ಬಾದಾಮ್ ಪೂರಿ

ಬಾದಾಮ್ ಪೂರಿ

ಬೇಕಿರುವ ಸಾಮಗ್ರಿ

ಮೈದಾ ಹಿಟ್ಟು ೧ ಕಪ್, ರವೆ ಅರ್ಧ ಕಪ್, ಅಕ್ಕಿ ಹಿಟ್ಟು ೨ ಚಮಚ, ಸಕ್ಕರೆ ೧ ಕಪ್, ಏಲಕ್ಕಿ ಹುಡಿ ಸ್ವಲ್ಪ, ತುಪ್ಪ ಅರ್ಧ ಕಪ್, ಅಡುಗೆ ಎಣ್ಣೆ ೨ ಕಪ್, ಕೇಸರಿ ಬಣ್ಣ ಸ್ವಲ್ಪ, ಸಣ್ಣಗೆ ತುಂಡರಿಸಿದ ಬಾದಾಮಿ.

ತಯಾರಿಸುವ ವಿಧಾನ

ಮೈದಾಹಿಟ್ಟು, ರವೆ ಮತ್ತು ಅಕ್ಕಿಹಿಟ್ಟನ್ನು ಮಿಶ್ರ ಮಾಡಿ, ಸ್ವಲ್ಪ ತುಪ್ಪ, ನೀರು ಸೇರಿಸಿ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಮತ್ತೊಂದು ಬಾಣಲೆಗೆ ಅರ್ಧ ಕಪ್ ನೀರು, ಸ್ವಲ್ಪ ಸಕ್ಕರೆ ಸೇರಿಸಿ ಕುದಿಸಿ. ಸಕ್ಕರೆ ಪಾಕಕ್ಕೆ ಬರುತ್ತಿದ್ದಂತೆಯೇ ಕೇಸರಿ ಬಣ್ಣ, ಏಲಕ್ಕಿ ಹುಡಿ ಸೇರಿಸಿ ಕಲಸಿ ಒಲೆಯಿಂದ ಕೆಳಗಿಳಿಸಿಟ್ಟುಕೊಳ್ಳಬೇಕು. 

ಈಗಾಗಲೇ ತಯಾರಿಸಿಟ್ಟ ಮಿಶ್ರಣದಿಂದ ತೆಳುವಾದ ಪೂರಿಯನ್ನು ಲಟ್ಟಿಸಿ ತ್ರಿಕೋನಾಕಾರ ಬರುವಂತೆ ಮಡಚಿ ಅಂಚುಗಳನ್ನು ಸಮನಾಗಿ ಒತ್ತಿ. ಈಗ ಲಟ್ಟಿಸಿದ ಪೂರಿಯನ್ನು ಎಣ್ಣೆಯಲ್ಲಿ ಕರಿದು, ಈ ಪೂರಿಗಳನ್ನು ಸಕ್ಕರೆ ಪಾಕದಲ್ಲಿ ಅದ್ದಿ ತೆಗೆದರೆ ರುಚಿಯಾದ ಬಾದಾಮ್ ಪೂರಿ ಸವಿಯಲು ಸಿದ್ದವಾಗುತ್ತದೆ. ಬೇಕಿದ್ದರೆ ಸಣ್ಣಗೆ ತುಂಡರಿಸಿದ ಬಾದಾಮ್ ಚೂರುಗಳನ್ನು ಸಕ್ಕರೆ ಪಾಕ ಗಟ್ಟಿಯಾಗುವ ಮೊದಲು ಪೂರಿಗಳ ಮೇಲೆ ಉದುರಿಸಬಹುದು.