'ತುಳು' ಭಾಷೆ ಇಲ್ಲಿ ಒಪ್ಪಿಗೆಯೇ?
ಕರಾವಳಿ ಜಿಲ್ಲೆಯಲ್ಲಿ ಪ್ರಚಲಿತವಿರುವ 'ತುಳು' ಭಾಷೆ ಈಗ ವಿಶ್ವದೆಲ್ಲೆಡೆ ಪಸರಿಸಿರುವ ತುಳುವರಿಂದಾಗಿ ಮಾನ್ಯತೆ ಪಡೆದಿದೆ.
- Read more about 'ತುಳು' ಭಾಷೆ ಇಲ್ಲಿ ಒಪ್ಪಿಗೆಯೇ?
- 21 comments
- Log in or register to post comments
ಕರಾವಳಿ ಜಿಲ್ಲೆಯಲ್ಲಿ ಪ್ರಚಲಿತವಿರುವ 'ತುಳು' ಭಾಷೆ ಈಗ ವಿಶ್ವದೆಲ್ಲೆಡೆ ಪಸರಿಸಿರುವ ತುಳುವರಿಂದಾಗಿ ಮಾನ್ಯತೆ ಪಡೆದಿದೆ.
ನೋಡಬನ್ನಿ ಅಣ್ಣೋರೇ ಅಕ್ಕೋರೇ
ಎಲ್ಲೂ ನೋಡಲಾಗದ ನೋಡಿರದ
ಕೈಲಾಸ ವೈಕುಂಠ ದೇವ ಲೋಕ
ಮೂರು ಲೋಕಗಳನ್ನೆಲಾ ಒಂದೇ ಕಡೆ ಒಮ್ಮೆಲೇ
ಹಾಯ್ಕು ಜಪಾನಿನ ಸಾಹಿತ್ಯದ ಒಂದು ವಿಶಿಷ್ಟ ಕವಿತಾ ರೂಪ. ಕೇವಲ ಹದಿನಾರು ಸಿಲಬಲ್ ಅಥವ ಅಕ್ಷರಗಳ ಜೋಡಣೆಯಲ್ಲಿ ಒಂದು ಮನೋಭಾವ-ಚಿತ್ರದ ನಿರೂಪಣೆ ಮಾಡುತ್ತವೆ ಹಾಯ್ಕುಗಳು. ಸಂಸ್ಕೃತದ ಅನುಷ್ಟುಭ್ ಎಂಬ ಒಂದು ಸಾಲಿಗೆ ಹದಿನಾರು ಅಕ್ಷರಗಳ ಛಂದಸ್ಸಿನಂತೆ ಇದು. ಆದರೆ ಸಂಸ್ಕೃತದ ಈ ಪ್ರಸಿದ್ಧ ಶ್ಲೋಕದಲ್ಲಿ ಹದಿನಾರು ಅಕ್ಷರಗಳ ಎರಡು ಸಾಲು ಇರುತ್ತವೆ, ಹಾಯ್ಕುಗಳಲ್ಲಿ ಒಟ್ಟಾಗಿ ಇರುವುದೇ ಹದಿನಾರು ಅಕ್ಷರ. ಅದನ್ನು ಅದೇ ರೂಪದಲ್ಲಿ ಕನ್ನಡಕ್ಕೆ, ಇಂಗ್ಲಿಷಿಗೂ ತರುವುದು ಕಷ್ಟ. ಸಾಧ್ಯವಾದಷ್ಟೂ ಮಿತವಾಗಿ ಪದಗಳನ್ನು ಬಳಸಿ ಈ ಅನುವಾದಗಳನ್ನು ಇಲ್ಲಿ ಕೊಟ್ಟಿದ್ದೇನೆ.
ನನ್ನ ನೋಟ ಸಂಜೆ ಬಿಸಿಲು ಬಿದ್ದ ದೂರ ಶಿಖರವನ್ನು ಸ್ಪರ್ಶಿಸಿದೆ.
ಈಗಿನ್ನೂ ಹೆಜ್ಜೆಯಿಟ್ಟ ಹಾದಿಯ ತುದಿಯ ತಲುಪಿದೆ.
ನಾವು ಹಿಡಿಯಲಾಗದುದು ನಮ್ಮ ಹಿಡಿಯುವುದು ಹೀಗೆಯೇ.
ಶಿಖರದ ಒಳಬೆಳಕು ಒಂದಿದೆ. ನಾವಿನ್ನೂ ಅಲ್ಲಿಗೆ ತಲುಪದಿದ್ದರೂ
ದೂರದಿಂದಲೇ ನಮ್ಮೊಳಗೆ ಚೈತನ್ಯವ ತುಂಬುವುದದು
ನಾವು ಅರಿಯದಿದ್ದರೂ ನಮ್ಮ ಬದಲಾಯಿಸುವುದು
ಆಗಲೇ “ಏನೋ” ಆಗಿಬಿಟ್ಟಿರುವೆವು.
