ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಝೆನ್ ಕಥೆ ೩೩: ಸಾವಧಾನ!

try hard
 ಕತ್ತಿವರಸೆಯನ್ನು ಕಲಿಯುವುದರಲ್ಲಿ ಆಸಕ್ತನಾಗಿದ್ದ ಯುವಕನೊಬ್ಬ ಝೆನ್ ಗುರುವಿನ ಬಳಿಗೆ ಬಂದ.
"ನಾನು ನಿಮ್ಮ ಬಳಿ ಕತ್ತಿವರಸೆಯ ಕೌಶಲ ಕಲಿಯಬೇಕೆಂದಿದ್ದೇನೆ. ಪರಿಣತಿಯನ್ನು ಪಡೆಯಲು ಎಷ್ಟು ಕಾಲ ಬೇಕಾದೀತು?" ಎಂದು ಕೇಳಿದ.
ತೀರ ಸಹಜವೆಂಬಂತೆ ಗುರು "ಹತ್ತು ವರ್ಷ" ಎಂದ.
"ನನಗೆ ಬೇಗ ಕಲಿಯಬೇಕೆಂದು ಇಷ್ಟ. ಪ್ರತಿ ದಿನವೂ, ದಿನಕ್ಕೆ ಹದಿನೆಂಟು ಗಂಟೆಯ ಕಾಲ ಬೇಕಾದರೆ ಅಭ್ಯಾಸ ಮಾಡಬಲ್ಲೆ. ಹಾಗಾದರೆ ಎಷ್ಟು ಕಾಲ ಹಿಡಿದೀತು?" ಆತುರದಿಂದ  ಯುವಕ ಕೇಳಿದ.
ಗುರು ಒಂದು ಕ್ಷಣ ಯೋಚನೆ ಮಾಡಿ "ಇಪ್ಪತ್ತು ವರ್ಷ" ಎಂದ.

[ನಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನಾವು ಯೋಚಿಸುವ ರೀತಿಯನ್ನು ನೆನಪಿಸಿಕೊಳ್ಳಿ!] 

ಝೆನ್ ಕಥೆ ೩೨: ಕೌಶಲ ಮತ್ತು ಮನಸ್ಸು

archer
 

ಅನೇಕ ಬಿಲ್ಲುಗಾರಿಕೆಯ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಿದ್ದ ಅಹಂಕಾರಿ ಯುವಕನೊಬ್ಬ  ಧನುರ್ವಿದ್ಯೆಯಲ್ಲಿ ಪರಿಣತನಾಗಿದ್ದ ಝೆನ್ ಗುರುವಿನ ಬಳಿ ಬಂದು ಪಂದ್ಯ ಕಟ್ಟಿದ.
ಯುವಕ ಚತುರ ಬಿಲ್ಲುಗಾರ. ದೂರದಲ್ಲಿದ್ದ ಗುರಿಗೆ ಸರಿಯಾಗಿ ಬಾಣ ಬಿಟ್ಟ. ಎರಡನೆಯ ಬಾಣದಿಂದ ಮೊದಲ ಬಾಣವನ್ನು ಸರಿಯಾಗಿ ಎರಡು ಭಾಗವಾಗುವಂತೆ ಸೀಳಿದ. "ನಿಮ್ಮ ಕೈಯಲ್ಲಿ ಆಗುವುದೋ ನೋಡಿ" ಎಂದ ಹೆಮ್ಮೆಯಿಂದ.
ಗುರು ವಿಚಲಿತನಾಗಲಿಲ್ಲ. ಹಾಗೆಂದು ಕೂಡಲೆ ಬಿಲ್ಲು ಎತ್ತಿ ಬಾಣ ಬಿಡಲೂ ಇಲ್ಲ. ಬಾ ನನ್ನೊಡನೆ ಎಂದು ಹೇಳಿ ಬೆಟ್ಟ ಏರ ತೊಡಗಿದ. ವೃದ್ಧನ ಉದ್ದೇಶ ಏನಿರಬಹುದೆಂದು ಅಚ್ಚರಿ ಪಡುತ್ತಾ ಯುವಕ ಹಿಂದೆಯೇ ಸಾಗಿದ.
ಬೆಟ್ಟದ ತುದಿ ಬಂದಿತು. ಅಲ್ಲೊಂದು ಆಳವಾದ ಕಮರಿ. ಅದಕ್ಕೆ ಅಡ್ಡಲಾಗಿ ಲಡ್ಡು ಹಿಡಿದಿದ್ದ ಮರದ ತುಂಡೇ ಸೇತುವೆ. ಕಾಲಿಟ್ಟರೆ ಸಾಕು ಅಲುಗಾಡುತ್ತಿತ್ತು. ಗುರು ಆ ಮರದ ದಿಮ್ಮಿಯ ಮಧ್ಯ ಭಾಗಕ್ಕೆ ನಡೆದು ಸ್ಥಿರವಾಗಿ ನಿಂತ. ದೂರ ಮರದಲ್ಲಿದ್ದ ಹಣ್ಣಿಗೆ ಗುರಿ ಇಟ್ಟು ಬಾಣ ಬಿಟ್ಟ. ಹಣ್ಣು ಬಿತ್ತು. " ಮತ್ತೆ ಹಿಂದಿರುಗಿ ಈಗ ನಿನ್ನ ಸರದಿ" ಎಂದ ಯುವಕನತ್ತ ನೋಡುತ್ತಾ.
ಆಳವಾದ ಕಮರಿಯನ್ನು ನೋಡುತ್ತ ಯುವಕ ಭಯ ಭೀತನಾಗಿದ್ದ. ಲಡ್ಡು ಹಿಡಿದ ಮರದ ದಿಮ್ಮಿಯ ಮೇಲೆ ಕಾಲಿಡುವುದಕ್ಕೇ ಅವನಿಗೆ ಧೈರ್ಯವಾಗಲಿಲ್ಲ. ಅಲ್ಲಿ ನಿಂತು ಬಾಣಬಿಡುವ ಮಾತು ದೂರವೇ ಉಳಿಯಿತು.
"ನಿನಗೆ ಬಿಲ್ಲುಗಾರಿಕೆಯ ಕೌಶಲವಿದೆ. ಆದರೆ ಬಾಣವನ್ನು ಎಸೆಯುವ ಬಿಲ್ಲನ್ನೂ, ಬಾಣವನ್ನು ಬಿಡುವ ಕೈಯನ್ನೂ ನಿಯಂತ್ರಿಸುವ ಮನಸ್ಸನ್ನು ನೀನು ಹೇಳಿದಂತೆ ಕೇಳುವಹಾಗೆ ಮಾಡುವ ಕೌಶಲ ಬಂದಿಲ್ಲ" ಎಂದ ಗುರು.

