ಥಾಮಸ್ ಆಲ್ವ ಎಡಿಸನ್
ನಮಗೀಗ ವಿದ್ಯುತ್ ಬಲ್ಪ್ ಅನ್ನು ಹೇಗೆ ಮಾಡಬಾರದು ಎಂದು ಸಾವಿರ ರೀತಿಗಳು ಗೊತ್ತಿವೆ. - ಥಾಮಸ್ ಆಲ್ವ ಎಡಿಸನ್
ನಮಗೀಗ ವಿದ್ಯುತ್ ಬಲ್ಪ್ ಅನ್ನು ಹೇಗೆ ಮಾಡಬಾರದು ಎಂದು ಸಾವಿರ ರೀತಿಗಳು ಗೊತ್ತಿವೆ. - ಥಾಮಸ್ ಆಲ್ವ ಎಡಿಸನ್
ಅಂದು
ಅಂದು ವಿಜಯದಶಮಿ
ಅಧರ್ಮವ ಹತ್ತಿಕ್ಕಿ ಧರ್ಮಕ್ಕೆ ಇಂಬು ಕೊಟ್ಟ ದಿನ
ಅದು ತ್ರೇತಾಯುಗ
ನಿನ್ನೆ ಮುಂಬೈಯಲ್ಲಿ ಅಮೃತಧಾರೆ ಚಿತ್ರ ವೀಕ್ಷಿಸಿದ ಕೊನೆಗೆ, ಸಬ್ ಟೈಟಲ್ಸ್ ಕ್ರೆಡಿಟ್ಸ್ ನಮ್ಮ ಬಳಗದ ಓಎಲ್ಎನ್ ರವರಿಗೆ ಎಂದು ತಿಳಿದು ಆಶ್ಚರ್ಯವೇನೂ ಆಗಲಿಲ್ಲ ಬದಲಿಗೆ, ಇದು ಅವರು ಅಧ್ಯಕ್ಷರಾಗಿರುವ ಭಾಷಾಂತರ ಅಕಾಡೆಮಿಯ assignment ಇರಬಹುದೇ ಎಂದು ಅನುಮಾನವುಂಟಾಯ್ತು....
ಇದು ನಾನು ಇತ್ತೀಚೆಗೆ ಸಂಪದದಲ್ಲಿ ಬರೆದ ಬ್ಲಾಗ್‍ನ ಒಂದು ವೈಯುಕ್ತಿಕ critic. ಜೊತೆಗೆ http://sampada.net/node/532#comment-689 ನಲ್ಲಿ ಇಸ್ಮಾಯಿಲರ ಅನಿಸಿಕೆಗಳಿಗೆ ಸಂಬಂಧಿಸಿದಂತೆ ನನ್ನ ಯೋಚನೆಗಳು.
11) ಶಿಲೆಯಲ್ಲಿ ಆನೆಯನ್ನು ಕೆತ್ತುವ ಅತಿ ಸುಲಭ ವಿಧಾನ: ದೊಡ್ಡ ಅಮೃತಶಿಲೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಆನೆಯಂತೆ ಕಾಣದಿರುವ ಭಾಗವನ್ನೆಲ್ಲ ಕೆತ್ತಿ ತೆಗೆದುಬಿಡಿ.
ತಾಂಗ್ ವಂಶದವರ ಆಳ್ವಿಕೆಯ ಕಾಲದಲ್ಲಿದ್ದ ಝೆನ್ ಗುರು ಝೆನ್‌ಗೆಟ್ಸು ತನ್ನ ಶಿಷ್ಯರಿಗೆ ಹೀಗೆ ಉಪದೇಶಗಳನ್ನು ಮಾಡಿದ:
ಝೆನ್ ಇನ್ನೂ ಜಪಾನಿನಲ್ಲಿ ಪರಿಚಯಗೊಳ್ಳುವ ಮುನ್ನ ತೆಂಡೈ ಪಂಥದ ನಾಲ್ವರು ವಿದ್ಯಾರ್ಥಿಗಳು ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರು. ಅವರು ನಾಲ್ಕು ಜನರೂ ಆತ್ಮೀಯ ಸ್ನೇಹಿತರು. ಏಳು ದಿನಗಳ ಕಾಲ ಮೌನವನ್ನು ಪಾಲಿಸಬೇಕೆಂದು ನಿರ್ಧರಿಸಿದರು.
