರಾಜಕೀಯದಲ್ಲಿ, ನಿಮ್ಮ ಶತ್ರುಗಳು ಕೂಡ ನಿಮಗೆ ನೋವುಂಟು ಮಾಡಲಾರರು, ಆದರೆ ನಿಮ್ಮ ಮಿತ್ರರು ನಿಮ್ಮನ್ನು ಕೊಂದು ಬಿಡಬಲ್ಲರು.

ಕಸದ ಡಬ್ಬ

ನಮ್ಮ ದೇಶ/ಊರು ಕಸದ ಡಬ್ಬ ಆಗುತ್ತಿದೆ.
Franceನಿ೦ದ ಒ೦ದು ಯುದ್ಢದ ಹಡಗು ನಮ್ಮ ದೇಶಕ್ಕೆ ತನ್ನ ಕೊನೆಯ ಯಾತ್ರೆಗೆ ಬರುತ್ತಿದೆ.

DVG "ರ೦ಗಣ್ಣನ ಕನಸ್ಸಿನ ದಿನಗಳು"ಬರೆದ M.R.ಶ್ರೀನಿವಾಸಮೂರ್ತಿ

"ರ೦ಗಣ್ಣನ ಕನಸ್ಸಿನ ದಿನಗಳು"ಬರೆದ M.R.ಶ್ರೀನಿವಾಸಮೂರ್ತಿ
ಅವರ ಬಗ್ಗೆ ಡಿ.ವಿ.ಜಿ. ಯವರ ಲೇಖನ-ಮೂಲ"ನೆನಪಿನ ಚಿತ್ರಗಳು"

ಬೆಂಕಿ ಬಿದ್ದ ಹುಲ್ಲಿನ ದಾರಿಯಲ್ಲಿ: ಕುಂತಿಬೆಟ್ಟ

[೧೩ ಚಿತ್ರ ಮತ್ತು ಎರಡು ವೀಡಿಯೋ ಇವೆ. ನೋಡಿ. ಇವನ್ನು ನಾನೇ ಸೇರಿಸುವಷ್ಟು ಕೌಶಲ ಇಲ್ಲ. ಗೆಳೆಯ ನಾಡಿಗ್ ಅವನ್ನೆಲ್ಲ ಸೇರಿಸುತ್ತೇನೆ ಅಂದಿದ್ದಾರೆ.]

ನಿನ್ನೆ, ೧೫ ಜನವರಿ ೨೦೦೬, ಕುಂತಿ ಬೆಟ್ಟಕ್ಕೆ ಹೋಗಿದ್ದೆ.

ಕುಂತಿ ಬೆಟ್ಟ ಪಾಂಡವಪುರದ ಹತ್ತಿರ ಇದೆ. ಮೈಸೂರಿನಿಂದ ಹೋಗುವುದಾದರೆ ಶ್ರೀರಂಗಪಟ್ಟಣ ದಾಟಿದ ಕೂಡಲೆ ಎಡಕ್ಕೆ ತಿರುಗಿ, ಬೆಂಗಳೂರಿನ ಕಡೆಯಿಂದ ಹೋಗುವುದಾದರೆ ಶ್ರೀರಂಗಪಟ್ಟಣಕ್ಕೆ ಮೊದಲೇ ಬಲಕ್ಕೆ ತಿರುಗಿ, ಪಾಂಡವಪುರ ರೇಲ್ವೇ ಸ್ಟೇಶನ್ನಿನ ಮುಂದಿನ ರಸ್ತೆಯಲ್ಲಿ ಸಾಗಿ, ಪಾಂಡವಪುರ ಊರು ಸೇರಿ, ಅಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮುಂದಿನ ಸರ್ಕಲಿನಲ್ಲಿ ಬಲಕ್ಕೆ ತಿರುಗಿ ಎರಡು ಕಿಮೀ ಸಾಗಿದರೆ ನಿಮ್ಮ ಎಡ ಬದಿಗೆ ಒಂದು ಕಮಾನು ಗೇಟು, ಮತ್ತು ಅದರ ಮೇಲೆ ಕುಂತಿ ಬೆಟ್ಟ ಎಂದು ಬರೆದಿರುವುದು ಕಾಣುತ್ತದೆ. ಸುಮಾರು ಒಂದು ಕಿಮೀ ಸಾಗಿದರೆ ನಿಮ್ಮ ಎಡಗಡೆ ಒಂದು ಜೂನಿಯರ್ ಕಾಲೇಜಿನ ಬಿಲ್ಡಿಂಗ್, ಅಲ್ಲೇ ಮುಂದೆ ಮೆಟ್ಟಿಲುಗಳು.

