ಸುದ್ದಿ ಪತ್ರದಲ್ಲಿ ಸ್ವಲ್ಪ ಬದಲಾವಣೆಗಳು
'ಸಂಪದ'ದ ಸದಸ್ಯರೆಲ್ಲರಿಗೂ ನಿನ್ನೆ ಎರಡು ಇ-ಪತ್ರಗಳು ಬಿತ್ತರಿಸಿ ಹೋದವು. ಎಲ್ಲರ ಮೇಯ್ಲ್ ಬಾಕ್ಸ್ ತುಂಬಿಸಿದ್ದಕ್ಕೆ ಕ್ಷಮೆ ಇರಲಿ. ಇನ್ನು ಮುಂದೆ ಸಂಪದ ಸುದ್ದಿ ಪತ್ರವು ಮೇಯ್ಲಿಂಗ್ ಲಿಸ್ಟ್ ಮೂಲಕ ಬಿತ್ತರಿಸಲಾಗುವುದು. ಇದಕ್ಕೆ ಕಾರಣಗಳು ಬಹಳಷ್ಟಿವೆ. ಮೊದಲನೆಯದು, ಏಕಾಏಕಿ ಇ-ಪತ್ರಗಳು ಸರ್ವರಿನಿಂದ ಕಳುಹಿಸುವಾಗ ಬೌನ್ಸ್ ಆದಲ್ಲಿ ಸರ್ವರ್ ನೋಡಿಕೊಳ್ಳುತ್ತಿರುವವರಿಗೆ ವಿನಾ ಕಾರಣ ತಲೆನೋವು. ಎರಡನೆಯದು, ಎಲ್ಲರಿಗೂ ಸುದ್ದಿ ಪತ್ರ ಕಳುಹಿಸುವ ಬದಲು ಅದನ್ನೋದುವ ಉತ್ಸಾಹವುಳ್ಳ ಸದಸ್ಯರಿಗೆ ಮಾತ್ರ ಕಳುಹಿಸಿದರೆ, ಸರ್ವರಿನ ಮೇಲೆ ಲೋಡ್ ಕೂಡ ಕಡಿಮೆಯಾಗುವುದು. ಜೊತೆಗೆ ಮೇಯ್ಲ್ ಮ್ಯಾನ್ ಎಂಬುವ ಸುದ್ದಿ ಪತ್ರ ತಂತ್ರಾಂಶ ಬೌನ್ಸ್ ಆಗುವ ವಿಳಾಸಗಳನ್ನು ಚೆನ್ನಾಗಿ ನಿರ್ವಹಿಸುತ್ತದೆ.
- Read more about ಸುದ್ದಿ ಪತ್ರದಲ್ಲಿ ಸ್ವಲ್ಪ ಬದಲಾವಣೆಗಳು
- 2 comments
- Log in or register to post comments