ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪತಂಜಲಿಯ ಯೋಗ ಭಾಗ ೩

ಪತಂಜಲಿಯ ಯೋಗ

ಮೂರನೆಯ ಲೇಖನ
ವೃತ್ತಿಗಳು ಮನಸ್ಸಿನಲ್ಲಿ ಏಳುವುದನ್ನು ಕಡಿಮೆ ಮಾಡಲು ಎಡಬಿಡದೆ ಮಾಡುವ ಪ್ರಯತ್ನವೇ ಅಭ್ಯಾಸ.ಯೋಗ ಸೂತ್ರ.ಪಾದ೧. ಸೂತ್ರ.೧೩
ಈ ಪ್ರಯತ್ನವನ್ನು ಧೀ‍ರ್ಘ ಕಾಲ ನಿರಂತರವಾಗಿ ಒಳ್ಳೆಯ ಮನಸ್ಸಿನಿಂದ ಮಾಡಿದಲ್ಲಿ ಕ್ರಮೇಣ ವೃತ್ತಿಗಳು ಮನಸ್ಸಿನಲ್ಲಿ ಏಳುವುದು ಕಡಿಮೆಯಾಗುತ್ತದೆ.

ಯೋಗ ಸೂತ್ರ.ಪಾದ೧. ಸೂತ್ರ.೧೪
ನಮಗಿರುವ ಅನುಭವಗಳೆಲ್ಲಾ ಪಂಚೇಂದ್ರಿಯಗಳ ಮೊಲಕ ಸಿಗುತ್ತದೆ. ಆದನ್ನು ಸ್ಮೃತಿ ನೆನಪಿನಲ್ಲಿಟ್ಟುಕೊಂಡಾಗ 'ನನ್ನತನ' ‍ಉಂಟಾಗುತ್ತದೆ. ನಾವು

ಸಂಪದದಲ್ಲಿ ಹೊಸತು: ಆಯ್ದ ಸುದ್ದಿ ವಿಭಾಗ

'ಸಂಪದ'ದಲ್ಲಿ [:http://slashdot.org|ಸ್ಲ್ಯಾಶ್ ಡಾಟ್ ರೀತಿಯ] ಸುದ್ದಿ ಕನ್ನಡದಲ್ಲಿ ಸೇರ್ಪಡೆಗೆಂದು [:news|ಹೊಸ ವಿಭಾಗವೊಂದನ್ನು ಪ್ರಾರಂಭಿಸಲಾಗಿದೆ]. ಈ ಸುದ್ದಿ ಸಮೂಹ ಪುಟಕ್ಕೆ ಎಲ್ಲ ಸದಸ್ಯರೂ ಕನ್ನಡದಲ್ಲಿ ಸುದ್ದಿಯನ್ನು ಸೇರಿಸಬಹುದು. ಸುದ್ದಿ ಸೇರಿಸುವಾಗ ಚುಟುಕಾದ ಮಾಹಿತಿಯ ಜೊತೆಗೆ ಸುದ್ದಿ ಮೂಲಕ್ಕೆ ಒಂದು ಸಂಪರ್ಕ (ಲಿಂಕ್) ಕೊಟ್ಟರಾಯಿತು.

ಲಿಂಕ್ ನೀಡಲು [ :http://link|link description ] (ಮಧ್ಯ ಸ್ಪೇಸ್ ಇಲ್ಲದೆಯೇ) ಎಂಬಂತೆ ಸೇರಿಸಿದರಾಯಿತು.