ಗುರು ರ್ಯೋಕಾನ್ ತನ್ನ ಇಡೀ ಜೀವಿತವನ್ನು ಝೆನ್ ಅಭ್ಯಾಸದಲ್ಲಿ ಕಳೆದಿದ್ದ. ಒಂದು ದಿನ ತನ್ನ ಸೋದರಳಿಯ ವೇಶ್ಯೆಯೊಬ್ಬಳ ಸಹವಾಸಕ್ಕೆ ಬಿದ್ದಿದ್ದಾನೆ, ಸಂಪತ್ತನ್ನೆಲ್ಲ ಹಾಳು ಮಾಡುತ್ತಿದ್ದಾನೆ ಎಂದು ತಿಳಿಯಿತು. ಬಂಧುಗಳೆಲ್ಲ ಬಂದು ರ್ಯೋಕಾನ್ ತನ್ನ ಸೋದರಳಿಯನಿಗೆ ಬುದ್ಧಿ ಹೇಳದಿದ್ದರೆ ಕುಟುಂಬದ ಸಂಪತ್ತೆಲ್ಲ ನಾಶವಾಗುತ್ತದೆ ಎಂದು ಗೋಳಾಡಿದರು.
Yoga's Great Teacher Draws Crowds on Final U.S. Tour - New York Times
ಮೇಲಿನ ಕೊಂಡಿಯನ್ನು ನೀವು ಕ್ಲಿಕ್ಕಿಸಿದರೆ ಬೆಂಗಳೂರಿನ ಬಳಿಯ ಬೆಳ್ಳೂರಿನವರಾದ ಬಿ.ಕೆ.ಎಸ್.ಅಯ್ಯಂಗಾರ್ಯರ ಬಗ್ಗೆ ಇರುವ ನ್ಯೂಯಾರ್ಕ್ ಟೈಮ್ಸ್ ನ ಲೇಖನವನ್ನೋದಬಹುದು. ಅಯ್ಯಂಗಾರ್ಯರ ಹೆಸರು ಯೋಗಾಭ್ಯಾಸಿಗಳಿಗೆ ಮಾತ್ರವಲ್ಲ, ಯೋಗದ ಹೆಸರು ಕೇಳಿದ್ದವರಿಗೂ ಚಿರಪರಿಚಿತ. ಅವರ "ಯೋಗದೀಪಿಕೆ" (ಕನ್ನಡದಲ್ಲಿನ ಅನುವಾದ) ಬಹಳ ಒಳ್ಳೆಯ ಗ್ರಂಥ. (ನಮ್ಮ ಮನೆಯಲ್ಲಿದೆ. ನಾನು ಓದಿದ್ದೇನೆ. ಮಾಡಿ ನೋಡಿಲ್ಲ). ಅವರ ಗ್ರಂಥಗಳು ವಿಶ್ವವಿಖ್ಯಾತವಾದುವು. ಎಂಭತ್ತಾರು ವರ್ಷದ ಜ್ಞಾನವೃದ್ಧರಾದ ಇವರು ಹಲವು ಯುವಕರನ್ನು ನಾಚಿಸುವಂಥ ದೇಹಪಟುತ್ವವನ್ನು ಇನ್ನೂ ಉಳ್ಳವರು. ಯೋಗದ ಶಕ್ತಿ ಮತ್ತು ಮಹತ್ತ್ವಗಳ ಜೀವಂತ ಉದಾಹರಣೆಯೆಂದರೆ ಶ್ರೀ ಅಯ್ಯಂಗಾರ್ಯರೇ. ಇವರ ಅನುಯಾಯಿವರ್ಗ ಪ್ರಪಂಚದ ಪ್ರಮುಖರಿಂದ ಕೂಡಿದೆ. ಖ್ಯಾತ ವಯೊಲಿನ್ ವಾದಕರಾಗಿದ್ದ ಯಹೂದಿ ಮೆನೂಹಿನ್ ಅವರಿಗೂ ಇವರೇ ಯೋಗಾಚಾರ್ಯರು. ಈಗಲೂ ಫ್ಯಾಶನ್ ಪ್ರಪಂಚದ ಪ್ರಮುಖರು, ಸಿನಿಮಾ ತಾರೆಯರು ಇವರ ಶಿಷ್ಯರೆಂದು ತಮ್ಮನ್ನು ಏಣಿಸಿಕೊಳ್ಳುತ್ತಾರೆ. ಕಳೆದ ಹನ್ನೆರಡು ವರ್ಷಗಳಲ್ಲಿ ಮಾನ್ಯರ ಮೊದಲನೆಯ ಅಮೇರಿಕಾ ಯಾತ್ರೆ ಅವರ ಕೊನೆಯ ಅಮೇರಿಕಾಯಾತ್ರೆಯೂ ಆಗಿದೆ ಎಂದು ಪತ್ರಿಕೆಯ ವರದಿ ತಿಳಿಸುತ್ತದೆ. ಹೆಚ್ಚಿನ್ನೇನು ಹೇಳಲಾರೆ. ಲೇಖನ ಓದಿ ನೋಡಿ. ಚೆನ್ನಾಗಿದೆ. ಇಂಥವರು ಕನ್ನಡಿಗರು, ನಮ್ಮವರು ಎನ್ನುವುದು ಹೆಮ್ಮಯ ವಿಷಯವಲ್ಲವೇ?
