ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಿಕೂನ್‌ಗುನ್ಯಾ ಮತ್ತು ಕೋಳಿ ಮಾಂಸ

ನನಗೆ ಎರಡು ವಿಷಯಗಳ ಬಗ್ಗೆ ಅತೀವ ದುಖಃವಿದೆ. ಮೊದಲನೆಯದು, ನಾನು ಉತ್ತಮ ಹಾಡುಗಾರನಲ್ಲನಾದ್ದರಿಂದ ಕಾಲೇಜಿನಲ್ಲಿ ಹುಡುಗಿಯರಿಂದ "He sings too good ಕಣೇ, so cute na" ಎಂದು ಹೇಳಿಸಿಕೊಳ್ಳಲು ಸಾಧ್ಯವಾಗದೇ ಇದ್ದಿದ್ದು ಮತ್ತು ಎರಡನೆಯದು ನಾನು ಸಸ್ಯಾಹಾರಿಯಾದ್ದರಿಂದ ಜಗತ್ತಿನ ನಾನಾ ಬಗೆಯ ಮಾಂಸಾಹಾರದ ರುಚಿಯನ್ನು ಸವಿಯುವ ಅವಕಾಶವನ್ನ ಕಳೆದುಕೊಂಡಿದ್ದು. ಇದರಲ್ಲಿ ಮೊದಲನೆಯ ವಿಷಯವನ್ನ ಸರಿಪಡಿಸುವುದು "ಸಂಗೀತಾಭ್ಯಾಸ" ಮುಂತಾದ ಕಷ್ಟಪಡಬೇಕಾದ ಮಾರ್ಗವನ್ನ ಒಳಗೊಂಡಿದೆ!

ಕಲ್ಲೆಂದು ತಿಳಿದು ವಜ್ರವನ್ನು ಎಸೆದೆನೇ ?

ಇತ್ತೀಚೆಗೆ ಜಯಂತ ಕಾಯ್ಕಿಣಿಯವರ ' ಶಬ್ದತೀರ' ಪುಸ್ತಕ ಬಂದಿದ್ದು ಅವರ Dots and lines ಜತೆ ಬೆಂಗಳೂರಿನಿಂದ ತರಿಸಿದ್ದೇನೆ. Dots and lines ಅನ್ನು ನನ್ನ ಅನೇಕ ಮಿತ್ರರು ಓದಿ ಸಂತೋಷಪಡುತ್ತಿದ್ದಾರೆ.

ಉಚ್ಛಾರದ ಅವಾಂತರ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವರಿದ್ದಾರೆ, ಜೀವನದಲ್ಲಿ ೮೦ ಶೇಕಡದಷ್ಟು ಸಮಯ ತುಳು ಭಾಷೆಯನ್ನು ಮಾತ್ರ ಮಾತನಾಡಿ ಗೊತ್ತಿದ್ದವರು. ಇವರಿಗೆ ಕನ್ನಡದ 'ಳ' ಉಚ್ಛಾರ ಯಾವತ್ತಿಗೂ ಮರೀಚಿಕೆಯೇ. 'ಳ' ಇದ್ದಲ್ಲಿ 'ಲ' ಹಾಕಿಯೇ ಇವರುಗಳು ಮಾತನಾಡುವುದು. ಇದರರ್ಥ ಎಲ್ಲಾ ತುಳುವರಿಗೆ 'ಳ' ಉಚ್ಛಾರ ಬರುದಿಲ್ಲವೆಂದೇನಿಲ್ಲ. ಅತಿ ಕಡಿಮೆ ಕನ್ನಡ ಬಳಸುವವರಲ್ಲಿ ಕನ್ನಡ ಮಾತನಾಡಿದರೆ 'ಳ' ಎಂಬಲ್ಲಿ 'ಲ' ಬಂದು ಮನೋರಂಜನೆ ಗ್ಯಾರಂಟೀಡ್. ಎಂತಹ ವಿಪರ್ಯಾಸ ನೋಡಿ, 'ತುಳು' ಎಂಬ ಶಬ್ದದಲ್ಲೇ 'ಳ' ಉಚ್ಛಾರ ಇದೆ, ಆದರೂ....

