ಪರಿಬ್ರಮನೆ

ಪರಿಬ್ರಮನೆ

ಕವನ

ಇದು ಮುಳ್ಳಿನಹಾದಿ ಚುಚ್ಚದಿರುವುದೇ ಮನ

ಬದುಕು ಭವನೆಗಳ ಮದ್ಯೆ ಹೊಡೆದಾಡಿದೆ ಜೀವನ

ಎಂದು ಕಾಣುವುದೋ ಕಾಣೆ ಬಿಡುಗಡೆಯ ಚೇತನ

ಇದು ಮುಳ್ಳಿನಹಾದಿ ಚುಚ್ಚದಿರುವುದೇ ಮನ|

 

ದಿನದ ಧನಿವಿನ ಮದ್ಯೆ ಮರೆಯಾಗದಿದೆ ಗಳೆಯರ ಗುಂಜನ

ನಿಶೆಯ ನಡುವೆ ನುಸುಳಿದೆ, ನಿದಿರೆಯ ಆಲಿಂಗನ

ಕಂಡೇ ಕಾಣುವೆ ಬಿಡುಗಡೆ!, ಎಂದು ಹಂಬಲಿಸಿದೆ ಈ ಮನ.

ಇದು ಮುಳ್ಳಿನಹಾದಿ ಚುಚ್ಚದಿರುವುದೇ ಮನ|

 

ಇದು ಮುಗಿಯದ ಪಯಣ, ಮುಗಿದರೆ ಇರದು ಜೀವನ

ಮುಗಿಯುವ ಮುನ್ನ, ತುಂಬಿರಲಿ ಎಂದೂ ಆನಂದದ ಔತನ

ನೇಸರನ ನಗುವಿನಲಿ ಮತ್ತೆ ಮರಳಿದೆ ಪಯಣ

ಇದು ಮುಳ್ಳಿನಹಾದಿ ಚುಚ್ಚದಿರುವುದೇ ಮನ||

                                                - ಸಿ. ಎಸ್. ಬೊಗ್ಗವರ್ಪು