ಮುಕ್ತ ಮಾರುಕಟ್ಟೆಗಳು ಮತ್ತು ಜಾಗತೀಕರಣದಿಂದ ಇಂದು ಸಾವಿರಾರು ಕೆಲಸಗಳು ಅಮೇರಿಕಾ ದೇಶದ ಕೈ ತಪ್ಪಿವೆ. ಭಾರತ, ಚೀನ ಮೆಕ್ಸಿಕೋದಂತಹ ಹಲವು ದೇಶಗಳಲ್ಲಿ ಈ ಬೆಳವಣಿಗೆಗಳಿಂದಾಗಿ ಹಲವಾರು ಜನಕ್ಕೆ ಕೆಲಸಗಳು ಸಿಕ್ಕಿವೆ. ಈ ಪ್ರಕ್ರಿಯೆಯಲ್ಲಿ ಕೆಲಸ ಕಳೆದುಕೊಂಡ ಅಮೇರಿಕಾದ ಜನರ ವಿಚಾರವಾಗಿ ಹೆಚ್ಚಾಗಿ ತಿಳಿದಿಲ್ಲ. ಮೊದಲು manufacturing ವಲಯದಲ್ಲಿ ಬಹಳ ಪ್ರಸಿದ್ಧವಾಗಿದ್ದ ಸಣ್ಣ ಸಣ್ಣ ನಗರಗಳು ಇಂದು ಯಾವ ಚಟುವಟಿಕೆಗಳಿಲ್ಲದೇ ಪಾಳು ಬಿದ್ದಿವೆ. ಕೆಲಸ ಕಳೆದುಕೊಂಡ ಜನರು ದೊಡ್ಡ ನಗರಗಳಿಗೆ ವಲಸೆ ಹೋಗಿದ್ದಾರೆ ಅಥವ ಸರ್ಕಾರದ welfare ಯೋಜನೆಗಳ ಆಶ್ರಯ ಪಡೆದಿದ್ದಾರೆ. ಉದಾಹರಣೆಗೆ: ನೇಯ್ಗೆ ಮುಂತಾದ ದೊಡ್ಡ ದೊಡ್ಡ ಕೈಗಾರಿಕೆಗಳಿದ್ದಂತಹ ನಗರಗಳು. ಅವರ ಕೆಲಸಗಳು ಮೆಕ್ಸಿಕೋ ಚೀನ ಭಾರತಗಳಿಗೆ, ಕ್ಯಾಲಿಫೋರ್ನಿಯಾದ ಅಕ್ರಮ ವಲಸೆಗಾರರ ಕಡಿಮೆ ಸಂಬಳದ ಮಿಲ್‍ಗಳ ವಶವಾಗಿವೆ. ಕೆಲಸ ಕಳೆದುಕೊಂಡ ಜನರಿಗೆ ಇನ್ನೂ ಉತ್ಕೃಷ್ಟವಾದ ಕೆಲಸ ಸಿಗುತ್ತದೆಯೆಂಬ ಆಶ್ವಾಸನೆ ಸುಳ್ಳಾಗಿದೆ.