ನಮ್ಮೊಳಗಿನ ಅಲೆಯ ತನ್ನತ್ತ ಸೆಳೆವ ಸೂಚನೆ...
ನಮಗೆ ತಿಳಿವುದು ಮುಖದ ಮೇಲೆ ಸುಳಿವ ತೆಳು ಗಾಳಿ ಮಾತ್ರ.
ಸೆಪ್ಟೆಂಬರ್ ೨೭, ೨೦೦೫.
ಚಿತ್ರದುರ್ಗದ ಸರ್ಕಾರೀ ಕಲಾ ಕಾಲೇಜಿನಲ್ಲಿ ಒಂದು ಕಾರ್ಯಕ್ರಮ.
ಪುಸ್ತಕಪ್ರಾಧಿಕಾರ ಏರ್ಪಡಿಸಿದ್ದ ವಾಚನಾಭಿರುಚಿ ಶಿಬಿರ. ಭಾಗವಹಿಸಿದ್ದವರು ಚಿತ್ರದುರ್ಗ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಬಂದಿದ್ದ ಸುಮಾರು ನೂರು ಮಂದಿ ವಿದ್ಯಾರ್ಥಿಗಳು.
ಚೈತ್ರ ಬಂದಿದೆ..
ಚಿತ್ತಾರ ಬರೆದಿದೆ..
ಆಹಾ..ಕಲಾಕಾರನೆಂದರೆ ಇವನೇ....
ಮಹಾಕಲಾವಿದ...ಮಹಾ ಕೋವಿದ...
ಮೊನ್ನೆ ತಾನೆ ಮುಂಬಯಿಗೆ ಭೇಟಿ ನೀಡಿದ್ದೆ. ವಿಮಾನ ನಿಲ್ದಾಣದ ಸಮೀಪ ಇರುವ ಪಂಚತಾರಾ ಹೋಟೆಲಿನ ಎದುರುಗಡೆಯ ರಸ್ತೆಯಲ್ಲಿ ಒಂದು ಟ್ಯಾಕ್ಸಿ ಹಿಡಿದೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ಗೆ ಹೋಗಬೇಕಿತ್ತು. ಚಾಲಕ, ಬಹುಶಃ ಪಂಚತಾರಾ ಹೋಟೆಲಿನ ಎದುರುಗಡೆಯಿಂದ ಟ್ಯಾಕ್ಸಿ ಹಿಡಿದುದಕ್ಕೆ ಇರಬೇಕು, “ನೂರು ರೂಪಾಯಿ ಆಗುತ್ತದೆ” ಎಂದ. ನಾನು “ಮೀಟರು ಪ್ರಕಾರ ಬರುವುದಿದ್ದರೆ ಮಾತ್ರ ಬಾ. ಇಲ್ಲದಿದ್ದರೆ ಬೇರೆ ಟ್ಯಾಕ್ಸಿ ಹಿಡಿಯುತ್ತೇನೆ” ಎಂದು ಹೇಳಿ ಟ್ಯಾಕ್ಸಿಯಿಂದ ಇಳಿಯಲು ಅನುವಾದೆ. ಆತ ಕೂಡಲೆ ವರಸೆ ಬದಲಿಸಿ “ಕುಳಿತುಕೊಳ್ಳಿ, ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿ ನನಗೆ ಬೇಕಾದಲ್ಲಿಗೆ ಕರೆದುಕೊಂಡು ಹೋದ. ಅಲ್ಲಿ ಇಳಿದಾಗ ಪುನ ನೂರು ರೂಪಾಯಿ ಕೊಡಲು ಒತ್ತಾಯಿಸಿದ. ಮೀಟರಿನಲ್ಲಿ ಎಪ್ಪತ್ತು ರೂ ಆಗಿತ್ತು. ನಾನು ನೂರು ರೂ ಕೊಡಲು ಒಪ್ಪಲಿಲ್ಲ. ಎಪ್ಪತ್ತು ರೂ ಮಾತ್ರ ಕೊಡುತ್ತೇನೆ ಎಂದು ಹೇಳಿ, ನನ್ನಲ್ಲಿ ಚಿಲ್ಲರೆ ಇಲ್ಲದಿದ್ದ ಪ್ರಯುಕ್ತ ನೂರು