ಒಂದು ಒಳ್ಳೆಯ ನುಡಿ (229) - ದಶದಾನ !

ಒಂದು ಒಳ್ಳೆಯ ನುಡಿ (229) - ದಶದಾನ !

ಎಂತಹ ಅದ್ಬುತ ಪರಿಕಲ್ಪನೆ ಅಲ್ವಾ! ನರೇಂದ್ರ ಮೋದಿ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷರಿಗೆ ಉತ್ತಮ ಉಡುಗೊರೆ ಕೊಡುವ ಬಗ್ಗೆ ಅದೆಷ್ಟು ಚಿಂತಿಸಿರಬೇಕು. ಪ್ರಧಾನಿ ಮೋದಿ ನಿಜವಾಗಿಯೂ ಭಾರತದ ಆಸ್ಮಿಯತೆಯನ್ನು ಜಗದಗಲಕ್ಕೂ ಹರಡುತ್ತಿದ್ದಾರೆ.

ಸಹಸ್ರಹುಣ್ಣಿಮೆ ದರ್ಶನ: ನವೆಂಬರ್‌ನಲ್ಲಿ ಬೈಡೆನ್‌ಗೆ 81ನೇ ವರ್ಷ ತುಂಬುತ್ತಿದೆ. ಸಾಮಾನ್ಯವಾಗಿ ವ್ಯಕ್ತಿಗೆ 80 ವರ್ಷ, 8 ತಿಂಗಳು ತುಂಬಿದಾಗ ಅವರು ಒಂದು ಸಾವಿರ ಹುಣ್ಣಿಮೆಗಳ ದರ್ಶನ(Sahasra poorna chandrodayam) ಮಾಡಿರುತ್ತಾರೆ. ಈ ಸಂದರ್ಭವನ್ನು 'ದೃಷ್ಟ ಸಹಸ್ರಚಂದ್ರೋ' ಎನ್ನಲಾಗುತ್ತದೆ ಮತ್ತು ಇದಕ್ಕಾಗಿ ದಶದಾನ ನೀಡುವ ವಾಡಿಕೆ ಇದೆ. ಅದರಂತೆ ಪ್ರಧಾನಿ ಮೋದಿ, ಬಿಡೆನ್‌ಗೆ ಗಂಧದ ಪೆಟ್ಟಿಗೆಯೊಳಗೆ, ಕೆತ್ತನೆಗಳುಳ್ಳ ಬೆಳ್ಳಿ ಬಟ್ಟಲುಗಳಲ್ಲಿ 10 ರೀತಿಯ ದಾನದ ವಸ್ತುಗಳನ್ನು ನೀಡಿದ್ದಾರೆ. 

1. ಗೋದಾನದ ರೂಪದಲ್ಲಿ ಬೆಳ್ಳಿ ತೆಂಗಿನಕಾಯಿ

2. ಭೂದಾನವಾಗಿ ಕರ್ನಾಟಕದ ಶ್ರೀಗಂಧದ ಕೊರಡು

3. ತಿಲದಾನವಾಗಿ ತಮಿಳುನಾಡಿನ ಬಿಳಿ ಎಳ್ಳು ದಾನ

4. ಹಿರಣ್ಯದಾನವಾಗಿ ರಾಜಸ್ಥಾನದ 24 ಕ್ಯಾರೆಟ್ ಬಂಗಾರದ ನಾಣ್ಯ

5. ರೌಪ್ಯದಾನವಾಗಿ ರಾಜಸ್ಥಾನದ ಕೆತ್ತನೆಯ ಬೆಳ್ಳಿ ನಾಣ್ಯ ದಾನ

6. ಲವಣದಾನವಾಗಿ ಗುಜರಾತಿನ ಉಪ್ಪು

7. ಆಜ್ಯದಾನವಾಗಿ ತುಪ್ಪ

8. ಧಾನ್ಯ ದಾನ

9. ವಸ್ತ್ರ ದಾನ

10.ಬೆಲ್ಲ ದಾನವನ್ನು ಮಾಡಿದ್ದಾರೆ.

ಎಂತಹ ಅದ್ಬುತ ಪರಿಕಲ್ಪನೆ. ಅಲ್ಲವೇ?

(ಸಂಗ್ರಹ) ಪ್ರಭಾಕರ ಅಡಿಗ, ಉಡುಪಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