ಮೀಸಲಾತಿ ಕಕ್ಕುಲಾತಿ - ಬೇಡ ಈ ದುರ್ಗತಿ
ಹೊತ್ತಿ ಉರಿಯುತ್ತಿರುವ ಮೀಸಲಾತಿಯು ಭಾರತದ ಪ್ರಜಾತಾಂತ್ರಿಕತೆಯ ಕಣ್ಣರೆಪ್ಪೆ ಮುಚ್ಚದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೋಮುಗಲಭೆ, ಜಾತಿಕಲಹ, ಭಾಷೆಕಲಹ ಇವಿಷ್ಟೇ ಕೆಲ ಮಹದ್ವಿಷಯಗಳು ನಮ್ಮ ದೇಶವನ್ನು ಜಾಗೃತಗೊಳಿಸಲು ಸಮರ್ಥವಾಗಿರುವುವು. ಶಿಕ್ಷಣದ ಬಗ್ಗೆ ಕಾಳಜಿ, ಭ್ರಷ್ಟಾಚಾರದ ವಿರುದ್ಧ ಹೋರಾಟ, ಆರ್ಥಿಕ ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ಇತ್ಯಾದಿ ವಿಷಯಗಳಿಗೆ ಮನಸು, ತಲೆ ಕೆಡಿಸಿಕೊಳ್ಳುವಷ್ಟು ನಮಗೆ ವ್ಯವಧಾನವಿಲ್ಲ. ಜಾತಿ, ಭಾಷೆ, ಧರ್ಮಗಳ ಸತ್ವಗಳನೇ ಉಂಡು ಬೆಳೆದಿರುವ ನಮಗೆ ಆ ವಿಷಯಗಳಲ್ಲಿ ಮಾತ್ರ ಸ್ವಾಭಿಮಾನ ಕೆರಳುತ್ತದೆ. ಭ್ರಷ್ಟಾಚಾರಗಳಲ್ಲಿ ಒಂದಿಲ್ಲೊಂದು ರೀತಿ ನಾವೂ ಪಾಲುದಾರರಾಗಿರುವುದರಿಂದಲೋ ಏನೋ ನಮಗೆ ಅದರ ವಿರುದ್ಧ ಹೋರಾಡಲು ನೈತಿಕತೆ ಅಡ್ಡಬರುತ್ತದೆ.
- Read more about ಮೀಸಲಾತಿ ಕಕ್ಕುಲಾತಿ - ಬೇಡ ಈ ದುರ್ಗತಿ
- Log in or register to post comments