ವಾಸ್ತವವೆಂದರೆ ವಾಸ್ತವವೇ?

ವಾಸ್ತವ ಎನ್ನುವುದು ಮಾಯೆ ಎಂದು ನಂಬುವುದಿದೆ. ಅದೊಂದು ಆದಿಭೌತಿಕ ನಿಲುವು. ಆದರೆ ಭೌತಿಕ ನೆಲೆಯಲ್ಲೂ ಕೂಡ ಈ ಕುರಿತು ಅದೇ ತರಹದ ನೋಟ ನಾವು ಕಾಣುತ್ತೇವೆ. ಅಂದರೆ, ವಾಸ್ತವವಾಗಿ ವಾಸ್ತವವೆಂದರೆ ಕಥನಗಳ ಮೂಲಕ ನಾವು ಕಟ್ಟಿಕೊಳ್ಳುವ ನಂಬಿಕೆಗಳು ಎಂಬರ್ಥದಲ್ಲಿ. ನಾವು ಕಾಣುವುದೆಲ್ಲ ಇರುವಹಾಗೇ ನಮಗೆ ಅರಿವಿಗೆ ಬರುತ್ತದೆ ಎನ್ನುವುದು ಕಲ್ಪನೆಯೇ ಸರಿ. ಸಮಾಜ ಜೀವಿಗಳಾದ ನಮಗೆ, ಸಾಮಾಜಿಕ ಕಥನಗಳು ಕಟ್ಟಿಕೊಟ್ಟಿರುವ ತಿಳಿವಿನ ಪ್ರಕಾರಗಳ ಹೊರತು ಇನ್ನೇನೂ ಅರಿವಿನ ಸಾಧ್ಯತೆ ಇಲ್ಲ. ಹಾಗಾಗಿಯೇ ಭಾಷೆಯ ಹೊರಗೆ ಏನೂ ಇಲ್ಲ ಎಂದು ಕೆಲವರ ಅಂಬೋಣ.
ಇದನ್ನು ನಿಧಾನವಾಗಿ ನೋಡೋಣ. ನನ್ನ ಕಣ್ಣ ಮುಂದೆ ಬಾಳೆಹಣ್ಣಿದೆ. ಆ ಬಾಳೆ ಹಣ್ಣು ವಾಸ್ತವವೋ, ಕಥನವೋ? ಭೌತಿಕವಾಗಿ ಬಾಳೆಹಣ್ಣಿರುವುದು ಪ್ರಶ್ನಾತೀತ. ಆದರೆ ಅದು ಬಾಳೆ ಹಣ್ಣು ಎಂಬ ನನ್ನೊಳಗಿನ ಅರಿವು ಹಾಗು ಆ ಭೌತಿಕ ವಸ್ತುವಿನ ನಡುವೆ ಸಾಮ್ಯವಿದ್ದರೆ ಅದಕ್ಕೆ ಆ ವಸ್ತುವಿನ ಬಗ್ಗೆ ನಾನು ಆಂತರಿಸಿಕೊಂಡ ಸಾಮಾಜಿಕ ಕಥನಗಳೇ ಕಾರಣ. ಯಾಕೆಂದರೆ ಆ ಭೌತಿಕ ವಸ್ತು ನನಗೆ ಒಂದು ವಿಶಿಷ್ಟ ಬಗೆಯ ಹಣ್ಣಾಗಿ, ವಿಶಿಷ್ಟ ಗುಣಗಳೊಂದಿಗೆ, ವಿಶಿಷ್ಟ ಉಪಯೋಗಗಳಿರುವ ವಸ್ತುವಾಗಿ ಅರಿವಾಗುತ್ತಿದೆ. ಈ ಎಲ್ಲ (ಇಂತಹ ಎಲ್ಲ) ತಿಳಿವು ಇರದಿದ್ದರೆ ಆ ವಸ್ತು ಏನೊಂದೂ ಆಗಲಾರದು. (ಅದು ವಸ್ತು ಎಂದು ತಿಳಿವುದರ ಪ್ರಕ್ರಿಯೆಯೂ ಹೀಗೆಯೇ ಇರುತ್ತದೆಯಾಗಿ). ಅಂದರೆ, ಬಾಳೆ ಹಣ್ಣು ಬಾಳೆ ಹಣ್ಣಾಗಿರುವುದು ಅದರದ್ದೇ ಆದ ಗುಣಲಕ್ಷಣಗಳಿಂದಾದರೂ, ಅದು ನನಗೆ ಬಾಳೆಹಣ್ಣಾಗುವುದು ಅದರ ಹೊರತಾದ ನನ್ನ ಸಾಮಾಜಿಕ/ಸಾಂಸ್ಕೃತಿಕ ಪ್ರಜ್ನಾವಲಯದ ಮೂಲಕವೇ.