ಕುಂತಿಬೆಟ್ಟದಲ್ಲಿ ನಂದಿ
 

ಮೆಟ್ಟಿಲುಗಳು ಒಂದು ನೂರು ಹತ್ತಿದರೆ ಸಮತಟ್ಟಾದ ಜಾಗ. ಮರಗಳ ಗುಂಪು, ಒಂದು ನೀರಿನ ಹೊಂಡ, ಒಂದೆರಡು ಹಳೆಯ ದೇವಾಲಯಗಳು, ಒಂದು ಕಲ್ಯಾಣ ಮಂಟಪ ಕಾಣುತ್ತವೆ. ಸುದಾರಿಸಿಕೊಳ್ಳಲು, ಸುಮ್ಮನೆ ಕೂರಲು ಒಳ್ಳೆಯ ಜಾಗ. ಅಲ್ಲೇ ದೊಡ್ಡ ಬಂಡೆಯ ಮೇಲೆ ಗಣೇಶನನ್ನು ಕೆತ್ತಿದ್ದಾರೆ. ಗಣೇಶನ ಎಡ ಬದಿಗೆ ಒಂದು ಪುಟ್ಟ ಆವರಣದಲ್ಲಿ ದೊಡ್ಡ ನಂದಿಯ ವಿಗ್ರಹ ಇದೆ.

 

ಒನಕೆ ಬೆಟ್ಟದ ಇಳಿಜಾರು

ದೇವಾಲಯಗಳ ಹಿಂದೆ ಇರುವುದೇ ಕುಂತಿ ಬೆಟ್ಟ. ಬೆಟ್ಟ ಅನ್ನುವ ಹೆಸರು ಕೊಡುವಷ್ಟು ದೊಡ್ಡದಲ್ಲ, ಗುಡ್ಡದ ಹಾಗೆ ಇದೆ. ಕುಂತಿ ಬೆಟ್ಟಕ್ಕೆ ಮುಖ ಮಾಡಿ ನಿಂತರೆ ನಮ್ಮ ಬೆನ್ನ ಹಿಂದೆ ಇನ್ನೊಂದು ಸ್ವಲ್ಪ ದೊಡ್ಡ ಗುಡ್ಡ. ಅದನ್ನು ಒನಕೆ ಬೆಟ್ಟ ಅನ್ನುತ್ತಾರಂತೆ. ಇವಕ್ಕೆ ಯಾಕೆ ಆ ಹೆಸರು ಬಂತೋ ಗೊತ್ತಿಲ್ಲ. ಕುಂತಿ ಬೆಟ್ಟ, ಪಾಂಡವ ಪುರ ಇವುಗಳನ್ನು ನೋಡಿದರೆ ನಮ್ಮ ಜನ ಮಹಾಭಾರತ ಇಲ್ಲೂ ನಡೆದಿತ್ತು ಅನ್ನುವ ಭಾವನಾತ್ಮಕತೆಯಿಂದ ಆ ಹೆಸರುಗಳನ್ನು ಕೊಟ್ಟಿರಬಹುದು ಅನ್ನಿಸುತ್ತದೆ. ಆದರೆ ನೆನಪು ಬೇರೆ ಇನ್ನೂ ಕತೆಗಳನ್ನು ಹೇಳುತ್ತದೆ. ಪಾಂದವ ಪುರ ಮೊದಲಿಗೆ ಈರೋಡು ಎಂದು ಕರೆಸಿಕೊಳ್ಳುತ್ತಿತ್ತು ಎಂದು ನಮ್ಮ ಅಪ್ಪ ಹೇಳುತ್ತಿದ್ದರು. ಆಮೇಲೆ ಟಿಪ್ಪೂನ ಕಾಲದಲ್ಲಿ ಇಂಗ್ಲಿಷರ ವಿರುದ್ಧ ಅವನ ಯುದ್ಧಕ್ಕೆ ನೆರವು ನೀಡಲು ಬಂದ ಫ್ರೆಂಚ್ ಸೈನ್ಯ ಬೀಡು ಬಿಟ್ಟ ಜಾಗವೂ ಇದೇ. ಅದನ್ನು ಫ್ರೆಂಚ್ ರಾಕ್ಸ್ ಅನ್ನುತ್ತಿದ್ದರು. ಎಂಎ ಓದುವ ಕಾಲಕ್ಕೆ, ೧೯೭೩ರ ಸುಮಾರಿನಲ್ಲಿ ಪಾಂಡವ ಪುರ ಸಕ್ಕರೆ ಕಾರ್ಖಾನೆಯ ಹಿಂಭಾಗದಲ್ಲಿ, ರೇಲು ರಸ್ತೆಯ ಪಕ್ಕ ಇಗೋ ಇಲ್ಲಿ ಫ್ರೆಂಚ್ ಸೈನ್ಯ ಇತ್ತು, ಇಲ್ಲಿ ಬ್ರಿಟಿಷ್ ಸೈನ್ಯ ಇತ್ತು ಎಂಬ ಬೋರ್ಡುಗಳಿದ್ದವು. ರೈಲಿನಲ್ಲಿ ಓಡಾಡುವಾಗೆಲ್ಲ ಅದನ್ನು ನೋಡುತ್ತಿದ್ದ ನೆನಪು ಇದೆ. ಈಗ ಆ ಬೋರ್ಡುಗಳು ಇಲ್ಲ.
ಇರಲಿ, ಕುಂತಿ ಬೆಟ್ಟ ಸಮುದ್ರ ಮಟ್ಟದಿಂದ ೨೨೦೦ ಅಡಿ ಎತ್ತರ ಎಂದು ಕೆಲವೆಡೆಗಳಲ್ಲಿ ಓದಿದ್ದೇನೆ. ಆದರೆ ಪಾಂಡವ ಪುರ, ಮತ್ತು ಏರಿ ಬಂದ ಮೆಟ್ಟಿಲುಗಳನ್ನು ಬಿಟ್ಟರೆ ದೇವಾಲಯದ ಹಿಂದೆ ಸುಮಾರು ೨೫೦-೩೦೦ ಅಡಿ ಎತ್ತರದ ಗುಡ್ಡ. 