ಝೆನ್ ಕಥೆ ೩೧: ಚೆಲುವು

ಸುಪ್ರಸಿದ್ಧ ಝೆನ್ ದೇವಾಲಯವೊಂದರಲ್ಲಿ ಯುವಕ ಸನ್ಯಾಸಿಯೊಬ್ಬನಿಗೆ ತೋಟವನ್ನು ನೋಡಿಕೊಳ್ಳುವ ಕೆಲಸ ಕೊದಲಾಗಿತ್ತು. ಅವನಿಗೆ ಹೂಗಳು, ಗಿಡಮರಗಳು ಎಂದರೆ ಬಹಳ ಪ್ರೀತಿ, ಅದಕ್ಕೇ ಆ ಕೆಲಸ ಕೊಟ್ಟಿದ್ದರು. ಆ ದೇವಸ್ಥಾನದ ಪಕ್ಕದಲ್ಲಿ ಇನ್ನೊಂದು ಹಳೆಯ ಪುಟ್ಟ ದೇವಸ್ಥಾನವಿತ್ತು. ಅಲ್ಲೊಬ್ಬ ವಯಸ್ಸಾದ ಝೆನ್ ಗುರು ಇದ್ದ.

ಸಂಪದ ಸುದ್ದಿ ಪತ್ರ

ಸಂಪದ ಸುದ್ದಿ ಪತ್ರ ಅಪರೂಪವಾಗಿ ನಿಮ್ಮ ಇನ್‌ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುವ ಇ-ಪತ್ರ. ಮೊದಲಿಗೆ ತಿಂಗಳಿಗೊಂದು ಕಳುಹಿಸುವುದೆಂದು ಪ್ರಾರಂಭಿಸಿದ್ದಾದರೂ ಇತ್ತೀಚೆಗೆ ಈ ಸುದ್ದಿ ಪತ್ರ ಸದಸ್ಯರಿಗೆ ಏನಾದರೂ ತಿಳಿಸುವ ಔಚಿತ್ಯವಿದ್ದ ಸಮಯಕ್ಕೆ ಮಾತ್ರ ಮೀಸಲಾಗಿ ಮೊಟಕುಗೊಂಡಿದೆ. ಸಂಪದದಲ್ಲಿ ಹಾಗೂ ಸಂಪದದ ಸುತ್ತ ಆಗುತ್ತಿರುವ ಬದಲಾವಣೆಗಳು ಹಾಗೂ ಹೊಸ ಸೇರ್ಪಡೆಗಳ ಬಗ್ಗೆ, ಸುತ್ತ ಮುತ್ತ ನಡೆಯುವ ಕನ್ನಡ ಕಾರ್ಯಕ್ರಮಗಳ ಬಗ್ಗೆ ಸಂದೇಶ ಕಳುಹಿಸಲು ಈ ಸುದ್ದಿ ಪತ್ರ.

ಈ ಸುದ್ದಿ ಪತ್ರ ನಿಮಗೂ ತಲುಪುವಂತೆ ಕೆಳಗೆ ನಿಮ್ಮ ಇ-ಮೇಯ್ಲ್ ವಿಳಾಸ ನೀಡಿ ನೊಂದಾಯಿಸಿಕೊಳ್ಳಿ.

Enter your email address below:



ಗಮನಿಸಿ: ಎಲ್ಲ ಸದಸ್ಯರಿಗೂ ಈ ಸುದ್ದಿ ಪತ್ರ ತಲುಪುವುದಿಲ್ಲ, ಮೇಲೆ ಇ-ಮೇಯ್ಲ್ ವಿಳಾಸ ನೀಡಿ ನೊಂದಾಯಿಸಿಕೊಂಡವರಿಗೆ ಮಾತ್ರ.

ಆ ಮೌನ..

ಎಳೆಯ ತೊರೆಯ ಮರೆಯ ದಾಟಿ
ಮೂಡಿ ಬಂತು ಮೌನ
ಚಿತ್ತ ಚೈತ್ರ ಚಿಗುರ ಮೀಟಿ
ತೇಲುತಿಹುದು ಗಾನಾ