ಶ್ರೇಷ್ಠ ಸಂಸ್ಕೃತ ಸುಭಾಷಿತಗಳು ೧-೩

ಶ್ರೇಷ್ಠ ಸಂಸ್ಕೃತ ಸುಭಾಷಿತಗಳು ೧-೩

೧. ದ್ರಾಕ್ಷಾ ಮ್ಲಾನಮುಖೀ ಜಾತಾ ಶರ್ಕರಾ ಚಾಶ್ಮತಾಂ ಗತಾ |
ಸುಭಾಷಿತ ರಸಸ್ಯಾಗ್ರೇ ಸುಧಾ ಭೀತಾ ದಿವಂಗತಾ ||

ಸುಭಾಷಿತದ ಸ್ವಾರಸ್ಯವನ್ನು ನೋಡಿ ದ್ರಾಕ್ಷಿಯ ಮುಖ ಸಪ್ಪಗಾಯಿತು , ಸಕ್ಕರೆ ಕಲ್ಲಾಯಿತು , ಅಮೃತವು ಹೆದರಿ ಸ್ವರ್ಗಕ್ಕೆ ಓಡಿತು.

೨. ವಜ್ರ್‍ಆದಪಿ ಕಠೋರಾಣೀ ಮೃದೂನಿ ಕುಸುಮಾದಪಿ |
ಲೋಕೋತ್ತರಾಣಾಂ ಚೇತಾಂಸಿ ಕೋಹಿ ವಿಜ್ಞಾತುಂ ಅರ್ಹತಿ ? ||

ಸಜ್ಜನರ ಮನಸ್ಸು ಒಮ್ಮೆ ವಜ್ರಕ್ಕಿಂತಲೂ ಕಠೋರ , ಇನ್ನೊಮ್ಮೆ ಹೂವಿಗಿಂತ ಮೃದು . ಇತರ ಜನರಂತಲ್ಲದ ಅವರ ಮನಸ್ಸನ್ನು ತಿಳಿಯಬಲ್ಲವರಾರು ?

೩. ಪರಪರಿವಾದೇ ಮೂಕ: ಪರನಾರೀದರ್ಶನೇಪಿ ಜಾತ್ಯಂಧ:
ಪಂಗು: ಪರಧನಹರಣೇ ಸ ಜಯತಿ ಲೋಕೇ ಮಹಾಪುರುಷ:||

ಇತರರ ನಿಂದಿಸುವ ವಿಷಯದಲ್ಲಿ ಮೂಕರು , ಪರನಾರಿಯರ್ನ್ನು ನೋಡುವ ವಿಷಯಕ್ಕೆ ಹುಟ್ಟುಗುರುದರು , ಪರರ ಹಣವನ್ನು ಅಪಹರಿಸುವಲ್ಲಿ ವಿಷಯದಲ್ಲಿ ಹೆಳವರು ಲೋಕದಲ್ಲಿ ಮಹಾಪುರುಷರು ಹೀಗೆ ಇರುವರು.

Rating
No votes yet

Comments