ನಾಯಿಯ ವೇದನೆ

ನಾಯಿಯ ವೇದನೆ

ಕವನ

ತಿನಿಸ ಜೊತೆಗೆ ಕೊಂಚ ಪ್ರೀತಿ

ಇರಲಿ ನನ್ನ ಬಾಳಿಗೆ

ನಿನ್ನ ಮನೆಯ ಕಾಯುತಿರುವ

ಹೊಣೆಯು ನನ್ನ ಪಾಲಿಗೆ

 

ಕದ್ದು ಹಾಲು ನೆಕ್ಕಿ ಬರುವ

ಬೆಕ್ಕು ಮಮತೆ ಮಡಿಲಲಿ

ಮನೆಯ ಒಳಗೆ ನಾನು ಬರಲು

ಏಕೆ ಕೋಪ ನಿನ್ನಲಿ

 

ದಿನವು ಪೂರ್ತಿ ಬಂಧಿಸಿಡುವೆ

ಕೊರಳ ಸುತ್ತ ಸರಪಳಿ

ಜತನದಿಂದ ಮನೆಯ ಕಾವ

ಕಾರ್ಯಕಿದುವೆ ಬಳುವಳಿ?

 

ವೈರಿ ಓಡಿ ನುಸುಳಿಕೊಳಲು

ನನ್ನ ಮನಕೆ ವೇದನೆ

ಕಳ್ಳ ಬರಲು ಹಿಡಿಯಲೆಂತು

ತೋರಲೆಂತು ಸಾಧನೆ

 

ನಂಬಿಕಸ್ಥ ಪ್ರಾಣಿಯೆಂದು

ನಿತ್ಯ ನನ್ನ ಹೊಗಳುವೆ

ಮತ್ತೆ ಏಕೆ ಬಂಧಿಸಿಡುವೆ

ನಿಜವನೆಂದು ಹೇಳುವೆ||

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್