ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಪದದಲ್ಲೀಗ ೧೦೦ಕ್ಕೂ ಹೆಚ್ಚು ಸದಸ್ಯರು!

ಸಂಪದದಲ್ಲೀಗ ನೂರಕ್ಕೂ ಹೆಚ್ಚು ಸದಸ್ಯರು. :) ಪ್ರಾರಂಭವಾಗಿ ಒಂದು ವಾರದಲ್ಲೇ ಇಷ್ಟು ಪ್ರೋತ್ಸಾಹ ದೊರೆತದ್ದು ಸಂಪದದಲ್ಲಿ ಬರೆಯುತ್ತಿರುವ ಸದಸ್ಯರಿಗೆ, ಇದರ ನಿರ್ವಾಹಕರಿಗೆ ಸಂತಸದ, ಸ್ಪೂರ್ತಿದಾಯಕ ವಿಷಯವೇ ಹೌದು. ಬರುವ ದಿನಗಳಲ್ಲಿ ಇನ್ನಷ್ಟು ಉತ್ಸಾಹವುಳ್ಳ ಸದಸ್ಯರು ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡು 'ಸಂಪದ'ವನ್ನು ಅದರ ಗುರಿಯೆಡೆ ಸಾಗಿಸುವಲ್ಲಿ ಭಾಗಿಯಾಗುವರೆಂದು ಆಶಿಸೋಣ.

ಇದು ವಿಜ್ಞಾನ ಸ್ವಾಮಿ ! ವಿಗ್ನಾನವಲ್ಲ!

ಇದು ವಿಜ್ಞಾನ ಸ್ವಾಮಿ ! ವಿಗ್ನಾನವಲ್ಲ! ದಯವಿಟ್ಟು ಇದನ್ನು vijnaana saahitya ಎಂದು ಸರಿಯಾಗುವ ಹಾಗೆ ಬರೆಯಿರಿ. ಅಥವಾ ಬರಹದ ಲಿಪಿಪ್ರಕಾರವನ್ನು ಉಪಯೋಗಿಸಿ vij~JAna sAhitya ಎಂದಾದರೂ ಬರೆದರೆ ಒಳ್ಳೆಯದು.

ವಚನ ಚಿಂತನ: ೮: ಆಸೆ-ರೋಷ, ಮಗು-ತಾಯಿ

ಆಸೆಯೆಂಬ ಕೂಸನೆತ್ತಲು ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ ಇಂತೆರಡಿಲ್ಲದೆ ಕೂಸನೆತ್ತಬಲ್ಲಡೆ ಆತನೆ ಲಿಂಗೈಕ್ಯನು ಗೊಹೇಶ್ವರ ಮನಸ್ಸಿನಲ್ಲಿ ಹುಟ್ಟುವ ಆಸೆ ಮತ್ತು ರೋಷಗಳಿಗೆ ಇರುವುದು ತಾಯಿ ಮಕ್ಕಳ ಸಂಬಂಧ. ಒಂದನ್ನು ಬಿಟ್ಟು ಒಂದಿರಲಾರವು. ಇವೆರಡೂ ಗುಣಗಳು ಇಲ್ಲವಾದಾಗ ಮನುಷ್ಯ ದೇವರಲ್ಲಿ ಒಂದಾಗಿರುತ್ತಾನೆ. ನಮ್ಮ ದಿನ ನಿತ್ಯದ ಬದುಕಿನಲ್ಲಿ ಮನಸ್ಸಿನ ಕಾರ್ಪಣ್ಯಗಳಿಗೆ ಕಾರಣವನ್ನು ಹುಡುಕುತ್ತ ಹೊದದರೆ ಅವಕ್ಕೆಲ್ಲ ಮೂಲವಾಗಿ ಆಸೆ ಅಥವ ರೋಷಗಳೆಂಬ ಭಾವ ಇರುವುದು ತಿಳಿಯುತ್ತದೆ. ಆಸೆ ಮತ್ತು ರೋಷಗಳೆರಡೂ ನಮ್ಮ ಅಹಂಕಾರವನ್ನು ಗಟ್ಟಿಗೊಳಿಸುವ ಗುಣಗಳು.