ಹೀಗೆ ಶುರುಮಾಡಿದರೆ ಕಥನಗಳು ಹೇಗೆ ನಮ್ಮ ನಿತ್ಯ ವ್ಯವಹಾರಗಳನ್ನು ನಿರ್ಮಿಸುತ್ತವೆ ಎಂದು ಅರಿವಿಗೆ ಬರುತ್ತದೆ. Social Text ಎಂಬ ಪತ್ರಿಕೆಯಲ್ಲಿ ನಡೆದ ಗಫಲಾ ಒಂದರಲ್ಲಿ ಸೋಕಲ್ ಎಂಬ ಭೌತ ಶಾಸ್ತ್ರಜ್ನನು ಈ ಥರಹದ ವಿಚಾರಗಳನ್ನು ಸುಳ್ಳು ಎಂದು ಸಾಧಿಸಲು ಆ ಪತ್ರಿಕೆಯನ್ನೇ ವಿಡಂಬಿಸುವ ಒಂದು ಪ್ರಯೋಗ ಮಾಡಿದ. (http://www.physics.nyu.edu/faculty/sokal/). ವಾಸ್ತವ ಎನ್ನುವುದು ಸಾಮಾಜಿಕ ಕಥನ ಎನ್ನುವವರು ತನ್ನ ಹತ್ತನೇ ಮಹಡಿಯ ಮನೆಯ ಬಾಲ್ಕನಿಯಿಂದ ಹೊರ ಜಿಗಿದು ವಾಸ್ತವದ ಸತ್ಯತೆಯನ್ನು ಪರೀಕ್ಷಿಸಬಹುದು ಎಂದು ವ್ಯಂಗವಾಗಿ ಈ ವಿಚಾರವನ್ನು ಟೀಕಿಸಿದ. ಅವನು ಹೇಳುವುದು ಸರಿ. ಸೃಷ್ಟಿಯ ಆಗುಹೋಗುಗಳನ್ನು ಸಮಾಜ ಸೃಷ್ಟಿಸಿದೆ ಎನ್ನುವುದು ಸರಿ ಅಲ್ಲ. ಆದರೆ ಅವನು ಮುಗ್ಗರಿಸುವುದು ಇಲ್ಲಿಯೇ. ಸಾಮಾಜಿಕ ಕಥನಾವಾದ ಎನ್ನುವುದೆಂದರೆ, ಸ್ಥಿತಿಯ ಕುರಿತಾದ ನಮ್ಮ ಜ್ನಾನ ಕಥನವೆಂದೇ ಹೊರತೂ, ಸ್ಥಿತಿಯೇ ಕಥನವೆಂದಲ್ಲ. ಗುರುತ್ವಾಕರ್ಷಣ ಬಲದ ಕುರಿತು ನಮ್ಮ ಜ್ನಾನ ಕಥನವೆಂದೇ ಹೊರತೂ, ಆ ಬಲವೇ ಕಥನವೆಂದಲ್ಲ.
