ಕನ್ನಡ ಪತ್ರಿಕಾ ಲೋಕ (ಭಾಗ ೧೫೭) - ಸಂವಾದ

ಕನ್ನಡ ಪತ್ರಿಕಾ ಲೋಕ (ಭಾಗ ೧೫೭) - ಸಂವಾದ

ಸಮಾಲೋಚಕರ ವಾರ್ತಾ ಪತ್ರಿಕೆ "ಸಂವಾದ"

ಬೆಂಗಳೂರಿನ ನಿಮ್ಹಾನ್ಸ್ ಪ್ರಾದೇಶಿಕ ಕಚೇರಿಯು (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ & ನ್ಯೂರೊ ಸಯನ್ಸ್ / NIMHNS) ಪ್ರಕಟಿಸುತ್ತಿದ್ದ ಪತ್ರಿಕೆಯಾಗಿತ್ತು "ಸಂವಾದ". 2003ರ ಮೇ ತಿಂಗಳಲ್ಲಿ "ಸಂವಾದ" ಆರಂಭವಾಯಿತು. 2006ರ ಮಾರ್ಚ್ ನಲ್ಲಿ ಕೊನೆಯ ಸಂಚಿಕೆ ಪ್ರಕಟವಾಯಿತು. ಒಟ್ಟು 30 ಸಂಚಿಕೆಗಳು ಪ್ರಕಟವಾಗಿತ್ತು. ನಾಲ್ಕು ಪುಟಗಳ ಪತ್ರಿಕೆ ಖಾಸಗಿ ಪ್ರಸಾರಕ್ಕೆ ಮಾತ್ರ  ಸೀಮಿತವಾಗಿತ್ತು.

ನಿಮ್ಹಾನ್ಸ್ ಸಂಸ್ಥೆಯು ಕ್ಯಾಪಸಿಟಿ ಬಿಲ್ಡಿಂಗ್ ಪ್ರಾಜೆಕ್ಟ್ ಮೂಲಕ ಎಚ್.ಐ.ವಿ. ಮತ್ತು ಏಡ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕೌನ್ಸಿಲರ್ ಗಳ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ನಡೆಸಿದ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಪೂರಕವಾಗಿ ಪತ್ರಿಕೆಯನ್ನು ಪ್ರಕಟಿಸಿತ್ತು.

800ಕ್ಕೂ ಅಧಿಕ ಮಂದಿಯನ್ನು ತಲುಪುತ್ತಿದ್ದ ಸಂವಾದದ ಸಂಪಾದಕರಾಗಿದ್ದವರು ಡಾ. ಜಯಶ್ರೀ ರಾಮಕೃಷ್ಣ. ಅಖಿಲ ವಾಸನ್, ಅನಂತಲಕ್ಷ್ಮಿ ಎ. ಆರ್., ಗೋವಿಂದರಾಜು, ಜ್ಯೋತಿ ಕಾರ್ಡೋಝಾ, ಲಲಿತಾ, ಲಕ್ಷ್ಮಿ, ಶ್ರೀಪತಾಚಾರ್ಯ ಹಾಗೂ ವಾಸುದೇವ್ ಮಂಜ ಇವರು ಸಂವಾದಕ್ಕಾಗಿ ಶ್ರಮಿಸಿದ್ದರು. ಡಾ. ಡಿ. ನಾಗರಾಜ್, ಡಾ. ಭಕ್ತವತ್ಸಲಮ್, ಡಾ. ಜೇಮ್ಸ್, ಡಾ. ವಿ. ರವಿ, ಡಾ. ಪ್ರಭಾ ಚಂದ್ರ, ಸಂಘಮಿತ್ರಾ ಅಯ್ಯಂಗಾರ್, ಡಾ. ಲತಾ ಹೇಮಚಂದ್ ಹಾಗೂ ಅಲ್ಟರ್ ನೇಟೀವ್ ಲಾ ಫಾರಮ್ ನ ಒಬ್ಬರು ಪ್ರತಿನಿಧಿ ಸಂವಾದದ ಸಲಹಾ ಮಂಡಳಿಯಲ್ಲಿದ್ದರು.

~ ಶ್ರೀರಾಮ ದಿವಾಣ