ರೂಪಾಯಿನ ನೋಟು ನೀಡಿದೆ. ಆತ ಟ್ಯಾಕ್ಸಿ ಹೊರಡಿಸಲು ಅನುವಾದ. ಬಾಕಿ ಮೂವತ್ತು ರೂ ಕೇಳಿದರೆ “ಬೇಕಿದ್ದರೆ ಪೋಲೀಸ್ ಸ್ಟೇಶನ್ನಿಗೆ ಹೋಗಿ ಕೇಳು” ಎಂದು ದಬಾಯಿಸಿ ಟ್ಯಾಕ್ಸಿಯನ್ನು ಓಡಿಸಿಕೊಂಡು ಹೋದ. ಅಲ್ಲಿ ನಾನು ಹೋಗಬೇಕಾಗಿದ್ದ ಕಂಪೆನಿಯಲ್ಲಿ ನನ್ನ ಕೆಲಸ ಆದ ಬಳಿಕ ಸಮೀಪದಲ್ಲೇ ಇದ್ದ ಪೋಲೀಸ್ ಠಾಣೆಗೆ ಹೋಗಿ ಕಥೆ ಪೂರ್ತಿ ಹೇಳಿ ಟ್ಯಾಕ್ಸಿಯ ನಂಬರ್ ಬರೆದುಕೊಂಡಿದ್ದ ಕಾಗದದ ಚೂರನ್ನು ನೀಡಿದೆ. ಆತ ಆ ಕಾಗದವನ್ನು ಕಿಸೆಗೆ ಹಾಕಿಕೊಂಡು “ಈಗ ನಿಮಗೆ ಮೂವತ್ತು ರೂ ಬರಬೇಕು, ಅಷ್ಟೆ ತಾನೆ” ಎಂದು ಹೇಳಿ ಕಿಸೆಯಿಂದ ಮೂವತ್ತು ರೂ ತೆಗೆದು ನೀಡಿದ. ನನಗೆ ಆಶ್ಚರ್ಯವಾಯಿತು. “ನೀವು ಯಾಕೆ ಕೊಡುತ್ತಿದ್ದೀರಾ?” ಎಂದು ಪ್ರಶ್ನಿಸಿದೆ. ಆತ “ಈ ಟ್ಯಾಕ್ಸಿ ಡ್ರೈವರ್ ಇಲ್ಲೇ ಸುತ್ತಾಡುತ್ತಿರುತ್ತಾನೆ. ನಮಗೆ ಸಿಕ್ಕೇ ಸಿಗುತ್ತಾನೆ. ಆತನ ಕೈಯಿಂದ ನಾವು ವಸೂಲು ಮಾಡಿಕೊಳ್ಳುತ್ತೇವೆ. ಈಗ ನೀವು ಇಲ್ಲಿಂದ ಹೋಗಬಹುದು” ಎಂದ! ಬೆಂಗಳೂರಿನಲ್ಲಿ ರಿಕ್ಷಾ ಡ್ರೈವರುಗಳ ವಿರುದ್ಧ ಪೋಲೀಸರಿಗೆ ದೂರು ನೀಡಲು ಪ್ರಯತ್ನಿಸಿದ್ದೀರಾ?
ಕುಬೇರಪ್ಪ ಕುಬೇರಪ್ಪಾ...
ಲಕ್ಷ್ಮೀ ಪೂಜೆ ಮಾಡ್ದಾ..?
ಮಾಡೇ ಇರ್ತಿಯಾ ಬಿಡು ದೇವರ ಗೂಡಲ್ಲಿ ಐವತ್ತೋ, ನೂರೋ ರೂಪಾಯಿ ಇಟ್ಟು....
ನಮ್ಮ ಕಡೆ (ಮಂಗಳೂರು ಸುತ್ತ ಮುತ್ತ) ಸೂರ್ಯ ಗ್ರಹಣದ ಸಮಯದಲ್ಲಿ ಉಳಿದ ಆಹಾರ (ಅನ್ನ ಪಲ್ಯ)ಕ್ಕೆ ಗರಿಕೆ ಹುಲ್ಲನ್ನು ಹಾಕಿ ಇಡುತ್ತಾರೆ.. ಬಾವಿಗೂ ಹಾಕುವ ಕ್ರಮ ಇದೆ.. ಈ ಗರಿಕೆ ಹುಲ್ಲಿನ ಹಿಂದಿರುವ ವೈಜ್ಞಾನಿಕ ಸತ್ಯವೇನೆಂದು ನನಗೆ ಇದುವರೆಗೂ ತಿಳಿದಿಲ್ಲ.. ಯಾರಿಗಾದರೂ ತಿಳಿದಿದೆಯೇ. ಹಿಂದಿನವರು ಏನಾದರೂ ಕಾರಣವಿರದೆ ಇದನ್ನು ಪಾಲಿಸಲಾರರು ಎಂಬುವುದೇ ನನ್ನ ನಂಬಿಕೆ.