22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅನುಮಾನ!

August 8, 2012 - 1:05am
santhu_lm

ನುಡಿವ ನಾಲಗೆಯ ನಡೆಯ ಮೇಲೇಕೋ ನನಗನುಮಾನ.
ಟೊಳ್ಳು ಪೊಳ್ಳು ಸುಳ್ಳು ನುಡಿದು,
ನನ್ನ ಕಳ್ಳನನ್ನಾಗಿಸುವ,
ನಾಲಗೆಯ ಮೇಲೆ ನನಗನುಮಾನ.

ಕಳ್ಳ ದೃಷ್ಟಿಯನಾಕುವ ಕಣ್ಣುಗಳ ಮೇಲೇಕೋ ನನಗನುಮಾನ.
ಕಂಡ ಕಂಡದ್ದರ ಮೇಲೆ ಕಣ್ಣು ಹಾಕಿ,
ಮುಖಕ್ಕೆ ಮಸಿ ಬಳಿಸುವ ,
ಕಣ್ಣುಗಳ ಮೇಲೆ ನನಗನುಮಾನ.

ಮುಗ್ಧ ಮಗುವಿನಂತೆ ಮುಗುಳ್ನಗುವ ಮನಸ ಮೇಲೇಕೋ ನನಗನುಮಾನ.
ಮತ್ತೆ ಮತ್ತೆ ಮೇಲಕ್ಕೆದ್ದು ಮೊಂಡಾಟ ತೋರಿಸಿ,
ಬುದ್ಧಿಯ ಮೇಲೆ ಮಂಕು ಕವಿಸುವ,
ಮನಸ ಮೇಲೇಕೋ ನನಗನುಮಾನ.
                                                  --ಸಂತು

http://frommyheartsa...

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on
ನನಗೊಂದು ಅನುಮಾನ....!! ಕವನ ಸಖತ್... ತೀರ ಅನುಮಾನ ಒಳ್ಳೆದಲ್ಲ..!! ‍‍‍================================== "ಕಳ್ಳ ದೃಷ್ಟಿಯನಾಕುವ ಕಣ್ಣುಗಳ ಮೇಲೇಕೋ ನನಗನುಮಾನ. ಕಂಡ ಕಂಡದ್ದರ ಮೇಲೆ ಕಣ್ಣು ಹಾಕಿ, ಮುಖಕ್ಕೆ ಮಸಿ ಬಳಿಸುವ , ಕಣ್ಣುಗಳ ಮೇಲೆ ನನಗನುಮಾನ." =================================== ಸಾಲುಗಳು ಸಖತ್.. \|/

Submitted by santhu_lm on
ಪ್ರಿಯ ಸಪ್ತಗಿರಿವಾಸಿ ಯವರೇ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. :) ಸರಿಯಾಗಿ ಹೇಳಿದಿರಿ. ಅತಿಯಾದ ಅನುಮಾನ ಒಳ್ಳೆಯದಲ್ಲ. ಆದರೆ ನಮ್ಮ ವ್ಯಕ್ತಿತ್ವವನ್ನು ಹಾಳುಗೆಡಿಸುವ ವಸ್ತುಗಳ ಮೇಲೆ ಒಂದು ಕಣ್ಣಿಡುವುದು ಬಹಳ ಆರೋಗ್ಯಕರ. ತಮ್ಮ ಪ್ರೋತ್ಸಾಹ ಹೀಗೆ ಮುಂದುವರೆಯಲಿ.

Submitted by Rajendra Kumar ... on
ಆತ್ಮೀಯ ಸಂತೋಷ್ ಅವರೆ, ನಿಮ್ಮ ಕವನ ತುಂಬಾ ಚೆನ್ನಾಗಿದೆ. ಅದನ್ನು ಪ್ರತಿಕ್ರಿಯೆಯ ಮೂಲಕ ನಾನು ನಿಮಗೆ ತಿಳಿಸದಿದ್ದರೆ ನನಗೆ ನನ್ನ ಮೇಲೆಯೇ ಏಕೋ ಅನುಮಾನ ಬರುತ್ತದ್ದೆ............ :) ಹಂಚಿಕೊಂಡಿದಕ್ಕೆ ಧನ್ಯವಾದಗಳು.

Submitted by santhu_lm on
ರಾಜೇಂದ್ರ ರವರೆ, ಕೊಂಚವೂ ಅನುಮಾನವಿಲ್ಲದೇ ಧನ್ಯವಾದಗಳು:) ತಮ್ಮ ಪ್ರೋತ್ಸಾಹ ಹೀಗೆ ಮುಂದುವರೆಯಲಿ.

Submitted by Soumya Bhat on
+1 (ಸಪ್ತಗಿರಿಯವರ ಪ್ರತಿಕ್ರಿಯೆ) ಸಂತೋಷರವರೆ ಚಂದವಿದೆ ಅನುಮಾನದ ಸಾಲುಗಳು. ತಮ್ಮ ಅನುಮಾನ ನಿಜವಾಗದಿರಲಿ,ಶುಭವಾಗಲಿ >ಸೌಮ್ಯ

Submitted by santhu_lm on
ಸೌಮ್ಯ ರವರೆ, ಧನ್ಯವಾದಗಳು:) ತಮ್ಮ ಪ್ರೋತ್ಸಾಹ ಹೀಗೆ ಮುಂದುವರೆಯಲಿ.

Submitted by Soumya Bhat on
+1 (ಸಪ್ತಗಿರಿಯವರ ಪ್ರತಿಕ್ರಿಯೆ) ಸಂತೋಷರವರೆ ಚಂದವಿದೆ ಅನುಮಾನದ ಸಾಲುಗಳು. ತಮ್ಮ ಅನುಮಾನ ನಿಜವಾಗದಿರಲಿ,ಶುಭವಾಗಲಿ >ಸೌಮ್ಯ