ಖರ್ಜೂರದ ಚಟ್ನಿ

ಖರ್ಜೂರದ ಚಟ್ನಿ

ಬೇಕಿರುವ ಸಾಮಗ್ರಿ

ಖರ್ಜೂರ ೫೦೦ ಗ್ರಾಂ, ಕತ್ತರಿಸಿದ ಶುಂಠಿ ೨ ಚಮಚ, ಸಕ್ಕರೆ ೪ ಚಮಚ, ಒಣ ದ್ರಾಕ್ಷಿ ೬ ಚಮಚ, ವಿನೆಗಾರ್ ಒಂದೂವರೆ ಕಪ್, ಸುಲಿದ ಬಾದಾಮಿ ಕಾಲು ಕಪ್, ಬೆಳ್ಳುಳ್ಳಿ೨ ಎಸಳು, ಏಲಕ್ಕಿ ೨, ಸ್ವಲ್ಪ ಚಕ್ಕೆ, ಮೆಣಸಿನ ಹುಡಿ ೧ ಚಮಚ, ಸ್ವಲ್ಪ ಉಪ್ಪು.

ತಯಾರಿಸುವ ವಿಧಾನ

ಖರ್ಜೂರದಲ್ಲಿರುವ ಬೀಜವನ್ನು ಮೊದಲಿಗೆ ಬಿಡಿಸಿ. ನಂತರ ಖರ್ಜೂರ, ಶುಂಠಿ, ಚಕ್ಕೆ, ಬೆಳ್ಳುಳ್ಳಿ, ಮೆಣಸಿನ ಹುಡಿ, ಏಲಕ್ಕಿ, ವಿನೆಗಾರ್, ಸಕ್ಕರೆ, ಉಪ್ಪು ಮೊದಲಾದುವುಗಳನ್ನು ಒಂದು ಪಾತ್ರೆಗೆ ಹಾಕಿ ಖರ್ಜೂರ ಗಟ್ಟಿಯಾಗುವವರೆಗೆ ಕುದಿಸಬೇಕು. ನಂತರ ಈ ಮಿಶ್ರಣವನ್ನು ಉರಿಯಿಂದ ತೆಗೆದು ಒಣದ್ರಾಕ್ಷಿ ಮತ್ತು ಹುಡಿ ಮಾಡಿದ ಬಾದಾಮಿ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಬಳಿಕ ಈ ಮಿಶ್ರಣ ಬಿಸಿಯಾಗಿರುವಾಗಲೇ ಗಾಜಿನ ಜಾಡಿಯಲ್ಲಿ ಹಾಕಿ ನಾಲ್ಕು ದಿನಗಳವರೆಗೆ ಮುಚ್ಚಿಟ್ಟು ಬಿಡಿ. ನಾಲ್ಕು ದಿನಗಳ ಬಳಿಕ ಜಾಡಿ ತೆರೆದು ರುಚಿಯಾದ ಖರ್ಜೂರ ಚಟ್ನಿಯನ್ನು ಬಳಸಿ ನೋಡಿ.