ತೊಗರಿಬೇಳೆ ಚಟ್ನಿ

ತೊಗರಿಬೇಳೆ ಚಟ್ನಿ

ತಯಾರಿಸುವ ವಿಧಾನ

ಉಳಿದ ಸಾಮಗ್ರಿಗಳು :

ನೆನಸಿದ ಹುಣಸೇ ಹಣ್ಣು (ಅಥವಾ ಹುಣಸೇ ರಸ) - 1/2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 1 ಚಮಚ

ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಕಾದನಂತರ ಮೊದಲು ತೊಗರಿಬೇಳೆ ಹಾಕುವುದು. ಬೇಳೆ ಕೆಂಪಗಾಗುತ್ತಿದಂತೆ, ಮೆಣಸು,ಶುಂಠಿ,ಬೆಳ್ಳುಳ್ಳಿ,ಈರುಳ್ಳಿ ಒಂದರನಂತರ ಒಂದನ್ನು ಹಾಕಿ ಎಣ್ಣೆಯಲ್ಲಿ 3-4 ನಿಮಿಷ ಹುರಿಯಬೇಕು.   ಈ ಮಿಶ್ರಣವನ್ನು ಮಿಕ್ಸರಿನಲ್ಲಿ ಹಾಕಿ,ಕಾಯಿತುರಿ,ಹುಣಸೆಹಣ್ಣು,ಉಪ್ಪಿನೊಂದಿಗೆ ಹದಕ್ಕೆ ಬೇಕಾಗುವಷ್ಟು ನೀರು (1 ಬಟ್ಟಲು) ಹಾಕಿ ನುಣ್ಣಗೆ ರುಬ್ಬಬೇಕು.ಕೊತ್ತಂಬರಿ/ಪುದೀನಾ ಸೊಪ್ಪು ಕೂಡ ರುಬ್ಬುವ ಮುಂಚೆ ಹಾಕಬಹುದು.

ಒಗ್ಗರಣೆ (ಕಡ್ಡಾಯವಲ್ಲ) :
ಕೊಬ್ಬರಿ ಎಣ್ಣೆ - 1/4 ಸಣ್ಣ ಚಮಚ
ಉದ್ದಿನ ಬೇಳೆ - 1/2 ಸಣ್ಣ ಚಮಚ
ಕರಿಬೇವು - 5-6 ಎಲೆಗಳು
ಇಂಗು - 1 ಚಿಟಿಕೆ

ಎಣ್ಣೆ ಕಾಯಿಸಿ ಉಳಿದೆಲ್ಲಾ ಸಾಮಗ್ರಿಗಳನ್ನು ಹಾಕಿ ಬೇಳೆ ಕೆಂಪಗಾದ ನಂತರ ಚಟ್ನಿಯೊಂದಿಗೆ ಸೇರಿಸಿ ಕಲಸುವುದು.

ಹದ:

ಗಟ್ಟಿಯಾಗಿ ರುಬ್ಬಿದರೆ - ದೋಸೆ, ಎಣ್ಣೆರೋಟ್ಟಿ ,ಹುಗ್ಗಿ,ಗಂಜಿಯ ಜೊತೆ 

ನೀರು ಜಾಸ್ತಿ ಹಾಕಿ ತೆಳ್ಳಗೆ ರುಬ್ಬಿದರೆ- ಇಡ್ಲಿ,ಪಕೋಡ,ಬೊಂಡ,ಉಪ್ಪಿಟ್ಟಿನ ಜೋತೆ ಚೆನ್ನಗಿರುತ್ತದೆ.

ನಮ್ಮಮ್ಮ :)

3-4 ಜನರಿಗೆ ಬೆಳಗಿನ /ಸಂಜೆಯ ತಿಂಡಿಯ ಜೊತೆ :)

15

ತೊಗರಿಬೇಳೆ - 3-4 ದೊಡ್ಡ ಚಮಚ

ತೆಂಗಿನಕಾಯಿ ತುರಿ - 1/2 ಬಟ್ಟಲು

ಹಸಿಮೆಣಸು - 3-4 (ಇದೇ ಪ್ರಮಾಣದಲ್ಲಿ ಒಣಮೆಣಸನ್ನೊ ಹಾಕಬಹುದು)

ಶುಂಠಿ - ಸಣ್ಣ ಚೂರು

ಬೆಳ್ಳುಳ್ಳಿ - 1 ಎಸಳು

ಈರುಳ್ಳಿ - 1 (ಚಿಕ್ಕದು)