ಮುನ್ನುಡಿ

ಮುನ್ನುಡಿ

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು

 ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

... ...

ಇರುವುದೆಲ್ಲವ ಬಿಟ್ಟು ಇರುದದರೆಡೆಗೆ ತುಡಿವುದೇ ಜೀವನ

 

ಹೀಗೆಂದು ಹಾಡಿದೆ ಗೋಪಾಲಕೃಷ್ಣ ಅಡಿಗರ ಕವಿವಾಣಿ. ಇದ್ದನ್ನು ಈ ಕವಿ ಯಾರ ನೆನೆದು ಹಾಡಿದರೋ ತಿಳಿಯದು, ಆದರೆ ಸಪ್ತಸಾಗರದಾಚೆಯೆಲ್ಲೋ ಮನದಾಳದಲ್ಲಿ ದಿನವೂ ತಾಯಿ ನಾಡು-ನುಡಿಗಳನ್ನು ನೆನೆದು ಹಂಬಲಿಸುವ ನನ್ನಂಥ ಅನಿವಾಸಿಗಳಿಗೆ ಸರಿಯಾದ ಉಪಮೆಯಾಗಿದೆ.
ಈಗಿನ, ಇಲ್ಲಿನ ದಿನನಿತ್ಯ ಜೀವನದ ಪರದಾಟ-ಜಂಜಾಟ-ಓಡಾಟ-ಹೋರಾಟದಲ್ಲಿ ಕೆಲವು ಸಾರಿ ಬದುಕಿನ ಸಣ್ಣ ಪುಟ್ಟ ನೆನಪುಗಳು ಮತ್ತು ಅವುಗಳು ಕೊಡುವ ಮುದವಾದ ಆನಂದವನ್ನು ಆಸ್ವಾದಿಸುವ ಅವಕಾಶಗಳೇ ವಿರಳ. ಅದನ್ನು ಹೋಗಲಾಡಿಸಲು, ನನ್ನ ಬೆಂಗಳೂರಿನ ಗತ ಜೀವನದ ಕೆಲವು ನೆನಪುಗಳು, ಇಷ್ಟವಾದ ಸಂಗೀತ, ಸಾಹಿತ್ಯ, ನಾಟಕ ಮತ್ತು ಕನ್ನಡ ನಾಡು-ನುಡಿ ಇವುಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಮೆಲುಕು ಹಾಕುವುದೇ ಈ ನನ್ನ blogನ ಉದ್ದೇಶ.

Rating
No votes yet