ತಕ್ಕಡಿ ಹಿಡಿದಿಹ ಭಗವಂತ

ತಕ್ಕಡಿ ಹಿಡಿದಿಹ ಭಗವಂತ

ಕವನ

ರೆಕ್ಕೆಯು ಕಳಚಿದೆ ಪಕ್ಕದೆ ಬಿದ್ದಿದೆ

ಚೊಕ್ಕದ ಬಾಳಲಿ ಬರಸಿಡಿಲು

ಕೊಕ್ಕಿಗೆ ಕಾಳನು ಇಕ್ಕುವರಿಲ್ಲದೆ

ಹಕ್ಕಿಯು ನರಳಿದೆ ನೋವಿನೊಳು

 

ಕಿರಿಕಿರಿ ಮಾಡದೆ ಕರುಣೆಯ ನೋಟದೆ

ಕರೆದಿದೆ ಸನಿಹಕೆ ಈ ಹಕ್ಕಿ

ನೆರವನು ಬಯಸಿದೆ ದೊರೆಯುವ ಭರವಸೆ

ಮೊರೆಯನು ಇಡುತಿದೆ ನೋವುಕ್ಕಿ

 

ಬಿಕ್ಕುವ ಪರಿಯಲಿ ಹಕ್ಕಿಯ ನೋಯಿಸಿ

ದಕ್ಕಿಸಿಕೊಳ್ಳುವ ಧಾವಂತ

ಸೊಕ್ಕಿನ ಕ್ರೌರ್ಯಕೆ ಸಿಕ್ಕದು‌ ಮನ್ನಣೆ

ತಕ್ಕಡಿ ಹಿಡಿದಿಹ ಭಗವಂತ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್

(ಚಿತ್ರ ಕೃಪೆ : ವಾಟ್ಸಾಪ್) 

ಚಿತ್ರ್