ಜ್ಞಾನ, ಭಾವ, ಕರ್ಮ (ಭಾಗ 1)
21 hours 27 minutes ago - ಬರಹಗಾರರ ಬಳಗಇಂದು ನಾವು ಜ್ಞಾನ ಶ್ರೇಷ್ಠವೋ? ಕರ್ಮ ಶ್ರೇಷ್ಠವೋ ? ಅಥವಾ ಭಾವ ಶ್ರೇಷ್ಠವೋ ? ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ...
ಜ್ಞಾನ ಇದ್ದವರು ಉಳಿದವರನ್ನು ಉಪೇಕ್ಷೆ ಮಾಡುತ್ತಾರೆ. ಉದಾಹರಣೆಗೆ, ಒಂದು ಕುಟುಂಬ ಇತ್ತು. ಅವರಿಗೆ ಮೂರು ಜನ ಮಕ್ಕಳು. ಮೊದಲನೆಯವನು ತುಂಬಾ ಬುದ್ಧಿವಂತ. ಓದಿ ಕೆಲಸದ ಮೇಲೆ ಅಮೆರಿಕಕ್ಕೆ ಹೋದನು. ಮನೆಗೆ ಬರಲಿಲ್ಲ. ಮನೆಯವರ ಜೊತೆ ಮಾತೇ ಇಲ್ಲ. ಈತ ಹಣದ ಹಿಂದೆ ಬಿದ್ದು, ತಂದೆ ತಾಯಿ ಬಿಟ್ಟಿದ್ದನು. ಕೊನೆಯವನು ಅಷ್ಟು ಬುದ್ಧಿವಂತನಲ್ಲ, ಕಟ್ಟು ಮಸ್ತಾದ ದೇಹ. ಚೆನ್ನಾಗಿ ದುಡಿದು, ಹಣ ಗಳಿಸಿ, ಆಸ್ತಿ ಅಂಗಡಿ ಮಾಡಿಕೊಂಡಿದ್ದನು. ಮಧ್ಯದವನು ಪ್ರೇಮದ ವ್ಯಕ್ತಿ. ಅಷ್ಟು ಜಾಣನೂ ಅಲ್ಲ, ಕಟ್ಟು ಮಸ್ತಾದ ದೇಹನೂ ಇಲ್ಲ. ಅಷ್ಟು ಹಣವನ್ನು ಗಳಿಸುತ್ತಿರಲಿಲ್ಲ. ಆದರೆ ತಂದೆ ತಾಯಿ ಸೇವೆ ಮಾಡುತ್ತಿದ್ದನು. ತಂದೆ ಹಿರಿಯ ಮಗನ ಬಣ. ಬುದ್ಧಿವಂತ ಅಂತ ಹಿರಿಯ ಮಗನ ಮೇಲೆ ಪ್ರೀತಿ ಹೆಚ್ಚು. ಹಣ ಗಳಿಸಿದ್ದಾನೆ ಅಂತ ತಾಯಿ ಕಿರಿಯ ಮಗನ ಮೇಲೆ ಪ್ರೀತಿ. ಮೂರನೆಯವನು ಪ್ರೀತಿಯಿಂದ ಸೇವೆ ಮಾಡುತ್ತಾ ಇದ್ದಾನೆ. ಆತನ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಬದುಕು ಹೀಗೆ ನಡೆದಿದೆ.
ಕೆಲವರು ಜ್ಞಾನ ಶ್ರೇಷ್ಠ ಎಂದು ಅದನ್ನೇ ಅನುಸರಿಸುತ್ತಾರೆ. ಕೆಲವರು ಕರ್ಮ ಶ್ರೇಷ್ಠ ಎಂದು ಅದನ್ನೇ ಅನುಸರಿಸುತ್ತಾರೆ. ನಮ್ಮ ಬದುಕು ಜ್ಞಾನ ಮತ್ತು ಕರ್ಮ ಇವೆರಡರಿಂದಲೂ ಕೂಡಿದೆ. ಇವು ಬದುಕಿನ ಎರಡು ಪ್ರಧಾನ ಮುಖಗಳು. ಜ್ಞಾನ ಅಂದರೆ ತಿಳಿದುಕೊಳ್ಳುವುದು. ಕರ್ಮ ಅಂದರೆ ಕಾರ್ಯ, ಕೆಲಸ. ನಾವು ಹೂವು ನೋಡುತ್ತೇವೆ. ಅದರ ಜ್ಞಾನ ಮಾಡಿಕೊಳ್ಳುತ್ತೇವೆ. ಜ್ಞಾನ ಬಹಳ ಮಹತ್ವದ್ದು ಬದುಕಿನಲ್ಲಿ. ಆದರೆ ಆ ಹೂ ಬಳ್ಳಿಗೆ ನೀರು ಹಾಕಬೇಕು, ರಕ್ಷಿಸಬೇಕು. ಇದು ಕೆಲಸ. ಹೀಗೆ ಎರಡರಿಂದ ಬದುಕು ಸಾಗುತ್ತದೆ. ಜ್ಞಾನ ಮತ್ತು ಕರ್ಮದ ಮಧ್ಯದಲ… ಮುಂದೆ ಓದಿ...