e=mc2 ಗೆ ಒಂದು ನೂರು ವರ್ಷಗಳ ಸಂಭ್ರಮ

[kn:ಆಲ್ಬರ್ಟ್ ಐನ್ಸ್ಟನ್|ಆಲ್ಬರ್ಟ್ ಐನ್ಸ್ಟನ್] ರವರ ಮಹತ್ತರ ಸಂಶೋಧನೆಯಾದ e=mc2 ಗೆ ನೂರರ ಸಂಭ್ರಮ. ಇದನ್ನಾಚರಿಸಲು ನೋವಾ ಟಿ ವಿ ಇದಕ್ಕೆ ಸಂಬಂಧಿಸಿದ ಅತಿ ವಿರಳವಾದ [:http://www.pbs.org/wgbh/nova/einstein/experts.html|ಕೆಲವು ಧ್ವನಿ ಮುದ್ರಣಗಳನ್ನೂ], ಐನ್ಸ್ಟನ್ ಬಗ್ಗೆ, ಅವರ ಸಂಶೋಧನೆಯ ಬಗ್ಗೆ [:http://www.pbs.org/wgbh/nova/einstein/|ಪ್ರಬಂಧಗಳನ್ನೂ ಅದರ ತಾಣದಲ್ಲಿರಿಸಿದೆ].

ಬಹಳ ಚೆನ್ನಾಗಿರುವ ತಾಣ

ನಾನಿಲ್ಲಿ ಹೊಸಬ. ನನಗೆ ಈ ತಾಣ ಬಹಳ ಇಷ್ಟವಾಯಿತು. ಮಾನ್ಯ ಇಸ್ಮಾಯಿಲ್ ರವರು ಈ ತಾಣದ ಬಗ್ಗೆ ತಿಳಿಸಿದರು. ಆಗಿಂದಾಗ್ಯೆ ಈ ತಾಣಕ್ಕೆ ಈ ಮುಂದೆ ಬರೆಯುವೆನೆಂದು ಆಶಿಸುತ್ತೇನೆ.

ವಿಡಿಯೋಗೇಮ್ ಗಳ ಶೈಕ್ಷಣಿಕ ಮೌಲ್ಯ ಸಂಶೋಧನೆ

ಕಂಪ್ಯೂಟರ್ ಗೇಮ್ ಹಾಗೂ ವಿಡಿಯೋಗೇಮ್ ಗಳನ್ನು ಶೈಕ್ಷಣಿಕ ವಸ್ತುಗಳಾಗಿ ಶಾಲೆಗಳಲ್ಲಿ ಹೇಗೆ ಬಳಸಬಹುದೆಂಬುದನ್ನು ಪರೀಕ್ಷೆ ನಡೆಸಲಾಗುವುದು ಎಂದು [:http://www.computin…|'ಕಂಪ್ಯೂಟಿಂಗ್' ] ವರದಿ ಮಾಡಿದೆ. ಈ ಪ್ರಾಜೆಕ್ಟ್ ಕಂಪ್ಯೂಟರ್ ಗೇಮ್ ಗಳ ಚಿರಪರಿಚಿತ ಹೆಸರಾದ ಎಲೆಕ್ಟ್ರಾನಿಕ್ ಆರ್ಟ್ಸ್ ಹಾಗೂ ನೆಸ್ಟಾ ಫ್ಯೂಚರ್ ಲ್ಯಾಬ್ ರವರಿಂದ ನಡೆಸಲಾಗುವುದಂತೆ.

ಹಚ್ ಅವರ ಹುಚ್ಚು ಬಿಡಿಸುವ

ಗೆಳೆಯರೆ, ಮೊದಲು ಈ ಲೇಖನವನ್ನು ಓದಿ - [:http://thatskannada…] ನಾನು ಹಚ್ ಕಂಪೆನಿ ಮತ್ತು ತಲವಾರ್ ಅವರ ಧೋರಣೆಯನ್ನು ಖಡಾಖಂಡಿತವಾಗಿ ಖಂಡಿಸುತ್ತೇನೆ. ನನಗೂ ಬೆಂಗಳೂರಿನ ಹಲವು ಅಂಗಡಿಗಳಲ್ಲಿ ಈ ರೀತಿಯ ಅನುಭವಗಳಾಗಿವೆ. ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ ಯಾವ ಅಂಗಡಿಯಲ್ಲೂ ನಾನು ವ್ಯಾಪಾರ ಮಾಡದಿರುವ ತೀರ್ಮಾನ ಮಾಡಿರುತ್ತೇನೆ. ಎಲ್ಲರೂ ಇದೇ ಧೋರಣೆಯನ್ನು ಅನುಸರಿಸಿದರೆ ಈ ಕನ್ನಡ ವಿರೋಧಿ ನೀತಿಯನ್ನು ಬಗ್ಗು ಬಡಿಯಬಹುದು. ಎಲ್ಲರೂ ಒಂದುಗೂಡಿ “ಕನ್ನಡಿಗರು ನಿರುಪದ್ರವಿಗಳು, ನಿರಭಿಮಾನಿಗಳು ಮತ್ತು ನಿರ್ವೀಯರು” ಎಂಬ ಹೇಳಿಕೆಯನ್ನು ಸುಳ್ಳು ಮಾಡೋಣ.