ಜ್ನಾನದ ಕಟ್ಟುಕೊಳ್ಳುವಿಕೆಯ ಈ ನಮ್ಮ ವ್ಯವಹಾರವನ್ನು ನಾವು ಸಾಮಾನ್ಯವಾಗಿ ನಿರ್ಲಕ್ಷಿಸಿ ಅದನ್ನು ನಿತ್ಯಸತ್ಯವೆಂದು ಸ್ವೀಕರಿಸಿಬಿಡುವುದು ಹಲವು ಬಗೆಯ ಗೊಂದಲಗಳನ್ನು ಹಾಗೂ ತೊಂದರೆಗಳನ್ನು ಹುಟ್ಟಿಸುತ್ತದೆ. ಇದು ಮಾನವ, ಮಾನವನ ಕುರಿತಾಗಿ ಕಟ್ಟಿಕೊಳ್ಳುವ ಜ್ನಾನಗಳಲ್ಲಿ ತನ್ನ ವಿಪರೀತಗಳನ್ನು ಪ್ರದರ್ಶಿಸುತ್ತದೆ. ಉದಾಹರಣೆಯಾಗಿ ಭಾರತದಲ್ಲಿ ಪಾಕಿಸ್ತಾನದ ಬಗ್ಗೆ ಇರುವ ನಂಬಿಕೆಗಳನ್ನೇ ನೋಡಬಹುದು. ಸಾಮನ್ಯವಾಗಿ ಇದು ನೆಗೆಟಿವ್ ಆದ ನಂಬಿಕೆ. ಅಂದರೆ ಪಾಕಿಸ್ತಾನಿಗಳು ಹಾಗೆ ಹೀಗೆ ಎಂಬಲ್ಲಿ, ಯಾರು ಯಾರು ಹಾಗೆ, ಎಲ್ಲರೂ ಹಾಗಿರುತ್ತಾರೆಯೇ ಎಂದೆಲ್ಲ ಯೋಚಿಸದೇ ಒಂದು ತರದ ಸಾರ್ವತ್ರಿಕ ರೂಪಿನಲ್ಲಿ ನಾವು ಪಾಕಿಸ್ತಾನ ಹಾಗೂ ಅಲ್ಲಿಯ ಜನರನ್ನು ಕಲ್ಪಿಸಿಕೊಂಡು ಬಿಡುತ್ತೇವೆ. ಹಾಗೆಯೇ, ವಸಾಹತುಶಾಹಿಯ ಸಮಯದಲ್ಲಿ ಭಾರತೀಯರ ಬಗ್ಗೆ ಬ್ರಿಟೀಷರಿಗಿದ್ದ ಕೆಲವು ನಂಬಿಕೆಗಳು. ಎಡ್ವರ್ಡ ಸಾಯಿದ್ ಅನ್ನುವಂತೇ ಹೀಗೆ ಮಾಡುವಾಗ ಆಗುವುದೇನೆಂದರೆ, ಮೊದಲು ಸಿಂಹ ಹೀಗಿರುತ್ತದೆ ಎಂಬ ವಿವರಣೆ ಯಾವುದೋ ಒಂದು ಅನುಭವದ ಮೇಲೆ ಹುಟ್ಟಿ ಆಮೇಲೆ, ಹೀಗಿರುವುದೆಲ್ಲ ಸಿಂಹವೇ, ಸಿಂಹ ಹೀಗೇ ಇರಬೇಕು, ನಮಗೆ ಗೊತ್ತಿರುವುದೋಂದೇ ಸಿಂಹ, ಇಲ್ಲದಿದ್ದರೆ ಅದು ಸಿಂಹವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಬರುತ್ತದೆ.
