ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡಸಾಹಿತ್ಯ.ಕಾಂ ಹೊಸ ಆವೃತ್ತಿ ಹಾಗೂ ಕನ್ನಡ ಪದಪರೀಕ್ಷಕ

ಸಂಪದ ಬಳಗದ ಗೆಳೆಯರೆಲ್ಲರಿಗೂ ನಮಸ್ಕಾರ.

ಕನ್ನಡಸಾಹಿತ್ಯ.ಕಾಂ ಅಂತರ್ಜಾಲ ತಾಣದ ಹೊಸ ಆವೃತ್ತಿ ಹೊರಬಂದಿದೆ. ಈ ಆವೃತ್ತಿಯಲ್ಲಿ ಇದೇ ಇಲ್ಲೇ ಸಂಪದದಲ್ಲಿ ನಮ್ಮೆಲ್ಲರಿಗೂ ಪರಿಚಿತವಾಗಿರುವ ಶ್ಯಾಮ ಕಶ್ಯಪರೂ ಲೇಖಕ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ಅಂತೆಯೇ ಮುಂಬಯಿಯ ಲೇಖಕರಾದ ಕೆ.ಟಿ. ವೇಣುಗೋಪಾಲರು,ಸಂತೋಷ್ ಮೆಹಂದಳೆ, ವಿಕ್ರಮ್ ಹತ್ವಾರ್, ಸಚ್ಚಿದಾನಂದ ಹೆಗಡೆ, ರವಿಶಂಕರ್ ಆರ್ ಇವರುಗಳೂ ಲೇಖಕ ಬಳಗಕ್ಕೆ ಸೇರಿರುವ ಹೊಸಬರು.

ಅಪರೂಪದ ಗಾದೆ ಮಾತುಗಳು

ಈಜು ಮರೀಬೇಡ, ಜೂಜು ಕಲೀಬೇಡ .
ಇಬ್ಬರಲ್ಲಿ ಗುಟ್ಟು , ಮೂವರಲ್ಲಿ ರಟ್ಟು,

ಇರುವೆಗೆ ರೆಕ್ಕೆ ಬರುವದು , ದೀಪದಲ್ಲಿ ಬಿದ್ದು ಸಾಯಲಿಕ್ಕೇ .

ಗಾಂಧಿ ಮೀಟರ್ರು‍

ನನಗೊಬ್ಬ ಸರ್ದಾರ್ಜಿ ಸ್ನೇಹಿತ ಇದ್ದಾನೆ. ಹರ್ಪ್ರೀತ್ ಅಂತ. ನಾಲ್ಕು ತಿಂಗಳ ಹಿಂದೆ ಅವನ ಮನೆಯವರು ಬನ್ನೇರುಘಟ್ಟದಾಚೆಯ ಗೊಟ್ಟಿಗೇರೆ ಎಂಬಲ್ಲಿ ಹೊಸ ಮನೆಯೊಂದರಲ್ಲಿ ವಾಸಿಸ ತೊಡಗಿದರು. ಅಂದಿನಿಂದ ದಿನ ಬೆಳಗಾದರೆ ಅವನದೊಂದೇ ಗೋಳು. ಆಟೋಗಳು ಅವನ ಮನೆಗೆ ಬರೊದಿಲ್ಲ ಅಂತ. ಹಾಗೂ ಹೀಗು ಕಾಡಿ ಬೇಡಿದ ನಂತರ ಬಂದವರು ಮನ ಬಂದಂತೆ ಬಾಡಿಗೆ ಕೇಳುತ್ತಾರೆ. ಜಯನಗರ ೯ನೆ ಬ್ಲಾಕಿಂದ ಅಲ್ಲಿಗೆ ಇಪ್ಪತ್ತೈದು ರೂಪಾಯಿ ಮೀಟರಿನಲ್ಲಿ ಆದರೂ ನೂರೈವತ್ತರ ಕೆಳಗೆ ಯಾರು ಬರಲ್ಲವಂತೆ. ಈ ಆಟೊ ಚಾಲಕರ ಸುಲಿಗೆಯಿಂದ ಬೇಸತ್ತ ಅವನು ಹೊಸ ಕಾರನ್ನು ಕಾದಿರಿಸಿಯೇ ಬಿಟ್ಟ. ಬಿಡಿ, ಈ ಕಥೆಗೂ ಅವನ ಕಾರಿಗೂ ಸಂಬಂಧವಿಲ್ಲ.

ಸರಿಯಾದ ಕನ್ನಡ ಪದ

ಕನ್ನಡದಲ್ಲಿ ಹ್ರುದಯ ಅಥವ ಹ್ರಿದಯ ಎ೦ದು ಬರೆಯಬೇಕೆ? ಸರಿಯಾಗಿ ಬರೆಯುವುದು ಹೇಗೆ೦ದು ದಯವಿಟ್ಟು ಯಾರಾದರೂ ತಿಳಿಸುವಿರಾ? ನಾನು ಬರಹ ೬.೦ ಉಪಯೋಗಿಸುತ್ತೇನೆ.  ಅದೇ ರೀತಿ ಸ್ರಿಷ್ಟಿ, ಮ್ರಿದು, ಇತ್ಯಾದಿ ಪದಗಳನ್ನು ಬರೆಯುವಾಗಲೂ ಕೀ ಬೋರ್ಡನ್ನು ಹೇಗೆ ಉಪಯೋಗಿಸ
ಬೇಕೆ೦ದು ನನಗೆ ಗೊತ್ತಿಲ್ಲ.  ದಯವಿಟ್ಟು ತಿಳಿಸಿ. 

ಒಂದು ಪಿಗ್ಗಿನ ಕತೆ!

ಈಚೆಗೆ ಕನ್ನಡಪ್ರಭ ದ ಛಾಯಾಂಕಣವೊಂದರಲ್ಲಿ ತಾಯಿ ಹಂದಿ ತನ್ನ ಮುದ್ದುಮರಿಗಳಿಗೆ ಹಾಲುಣಿಸುತ್ತಿರುವ ಚಿತ್ರ ನೋಡಿದೊಡನೆಯೇ ನನ್ನ ಅತ್ಯಂತ ಮೆಚ್ಚಿನ ಇಂಗ್ಲಿಷ್ ಲೇಖಕ ಚಾರ್ಲ್ಸ್ ಲ್ಯಾಂಬ್ ನೆನಪಾದ.

ಕಾನೂನು ಉಲ್ಲಂಘಿಸಲು ಕಾನೂನು ಪದವಿ

(ಬೊಗಳೂರು ಸಂದರ್ಶನ ಬ್ಯುರೋದಿಂದ)
ಬೊಗಳೂರು, ಜೂ.3- ಕಾನೂನನ್ನು ಉಲ್ಲಂಘಿಸಿಯೇ ಜನ್ಮ ತಾಳಿದ್ದ ಮತ್ತು ಕಾನೂನು ಉಲ್ಲಂಘನೆಗಾಗಿಯೇ ಈ ಲೋಕದಲ್ಲಿ ಅವತಾರವೆತ್ತಿದ ಬಿಹಾರದ ಸಂಸದ ಶಹಾಬುದ್ದೀನ್ ಕಾನೂನು ಪದವಿ "ಗಿಟ್ಟಿಸಿ"ಕೊಂಡ ಹಿನ್ನೆಲೆಯಲ್ಲಿ ಆತನನ್ನು ಬೊಗಳೆ ರಗಳೆಗಾಗಿ ಮಾತನಾಡಿಸಲಾಯಿತು.