ಕನ್ನಡ ಭಾಷೆಯ ಅವಸಾನ

ಕನ್ನಡ ಭಾಷೆಯ ಅವಸಾನ

ಬಂದರೂ ಕಾಲೇಜಿಗೆ ಬಾರದು ಕಾಗುಣಿತ 
(ಸಂಗತ: 17/12/2021) ಸಿಬಂತಿ ಪದ್ಮನಾಭ ಕೆ ವಿ ರವರ ಲೇಖನ ಓದಿ ನಗು ಬಂತು. ಇವರು ಇನ್ನೂ ಯಾವ ಕಾಲದಲ್ಲಿದ್ದಾರೆ. ಕಸಾಪ ಅಧ್ಯಕ್ಷರು ಅ ಕಾರ ಹ ಕಾರ ಬಗ್ಗೆ ನೀಡಿದ ಒಂದು ಹೇಳಿಕೆಗೆ ಎಷ್ಟೊಂದು ಟೀಕೆ ಟಿಪ್ಪಣಿಗಳು ಪುಂಖಾನು ಪುಂಖವಾಗಿ ಬಂದವೇ ಹೊರತು, ಅವರ ಹೇಳಿಕೆಯ ಸದುದ್ದೇಶವನ್ನು ಯಾರೂ ಗ್ರಹಿಸಲಿಲ್ಲ.
ಈಗ ಯಾರಿಗೂ ಏನೂ ಬೇಕಾಗಿಲ್ಲ.ಕೇವಲ ಮೋಜು, ಮಸ್ತಿ, ಹಣ, ಅಧಿಕಾರ, ಪಿಜ್ಜಾ ಬರ್ಗರ್ , ಮಾಲು, online shopping ಅಷ್ಟೇ. ಭಾಷೆಯಂತೂ ಯಾರಿಗೂ ಬೇಡ. ಕಾಗುಣಿತ, ವ್ಯಾಕರಣ, ಮಗ್ಗಿ, ಇವೆಲ್ಲಾ ಕೇವಲ ಗತ ಕಾಲದ ವೈಭವಗಳು. ಈಗಿನ ಮಕ್ಕಳಿಗೆ ತಾತಂದಿರು ಅಜ್ಜಿಗಳು ಕಾಗುಣಿತ ಮಗ್ಗಿ ಹೇಳಿಕೊಡಲು ಹೋದರೆ, ಮಕ್ಕಳು ಬಿಡಿ ಅವರ ಅಪ್ಪ ಅಮ್ಮಂದಿರಿಂದಲೇ ಪ್ರತಿರೋಧ ಬರುತ್ತದೆ. ಶಾಲೆಯ ಶಿಕ್ಷಕರೂ ಸಹ ಮಕ್ಕಳಿಗೆ ನಾವು ಹೇಳಿಕೊಟ್ಟದ್ದು ಮಾತ್ರ ಕಲಿಸಿ ಇಲ್ಲದಿದ್ದರೆ ಮಕ್ಕಳಿಗೆ confuse ಆಗುತ್ತದೆ ಎನ್ನುತ್ತಾರೆ. ಯಾಕೆಂದರೆ ಇವೆಲ್ಲಾ   ಮಾರ್ಕ್ಸ್ rank ಪಡೆಯಲು ಸಹಕಾರಿಯಲ್ಲ ಮತ್ತು ಬೇಕಾಗಿಲ್ಲ. ಈಗ ಪರೀಕ್ಷೆಗಳಲ್ಲಿ ಕೂಡ ಬರೆಯುವ ಗೋಜೆ ಇಲ್ಲ. ಕೇವಲ ಬಹು ಆಯ್ಕೆಯ ಪ್ರಶ್ನೆಗಳಿಗೆ  ಉತ್ತರಕ್ಕೆ √ಮಾಡುವುದು.
ಮೊಬೈಲ್ ಗಳಲ್ಲಿ ಆಂಗ್ಲ ಭಾಷೆಯಲ್ಲಿ ಸ್ವರಗಳನ್ನು ಬಿಟ್ಟು ಸಾಂಕೇತಿಕ ವಾಗಿ ಬರೆಯುವುದು, The ಬರೆಯಲು d ಬರೆಯುವುದು, ಕನ್ನಡ ವನ್ನು ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯುವುದು, ಲೆಕ್ಕ ಹಾಕಲು calculator ಉಪಯೋಗಿಸುವುದು, 
ಪರಿಸ್ಥಿತಿ ಹೀಗಿರುವಾಗ ಅ ಕಾರ, ಹ ಕಾರ ಕಾಗುಣಿತ ಮಗ್ಗಿ ವ್ಯಾಕರಣ ಇವೆಲ್ಲಾ ಯಾರಿಗೆ ಬೇಕು ಮಹಾರಾಯರೆ.