ದಿನದಿನದ ವ್ಯವಹಾರಗಳಲ್ಲಿ ಕೂಡ ನಾವು ಕಥಿತ ಜ್ನಾನವನ್ನು ಇತ್ಯಾತ್ಮಕ ಜ್ನಾನವೆಂದು ಸ್ವೀಕರಿಸಿ ಗೊಂದಲದೊಳಗಿರುತ್ತೇವೆ. ಅಂದರೆ, ನಮ್ಮ ನಂಬಿಕೆಗಳು ಮೇಲ್ನೋಟಕ್ಕೆ ಸತ್ಯ ಅನ್ನಿಸಿದರೂ, ಅವು ಸಾಂದರ್ಭಿಕ ಸಾಮಾಜಿಕ ಅಧಿಕಾರಗಳ ಜಾಲದಲ್ಲಿ ಹುಟ್ಟುಕೊಂಡ ಐಡಿಯಾಲಜಿಗಳನ್ನವಲಂಬಿಸಿರುತ್ತವೆ.

ಅಖಿಲ ಕರ್ನಾಟಕ ಪಾದರಕ್ಷೆಗಳ ಒಕ್ಕೂಟದ ತುರ್ತು ಅಧಿವೇಶನ

     ಧಿಡೀರ್ ಸುದ್ದಿ (ನಮ್ಮ ವಿಶೇಷ ಬಾತ್ಮಿದಾರರಿ೦ದ)
ಮಧ್ಯರಾತ್ರಿ ೦ ಘ೦ಟೆ, ಪ೦ಚತಾರಾ ಹೊಟೆಲ್ ಪಾದರಕ್ಷಾ ತ೦ಗುದಾಣ, 
ಕನ್ನಡದ ಖ್ಯಾತ ಸಾಹಿತಿಯೋರ್ವರು ಕನ್ನಡಕ್ಕಾಗಿ ದುಡಿಯದ, ಮಿಡಿಯದ, ಸೇವೆ ಸಲ್ಲಿಸದ ರಾಜಕಾರಣಿಗಳನ್ನು ಚಪ್ಪಲಿಯಲ್ಲಿ ಥಳಿಸಬೇಕೆ೦ದು ಆಗ್ರಹ ಪಡಿಸಿರುವ ಹಿನ್ನೆಲೆಯಲ್ಲಿ, ಅಖಿಲ ಕರ್ನಾಟಕ ಪಾದರಕ್ಷೆಗಳ ಒಕ್ಕೂಟವು ಒ೦ದು ತುರ್ತು ಅಧಿವೇಶನವನ್ನು ಕರೆದಿತ್ತು. ಈ ಒಕ್ಕೂಟವು ಸಾಹಿತಿಯು ತಮಗೆ ಘೋರ ಅಪಮಾನ ಮಾಡಿದ್ದಾರೆ೦ದು ಆರೋಪಿಸಿದೆ. ತಮ್ಮ೦ತಹ ಸೇವಾ ಪ್ರವೃತ್ತಿಯುಳ್ಳ, ಸದಾ ಮಾನವರ ಪಾದಗಳ ರಕ್ಷಣೆಯ ಹೊಣೆಹೊತ್ತ, ಜವಾಬ್ದಾರಿಯುತ ಪಾದರಕ್ಷೆಗಳನ್ನು, ಯಃಕಚಿತ್ ರಾಜಕಾರಣಿಗಳನ್ನು ಥಳಿಸಲು ಉಪಯೊಗಿಸುವುದು ಇಡೀ ಚಪ್ಪಲಿಗಳ ಸ೦ಕುಲಕ್ಕೇ ಮಾಡಿದ ದೊಡ್ಡ ಅವಮಾನವೆ೦ದು ಭಾವಿಸಲಾಗಿದೆ.  ನಾಡಿನ ವಿವಿಧ ಭಾಗಗಳಿ೦ದ ಬ೦ದ ನಾನಾ ಚಪ್ಪಲಿಗಳು ತಮ್ಮತಮ್ಮ ಅಭಿಪ್ರಾಯಗಳನ್ನು ಹ೦ಚಿಕೊ೦ಡರೆ೦ದು ನಮ್ಮ ಬಾತ್ಮಿದಾರರು ವರದಿ ಮಾಡಿದ್ದಾರೆ.  