ಹೊಸ ಸದಸ್ಯರ ಪರಿಚಯ...

ನವ ಸದಸ್ಯರು ತಮ್ಮ [:http://sampada.net/…|ಪರಿಚಯವನ್ನು ಈ ಸಂಪರ್ಕದಲ್ಲಿ ನೀಡಬಹುದು]. ನಿಮ್ಮ ಹೆಸರು, ಉದ್ಯೋಗ, ಕನ್ನಡದೊಂದಿಗಿನ ನಂಟು, ಹಾಗೂ ವಾಸವಾಗಿರುವ ಸ್ಥಳ - ಈ ವಿಷಯಗಳನ್ನು ತಿಳಿಸಿ ನಿಮ್ಮ ಪರಿಚಯವನ್ನು ಸೇರಿಸಬಹುದು. ಹೊಸ ಫಾರಮ್ ವಿಷಯವೊಂದರಲ್ಲಿಿ ನಿಮ್ಮ ಪರಿಚಯವನ್ನು ನೀಡಿ.

Sampada News section

ಈ ಪುಟವನ್ನು ಪ್ರಯೋಗಾರ್ಥ [:http://slashdot.org|ಸ್ಲ್ಯಾಶ್ ಡಾಟ್ ರೀತಿಯ] ಸುದ್ದಿ ಸೇರ್ಪಡೆಗೆಂದು ಪ್ರಾರಂಭಿಸಲಾಗಿದೆ. ಈ ಸುದ್ದಿ ಸಮೂಹ ಪುಟಕ್ಕೆ ಎಲ್ಲ ಸದಸ್ಯರೂ ಕನ್ನಡದಲ್ಲಿ ಸುದ್ದಿಯನ್ನು ಸೇರಿಸಬಹುದು. ಸುದ್ದಿ ಸೇರಿಸುವಾಗ ಚುಟುಕಾದ ಮಾಹಿತಿಯ ಜೊತೆಗೆ ಸುದ್ದಿ ಮೂಲಕ್ಕೆ ಒಂದು ಸಂಪರ್ಕ (ಲಿಂಕ್) ಕೊಟ್ಟರಾಯಿತು.

ಸಲಹೆ

ವೃತ್ತ ಪತ್ರಿಕೆಯಲ್ಲಿ ಬಂದಿರುವ ಒಂದು ವಿಷಯ ಸೇರಿಸಲು ಪ್ರಯತ್ನಿಸಿದೆ - ಆಗ ೪೦೩ error ತೋರಿಸಿದೆ. ಮುಂದೆ ತಾಣದಲ್ಲಿ ಹೆಚ್ಚಿನ ವಿಷಯಗಳನ್ನು ಸೇರಿಸುವಾಗ ಇದರ ಬಗ್ಗೆ ಯೋಚಿಸಬಹುದು. ಮುಖಪುಟದಲ್ಲಿ ಅಂದು ಯಾರ ಹುಟ್ಟಿದ ಹಬ್ಬ ಇದೆ ಎಂಬುದರ ಬಗ್ಗೆ ತಿಳಿಸಬಹುದು. ಹಾಗೇ ಅವರುಗಳಿಗೆ ಶುಭಾಶಯ ಕೋರಲು ಒಂದು ಪ್ರತ್ಯೇಕ ವೇದಿಕೆ ಅಥವಾ ಸೂತ್ರ ನಿರ್ಮಿಸಬಹುದು. ಹಾಗೇ ಹೊಸ ಸದಸ್ಯರುಗಳು ತಮ್ಮ ಪರಿಚಯ ಮಾಡಿಕೊಡಲು ಒಂದು ಸೂತ್ರವನ್ನೂ ಇರಿಸಬಹುದು.