ಕುಡಿಯುವ ನೀರು ಹೇಗಿರಬೇಕು?

ಕುಡಿಯುವ ನೀರು ಹೇಗಿರಬೇಕು?

ಕೆಲವು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ನೀರು ಕುದಿಸಿ ಇಟ್ಟಾಗ ಮುಳ್ಳುಗಳು ಏಳುತ್ತವೆ. ಕುದಿಸಿದ ನಂತರ ಬೇರೆ ಪಾತ್ರೆಗೆ ಹಾಕಿ ಇಡುವುದು ಒಳ್ಳೆಯದು. ನೀರಿಗಾಗಿ ಒಂದು ಪಾತ್ರೆ ಎತ್ತಿಡಿ. ಕುದಿಸಿದ ನಂತರ ಬೇರೆ ಪಾತ್ರೆಗೆ ವರ್ಗಾಯಿಸಿ. ಸ್ಟೇನ್ಲೆಸ್ ಸ್ಟೀಲ್ ಆದರೂ ಕುದಿಸಿದ ನಂತರ ಬೇರೆ ಪಾತ್ರೆಗೆ ವರ್ಗಾಯಿಸುವುದು ಒಳ್ಳೆಯದು. ಬೇಸಿಗೆಯಲ್ಲಿ ಮಣ್ಣಿನ ಪಾತ್ರೆಯ ನೀರು ಒಳ್ಳೆಯದು. ಮಣ್ಣಿನ ಪಾತ್ರೆಯ ನೀರು ಕೆಲವರಿಗೆ ಥಂಡಿಯಾಗುವ ಸಾಧ್ಯತೆ ಇರುತ್ತದೆ. ತಾಮ್ರ ಅಥವಾ ಹಿತ್ತಾಳೆ ಪಾತ್ರೆಯಲ್ಲಿ ನೀರು ಇರುವುದಾದರೆ ಪ್ರತಿದಿನ ಒಳಭಾಗ ಮತ್ತು ಹೊರ ಭಾಗವನ್ನು ತೊಳೆಯುವುದು ಅಗತ್ಯ. ತೊಳೆಯುವಾಗ ಆದಷ್ಟು ರಾಸಾಯನಿಕಗಳನ್ನು ಬಳಸಬೇಡಿ. ಕುಡಿಯುವ ನೀರಿನಲ್ಲಿ ಒಂದು ದಳ ತುಳಸಿ, ಲಾವಂಚದ ಬೇರು ಹಾಕಿಟ್ಟು ಕುಡಿಯುವುದು ಒಳ್ಳೆಯದು. ಶುದ್ಧವಾದ ನೀರು (ಬಾವಿ) ಸಿಕ್ಕುವುದಾದರೆ ಕಾಯಿಸದೆ ಕುಡಿಯುವುದು ಒಳ್ಳೆಯದು. ನೀರನ್ನು ಕುಡಿಯುವಾಗ ಕುಳಿತೇ ಕುಡಿಯಬೇಕು. ನಿಂತು ಕುಡಿದರೆ ಮಂಡಿನೋವು ಬರುತ್ತದೆ. ತುಟಿಗೆ ತಾಗಿಸಿ ಕುಡಿಯುವುದರಿಂದ ಬಾಯಾರಿಕೆ ಬೇಗನೆ ಶಮನವಾಗುತ್ತದೆ. ಬಿಸಿಲಿನಿಂದ ಬಂದ ತಕ್ಷಣ ನೀರನ್ನು ಕುಡಿಯಬಾರದು. ಕನಿಷ್ಠ 10 ನಿಮಿಷ ಅಂತರ ಇರಬೇಕು. ಊಟಕ್ಕೆ ಅರ್ಧ ಗಂಟೆ ಮೊದಲು ಅಥವಾ ನಂತರ ನೀರು ಕುಡಿಯುವುದು ಉತ್ತಮ.

-ಸುಮನಾ ಮಳಲಗದ್ದೆ.

ಚಿತ್ರ ಕೃಪೆ: ಇಂಟರ್ನೆಟ್ ತಾಣ