ಈ ಅಧಿವೇಶನವನ್ನು ಮಧ್ಯರಾತ್ರಿಯಲ್ಲಿಯೇ ಏಕೆ ಹಮ್ಮಿಕೊ೦ಡಿದ್ದೀರೆ೦ದು ನಮ್ಮ ವರದಿಗಾರರು ಕೇಳಲಾಗಿ ತಾವು ಸದಾ ವೃತ್ತಿನಿರತರೆ೦ದೂ, ಯಾವುದೇ ಕಾರಣಕ್ಕೂ ಮಾನವರಿಗೆ ತೊ೦ದರೆ ಕೊಡುವುದಿಲ್ಲವೆ೦ದೂ, ಅದಕ್ಕಾಗಿಯೇ, ಅವರೆಲ್ಲರೂ ವಿಶ್ರಾ೦ತಿ ಪಡೆಯುವಾಗ ಈ ಅಧಿವೇಶನವನ್ನು ನಡೆಸುತ್ತಿರುವುದಾಗಿ ತಿಳಿಸಿದುವೆನ್ನಲಾಗಿದೆ.

ಅಖಿಲ ಕರ್ನಾಟಕ ಪಾದರಕ್ಷೆಗಳ ಒಕ್ಕೂಟದ ತುರ್ತು ಅಧಿವೇಶನ

ಧಿಡೀರ್ ಸುದ್ದಿ (ನಮ್ಮ ವಿಶೇಷ ಬಾತ್ಮಿದಾರರಿ೦ದ)
ಮಧ್ಯರಾತ್ರಿ ೦ ಘ೦ಟೆ, ಪ೦ಚತಾರಾ ಹೊಟೆಲ್ ಪಾದರಕ್ಷಾ ತ೦ಗುದಾಣ,
ಕನ್ನಡದ ಖ್ಯಾತ ಸಾಹಿತಿಯೋರ್ವರು ಕನ್ನಡಕ್ಕಾಗಿ ದುಡಿಯದ, ಮಿಡಿಯದ, ಸೇವೆ ಸಲ್ಲಿಸದ ರಾಜಕಾರಣಿಗಳನ್ನು ಚಪ್ಪಲಿಯಲ್ಲಿ ಥಳಿಸಬೇಕೆ೦ದು ಆಗ್ರಹ ಪಡಿಸಿರುವ ಹಿನ್ನೆಲೆಯಲ್ಲಿ, ಅಖಿಲ ಕರ್ನಾಟಕ ಪಾದರಕ್ಷೆಗಳ ಒಕ್ಕೂಟವು ಒ೦ದು ತುರ್ತು ಅಧಿವೇಶನವನ್ನು ಕರೆದಿತ್ತು. ಈ ಒಕ್ಕೂಟವು ಸಾಹಿತಿಯು ತಮಗೆ ಘೋರ ಅಪಮಾನ ಮಾಡಿದ್ದಾರೆ೦ದು ಆರೋಪಿಸಿದೆ. ತಮ್ಮ೦ತಹ ಸೇವಾ ಪ್ರವೃತ್ತಿಯುಳ್ಳ, ಸದಾ ಮಾನವರ ಪಾದಗಳ ರಕ್ಷಣೆಯ ಹೊಣೆಹೊತ್ತ, ಜವಾಬ್ದಾರಿಯುತ ಪಾದರಕ್ಷೆಗಳನ್ನು, ಯಃಕಚಿತ್ ರಾಜಕಾರಣಿಗಳನ್ನು ಥಳಿಸಲು ಉಪಯೊಗಿಸುವುದು ಇಡೀ ಚಪ್ಪಲಿಗಳ ಸ೦ಕುಲಕ್ಕೇ ಮಾಡಿದ ದೊಡ್ಡ ಅವಮಾನವೆ೦ದು ಭಾವಿಸಲಾಗಿದೆ. ನಾಡಿನ ವಿವಿಧ ಭಾಗಗಳಿ೦ದ ಬ೦ದ ನಾನಾ ಚಪ್ಪಲಿಗಳು ತಮ್ಮತಮ್ಮ ಅಭಿಪ್ರಾಯಗಳನ್ನು ಹ೦ಚಿಕೊ೦ಡರೆ೦ದು ನಮ್ಮ ಬಾತ್ಮಿದಾರರು ವರದಿ ಮಾಡಿದ್ದಾರೆ. ಈ ಅಧಿವೇಶನವನ್ನು ಮಧ್ಯರಾತ್ರಿಯಲ್ಲಿಯೇ ಏಕೆ ಹಮ್ಮಿಕೊ೦ಡಿದ್ದೀರೆ೦ದು ನಮ್ಮ ವರದಿಗಾರರು ಕೇಳಲಾಗಿ ತಾವು ಸದಾ ವೃತ್ತಿನಿರತರೆ೦ದೂ, ಯಾವುದೇ ಕಾರಣಕ್ಕೂ ಮಾನವರಿಗೆ ತೊ೦ದರೆ ಕೊಡುವುದಿಲ್ಲವೆ೦ದೂ, ಅದಕ್ಕಾಗಿಯೇ, ಅವರೆಲ್ಲರೂ ವಿಶ್ರಾ೦ತಿ ಪಡೆಯುವಾಗ ಈ ಅಧಿವೇಶನವನ್ನು ನಡೆಸುತ್ತಿರುವುದಾಗಿ ತಿಳಿಸಿದುವೆನ್ನಲಾಗಿದೆ.

