ಕೊಡಬಲ್ಲಿರೇನು?

ಕೊಡಬಲ್ಲಿರೇನು?

ಕವನ

ದುಡಿಯಬಲ್ಲೆನು ನಾನು ಎಲುಬುಗಳ ಮುರಿದು।
ನಾನಿಲ್ಲಿ ಬಂದಿಹೆನು ಹಂಡತಿಯ ತೊರೆದು॥
ಕೂಲಿ ಮಾಡಲು ಬಂದಿರುವೆ ತಂದೆ ತಾಯಿಯ ಮರೆತು।
ಕೊಡಬಲ್ಲಿರೇನು ಒಂದು ಹಿಡಿ ಕೆಲಸ॥೧॥

ನಾನು ಬೇಡುವುದಿಲ್ಲ ಹೆಚ್ಚೆಚ್ಚು ಕೂಲಿ।
ಹಾಗಂತ ಕೂರಲ್ಲ ಮೈಮರೆತು ಖಾಲಿ॥
ಬಿಡಲಾರೆ ಕೆಲಸವನು ನಾ ಬಿದ್ದರೂ ಜೋಲಿ।
ಕೊಡಲಾರಿರಾ ನೀವು ಒಂದು ಹಿಡಿ ಕೆಲಸ॥೨॥

ನರಕಕ್ಕೂ ನಗರಕ್ಕೂ ಒಂದು ಮೈಲೇ ದೂರ।
ಹಾಗಿದ್ದರೂ ಬಂದೆ ಬಿಟ್ಟೆಲ್ಲ ಪರಿವಾರ॥
ನಿಮಗೆಷ್ಟೇ ಇದ್ದರೂ ಸಿರಿತನ ಸಡಗರ।
ನೀವೆಂದೂ ಕೊಡಲಾರಿರಿ ಒಂದು ಹಿಡಿ ಕೆಲಸ॥೩॥

ನಿಕೃಷ್ಟ ದಿನಗಳನು ಕಳೆದಿಹೆನು ಇಲ್ಲಿ।
ಇದ್ದ ಹಳ್ಳಿಗೆ ಹಿಂದೆ ತಿರುಗುವೆನು ಅಲ್ಲಿ॥
ಬರಗಾಲವಾದರೂ ನಮ್ಮೂರೇ ತುಸುಲೇಸು।
ಸಿಗಲಾರದು ಇಲ್ಲಿ ಒಂದು ಹಿಡಿ ಕೆಲಸ॥೪॥

--ಕನ್ನಡದ ಬೇತಾಳ