ಇಲ್ಲಿ ಚೆಲುವು ಇರುವುದು ಗುಡ್ಡದ ಬಂಡೆಗಳ ಆಕಾರಗಳಲ್ಲಿ. ನಿಮ್ಮ ನಿಮ್ಮ ಕಲ್ಪನೆಗೆ ಅನುಗುಣವಾಗಿ ಯಾವ ಯಾವ ಆಕಾರದ ಕಲ್ಲುಗಳೆಲ್ಲ ಇವೆ!
ಹತ್ತಿದೆವು ನಾವು ಎಂಟು ಜನ. ತಂಡದ ಚಿಕ್ಕ ಸದಸ್ಯೆ ೧೨ ವರ್ಷದ ಶಿವಗಂಗಾ. ಜಾಂಬವಂತ ನಾನೇ. ನನ್ನ ಜೊತೆ ನನ್ನ ಶ್ರೀಮತಿ. ಆಕೆ ಅರ್ಧ ಹತ್ತಿ ಸುಸ್ತಾಗಿ ಕುಳಿತಳು. ಅವಳೊಡನೆ ಇನ್ನೊಬ್ಬ ಹದಿ ಹರೆಯದ ನಾಗರಿಕ ಹುಡುಗ ಕೂಡ ಹತ್ತಲಾರದೆ ಉಳಿದ. ಉಳಿದಂತೆ ನಾನು, ನನ್ನೊಡನೆ ಹದಿ ಹರೆಯದ ನಮ್ಮ ಕುಟುಂಬದ ಸದಸ್ಯರು.

ನಾ ಕಂಡದ್ದು

ಇದು ನಿನ್ನೆಯ ಸಂಜೆ ನಾನು ನೋಡಿದ ಒಂದು ಘಟನೆ.

ಎಂದಿನಂತೆ ೬.೧೪ರ ಬೊರಿವಿಲಿ ಲೋಕಲ್ ಹಿಡಿಯಲು ಚರ್ಚ್‍ಗೇಟ್ ಸ್ಟೇಷನ್ನಿಗೆ ಬಂದೆ. ಅದೇ ಪ್ಲಾಟ್‍ಫಾರ್ಮ್‍ಗೆ ಮೊದಲು ಬರುವ ಗಾಡಿ ೬.೦೮ರ ಭಾಯಂದರ್ ಫಾಸ್ಟ್ ಲೋಕಲ್. ಪಕ್ಕದ ಪ್ಲಾಟ್‍ಫಾರ್ಂ‍ಗೆ ೬.೧೧ರ ವಿರಾರದ ಗಾಡಿ ಬರುತ್ತದೆ. ಇಲ್ಲಿಯ ಲೋಕಲ್ ಬಗ್ಗೆ ಒಂದು ಸಣ್ಣ ಪೀಠಿಕೆ.

ನನ್ನ ನ್ಯೂ ಇಯರ್ ರೆಸಲ್ಲೂಷನ್ ಗಳು

ವರ್ಷಾರಂಭದಲ್ಲಿ ಹೊಸ ವರ್ಷದ ರೆಸೊಲ್ಯೂಷನ್ ಗಳನ್ನು ನಿರ್ಧರಿಸೋದು, ಅದರ ಬಗ್ಗೆ ವಿನೋದಪೂರ್ಣವಾಗಿ ಬರೆಯೋದು ಈಗ ಸಾಮಾನ್ಯ ವಿಷಯವಾಗಿರುವಾಗ, ನಾನು ಬರೆಯೋದ್ರಲ್ಲೇನು