ಪ್ರೇಮ-ಪ್ರೀತಿ

ಪ್ರೇಮ ಮತ್ತು ಪ್ರೀತಿ ಎರಡೂ ಒಂದೇ ಎಂದು ತಪ್ಪಾಗಿ ಭಾವಿಸಿರುವವರಿದ್ದಾರೆ. ಒಂದೇ ಮಾತಿನಲ್ಲಿ ಹೇಳ ಬೇಕೆಂದರೆ,ಹೆಂಡತಿ ಸತ್ತರೆ ಮರಳಿ ತರಬಹುದು. ಜನ್ಮಕೊಟ್ಟ ತಾಯಿಯನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆಕೆಯ ಮನಸ್ಸನ್ನು ನೋಯಿಸಿ ಜಗತ್ತನ್ನೇ ಜಯಿಸಿದರೇನು ಫಲ?... ಒಂಭತ್ತು ತಿಂಗಳು ಹೆತ್ತು ಹೊತ್ತು ಕೈತುತ್ತ ತಿನಿಸಿ ಸಾಕಿದ ಮಮತೆಯ ತಾಯಿ, ಕೈಹಿಡಿದು ನಡೆಸಿ, ವಿದ್ಯೆ ಕಲಿಸಿ, ಬದುಕಿಗೆ ಮಾರ್ಗದರ್ಶನ ಮಾಡಿದ ಪ್ರೇಮದ ತಂದೆ, ಕೆಲವರೇ ಆದರೂ ಪ್ರೀತಿಯ ತೋರುವ ಬಂಧುಗಳು, ಇವರೆಲ್ಲರನ್ನೂ ಬಿಟ್ಟು ದೂರ ಹೋಗಿ ಬದುಕಲಾದೀತೆ; ಅಂತಹ ಬದುಕಿನಲ್ಲಿ ನೆಮ್ಮದಿ ಸಿಕ್ಕೀತೇ... ಇಲ್ಲ, ತಾಯಿ-ತಂದೆಯ ಋಣ ಒಂದೇ ಜನ್ಮದಲ್ಲಿ ತೀರಿಸಲಶ್ಯಕ್ಯವೆನ್ನುತ್ತಾರೆ. ಅವರನ್ನೇ ಕಸಕ್ಕಿಂತ ಕಡೆಯಾಗಿಸಿ ಹೊರಟು ಹೋಗಲುಂಟೇ...? ಅಥವಾ ಅವರನ್ನು ಕೇವಲ ಕರುಣೆಯಿಂದ ನೋಡಿಕೊಳ್ಳುವುದಷ್ಟೇ ತನ್ನ ಕರ್ತವ್ಯವೆಂದು ಭಾವಿಸದೇ, ಅವರೊಂದಿಗೇ ಸಭ್ಯ ಗೃಹಸ್ಥನಾಗಿದ್ದು ತನ್ನ ಹೆಂಡತಿಯೊಡನೆ ಸಂಸಾರ ಸುಖ ಅನುಭವಿಸುತ್ತಲೆ, ಭಾವನಾತ್ಮಕ ಸಂಬಂಧವಿರಿಸಿಕೊಂಡಿರುವುದರಲ್ಲಿಯೆ ಈ ಜಗದ ಪ್ರೇಮ ಜೀವನದ ವೈಶಿಷ್ಟ್ಯವಿದಯೆಲ್ಲವೇ..? ಅದನ್ನು ಬಿಟ್ಟು ಹೆಂಡತಿಕೊಡುವ ದೈಹಿಕ ಸುಖಕ್ಕೆ, ಅವಳ ಮರುಳು ಮಾತಿಗೆ ವಶನಾಗಿ ತನ್ನ ತನ ಕಳೆದು ಕೊಳ್ಳುವುದೇನು?

