ಆ ಮೌನ..
ಬರಹ
ಎಳೆಯ ತೊರೆಯ ಮರೆಯ ದಾಟಿ
ಮೂಡಿ ಬಂತು ಮೌನ
ಚಿತ್ತ ಚೈತ್ರ ಚಿಗುರ ಮೀಟಿ
ತೇಲುತಿಹುದು ಗಾನಾ
ಹರಕೆಯಲ್ಲ ಎರಕವಲ್ಲ ಒಮ್ಮೆ
ನೋಡು ಎಲ್ಲೆಯಿಲ್ಲ
ಜೇವಗಾನ ಬಾನಕವನ
ಹೊಳೆವ ತಾರೆ ಸಾಲು
ಜಲದ ಜಳಕ ಮೈಯ್ಯ ಪುಳಕ
ಜರಿಯ ನೊರೆಯ ಬೆರಳು
ಗಾಳಿಗಂಧ ಹೂವ ಬಿನ್ನಃ
ಶಶಿಯೆ ಮನದ ಸದನ
ಮುತ್ತಿಕೊಂಡ ಹಸಿರಹಾಸು
ಚಿತ್ತ ಚಲನವಲನ
ಮಿಂದ ಮಂಜು ಮುತ್ತಹನಿಗೆ
ಬಯಲ ಕನಸು ಕನ್ನ
ಕಣ್ಣದಿಟ್ಟಿ ದೂರದಾಟಿ
ತಪನ ನೂರುವರ್ಣ
ಛಾಯೆ ಚಲನ ಪವನ ಮಿಲನ
ದಾರಿಗುಂಟ ಪಯಣ..