ಅಂಗಳಕಿಂದು ಬಾರೋ ಕೃಷ್ಣಯ್ಯ...
ಅಂಗಳಕಿಂದು ಬಾರೋ ಕೃಷ್ಣಯ್ಯ
ಅಂಗಳಕಿಂದು ಬಾರೋ || ಪಲ್ಲವಿ ||
ತಿಂಗಳ ಮೊಗದ ಚೆನ್ನಿಗರಾಯನೇ
ಮಂಗಳವನ್ನು ತಾರೋ... || ಅನು ಪಲ್ಲವಿ ||
ಕಾಲಿಗೆ ಗೆಜ್ಜೆಯ ಕಟ್ಟಿ
ಹಾಲಿನ ಹೆಜ್ಜೆಯನಿಟ್ಟು
ಕುಣಿ ಕುಣಿದಾಡುತಾ ಬಾರೋ || ೧ ||
ಹಳದಿ ರೇಷಿಮೆ ಹೊದ್ದು
ಬಿಳಿಯ ಮುದ್ದೆಯ ಮೆದ್ದು
ಮುದ್ದಿನ ಮೊಗವನು ತೋರೋ || ೨ ||
ಚೆಂದದ ಹೂಗಳ ಧರಿಸಿ
ಚಂದನ ದೇಹಕೆ ಬಳಸಿ
ಗೋಗಳ ಒಲಿಸಲು ಬಾರೋ || ೩ ||
ಚಿಣ್ಣರ ಒಡನೆ ಮೆರೆದು
ಬಣ್ಣದ ಗೋಪಿಯರೆಳೆದು
ತುಂಟಾಟವಾಡಲು ಬಾರೋ || ೪ ||
ವಂಕಿಯ ತೋಳಿಗೆ ಹೇರಿ
ಬಿಂಕದ ನಗುವನು ಬೀರಿ
ಕೊಳಲನು ಊದಲು ಬಾರೋ || ೫ ||
ನವಿಲಗರಿಯನು ತೊಟ್ಟು
ಸವಿಯನು ಹರಿಯಲು ಬಿಟ್ಟು
ನಲಿ ನಲಿದಾಡುತಾ ಬಾರೋ || ೬ ||
--ಶ್ರೀ
Rating
Comments
ಉ: ಅಂಗಳಕಿಂದು ಬಾರೋ ಕೃಷ್ಣಯ್ಯ...
In reply to ಉ: ಅಂಗಳಕಿಂದು ಬಾರೋ ಕೃಷ್ಣಯ್ಯ... by anil.ramesh
ಉ: ಅಂಗಳಕಿಂದು ಬಾರೋ ಕೃಷ್ಣಯ್ಯ...
In reply to ಉ: ಅಂಗಳಕಿಂದು ಬಾರೋ ಕೃಷ್ಣಯ್ಯ... by srinivasps
ಉ: ಅಂಗಳಕಿಂದು ಬಾರೋ ಕೃಷ್ಣಯ್ಯ...
In reply to ಉ: ಅಂಗಳಕಿಂದು ಬಾರೋ ಕೃಷ್ಣಯ್ಯ... by nkumar
ಉ: ಅಂಗಳಕಿಂದು ಬಾರೋ ಕೃಷ್ಣಯ್ಯ...
In reply to ಉ: ಅಂಗಳಕಿಂದು ಬಾರೋ ಕೃಷ್ಣಯ್ಯ... by srinivasps
ಉ: ಅಂಗಳಕಿಂದು ಬಾರೋ ಕೃಷ್ಣಯ್ಯ...
ಉ: ಅಂಗಳಕಿಂದು ಬಾರೋ ಕೃಷ್ಣಯ್ಯ...
In reply to ಉ: ಅಂಗಳಕಿಂದು ಬಾರೋ ಕೃಷ್ಣಯ್ಯ... by vinutha.mv
ಉ: ಅಂಗಳಕಿಂದು ಬಾರೋ ಕೃಷ್ಣಯ್ಯ...