|| ಕಣ್ಣೀರು...||
ಕಣ್ಣೀರ ಧಾರೆ ನಂಗೇಕೆ
ಎನ್ನುವ ಮನಕೆ...
ಮನದ ಭಾವ-ಅಭಾವಗಳ ಭಾವ;
ಮನದ ತರಂಗಗಳ ನುಡಿ ;
ಸಾಗರದಲೆಗಳ ದನಿ ;
ಆಸೆ - ಆಕಾಂಕ್ಷೆ - ಗೆಲುವುಗಳ
ಹೊನ್ನುಡಿ ;
ನೋವು-ಹತಾಶೆ-ಸೋಲುಗಳ
ಬೆನ್ನುಡಿ ;
ಮನಧರೆಯ ಜ್ವಾಲಾಮುಖಿ
ಸೋಕಿಸದೆ ತಟ್ಟುವ ತಪರಾಕಿ ;
ಕಲ್ಲಾದ ಮನಕೆ ಬದುಕ ಸಿಂಚನ ;
ಅರಳುವ ಮನಕೆ ಅರಳಿದ ಹೂಬನ ;
ದೂರ ಸರಿದ ಮನಗಳ
ಸೇತುವೆ ;
ಉತ್ಕಟಾಭಿಮಾನಗಳ
ಬಂಧುವೆ ;
ಈ ಪನ್ನೀರು
ಈ ಕಣ್ಣೀರು !
---ಅಮರ್
Rating