ಜಾನಪದ ಗಾರುಡಿಗ ಕರೀಂಖಾನ್‌ ಇನ್ನಿಲ್ಲ

ಎಸ್ ಕೆ ಕರೀಂಖಾನ್ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾನಪದ ಗಾರುಡಿಗ, ನಾಡೋಜ, ಕಲಾ ತಪಸ್ವಿ, ಹಿರಿಯ ಗಾಂಧೀವಾದಿ ಡಾ ಎಸ್‌.ಕೆ. ಕರೀಂಖಾನ್‌ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ನಾಡಿನ ಹಳೆಯ ತಲೆಮಾರಿನ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯ ಕೊಂಡಿಯೊಂದು ಕಳಚಿಕೊಂಡಂತಾಗಿದೆ. ತೊಂಬತ್ತೆಂಟು ವರ್ಷಗಳ ಸಾರ್ಥಕ ಬಾಳುವೆ ನಡೆಸಿದ ಈ ಬ್ರಹ್ಮಚಾರಿ ಇಂದು(ಜುಲೈ 29) ಬೆಳಿಗ್ಗೆ 11.50 ರ ಸುಮಾರಿಗೆ ಚಿರನಿದ್ರೆಗೆ ಜಾರಿದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಜೂನ್ 10ರಂದು ಬೌರಿಂಗ್ ಆಸ್ಪತ್ರೆಯಿಂದ ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯೂಮೋನಿಯಾಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಗಂಟಲಲ್ಲಿ ಉಂಟಾದ ಸೋಂಕಿನಿಂದಾಗಿ ಉಸಿರಾಟದ ತೊಂದರೆಗೆ ಒಳಗಾದರು. ಕೂಡಲೇ ಅವರನ್ನು ತುರ್ತು ನಿಗಾ ಘಟಕಕ್ಕೆ ವರ್ಗಾಹಿಸಿ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಮೃತರ ಅಂತ್ಯಕ್ರಿಯೆ ನಗರದ ಹಲಸೂರು ಸ್ಮಶಾನದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ನೆರವೇರಿತು. ಇದಕ್ಕೆ ಮುನ್ನ ಕರೀಂಖಾನ್‌ ಕಿರಿಯ ಸಹೋದರನ ನಿವಾಸದಲ್ಲಿ ಮೃತರಿಗೆ ರಾಜ್ಯವು ಸಕಲ ಸರ್ಕಾರಿ ಗೌರವ ನೀಡಿತು.