ಸಂಪದದಲ್ಲಿ ಇಂದಿನಿಂದ ಕಥಾ ಮಾಲಿಕೆಗಳು

ಸಂಪದದಲ್ಲಿ ಇಂದಿನಿಂದ ಕಥಾ ಮಾಲಿಕೆಗಳನ್ನು [:http://sampada.net/…|ಹಾಕಲು ಪ್ರಾರಂಭಿಸಿದ್ದೇವೆ]. ಮಾನ್ಯ ಓ ಎಲ್ ಎನ್ ಸ್ವಾಮಿಯವರು ಕನ್ನಡದಲ್ಲಿನ ತಮ್ಮ "ಝೆನ್ ಕಥೆಗಳು" ಕಥಾಮಾಲಿಕೆಯನ್ನು ದಿನನಿತ್ಯ ಒಂದರಂತೆ ಸೇರಿಸಲು ಅನುಮತಿ ನೀಡಿದ್ದಾರೆ.ಅವರಿಗೆ ಸಂಪದದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು. *** ಕಥಾ ಮಾಲಿಕೆಯನ್ನು ಸೇರಿಸಲು ಉತ್ಸುಕರು ದಯಮಾಡಿ [:http://sampada.net/…|ಫೀಡ್‌ಬ್ಯಾಕ್ ಫಾರಮ್] ನಲ್ಲಿ ಸಂದೇಶವನ್ನು ಸೇರಿಸಿ ಅಥವಾ ನನಗೊಂದು ಪ್ರೈವೇಟ್ ಮೆಸೇಜ್ ಕಳುಹಿಸಿ.

ಝೆನ್ ೧: ನಗುವ ಬುದ್ಧ

ಝೆನ್ ೧

ದೊಡ್ಡ ಗಂಟನ್ನು ಹೊತ್ತಿರುವ, ದಪ್ಪ ಹೊಟ್ಟೆಯ, ನಗುಮುಖದ, ಕುಳ್ಳ ದೇಹದ ವ್ಯಕ್ತಿಯೊಬ್ಬನ ಬೊಂಬೆಯನ್ನು ನೀವು ನೋಡಿರಬಹುದು. ಕೆಲವೊಮ್ಮೆ ಎರಡೂ ಕೈ ಎತ್ತಿ ಜೋರಾಗಿ ನಗುತ್ತಿರುವ ಬೊಂಬೆಯ ರೂಪದಲ್ಲೂ ಇದು ಎಲ್ಲ ಕಡೆ ಕಾಣಿಸುತ್ತದೆ. ಚೀನಾದ ವ್ಯಾಪಾರಿಗಳು ಇವನನ್ನು ನಗುವ ಬುದ್ಧ ಅನ್ನುತ್ತಾರೆ.
ಈತ ಹೋಟಿ. ಇವನು ಬದುಕಿದ್ದು ತಾಂಗ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ. ಅವನಿಗೆ ತಾನು ಝೆನ್ ಗುರು ಎಂದು ಹೇಳಿಕೊಳ್ಳುವ ಆಸೆ ಇರಲಿಲ್ಲ. ಶಿಷ್ಯರನ್ನು ಗುಂಪುಗೂಡಿಸಿಕೊಳ್ಳುವ ಹಂಬಲವಿರಲಿಲ್ಲ.

ಜ್ಯೋತಿಷ್ಯ - ಎಷ್ಟರ ಮಟ್ಟಿಗೆ ನಂಬಬಹುದು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲರೂ ಸಮಾನರು. ಎಲ್ಲರ ಜಾತಕಗಳಲ್ಲೂ (ಹುಟ್ಟಿದ ಸಮಯದಲ್ಲಿಯ ಗ್ರಹಗಳ ಸ್ಥಾನ ಮತ್ತು ಅವುಗಳ ಚಲನೆಯ ಬಗೆಗಿನ ಲೇಖನ) ೩೩೭ ಅಂಕಗಳು ಇರುತ್ತವೆ. ಇದನ್ನು ಮುಖ್ಯವಾಗಿ ೧೨ ವಿಷಯಗಳಾಗಿ ವಿಂಗಡಿಸಿದ್ದಾರೆ - ಆರೊಗ್ಯ, ಸಾಂಸಾರಿಕ ಜೀವನ, ಐಶ್ವರ್ಯ, ಸಾಮಾಜಿಕ ಸ್ಥಾನಮಾನ, ತಿಳುವಳಿಕೆ, ಆಯಸ್ಸು ಇತ್ಯಾದಿ. ಸರಿ ಸಮಾನವಾಗಿ ಒಂದೊಂದು ವಿಷಯ ಅಥವಾ ಮನೆಗಳಿಗೆ ೨೮ ಅಂಕಗಳು ಬರುವುವು. ೩೩೭ / ೧೨.

ಕವನ

ವಿಷಯವೇಕೆ ಕವನಕೆ
ಮನದ ಭಾವ ರೂಪಕೆ

ಹೆಪ್ಪುಗಟ್ಟಿ ಕೂತ ನೆನಪು
ಚೆಲುವಿಗಿರುವ ಆ ಒನಪು
ಕಾಣುತಿರುವ ಹಗಲುಗನಸು
ಕಂಡ ಕನಸು ಆದ ನನಸು
ಆಗದಿರಲು ಬಂದ ಮುನಿಸು
ಪ್ರಕೃತಿಯ ಈ ಸೊಗಸು

ಎಲ್ಲ ಕುಳಿತು ಎದೆಯಲಿ
ಇಟ್ಟರೊಮ್ಮೆ ಕಚಗುಳಿ
ಕೊಟ್ಟಂತೆಯೆ ಆಹ್ವಾನ
ಬರೆಯಲೊಂದು ಕವನ