ಬಿಸ್ಕಿಟ್ ಬರ್ಫಿ

ಬಿಸ್ಕಿಟ್ ಬರ್ಫಿ

ಬೇಕಿರುವ ಸಾಮಗ್ರಿ

ಗ್ಲೂಕೋಸ್ ಬಿಸ್ಕಿಟ್ - ೩ ಪ್ಯಾಕೆಟ್, ಸಕ್ಕರೆ - ಅರ್ಧ ಕಪ್, ತುಪ್ಪ - ಅರ್ಧ ಕಪ್, ಹಾಲಿನ ಹುಡಿ - ೨ ಚಮಚ, ಹಾಲು - ೧ ಕಪ್, ದ್ರಾಕ್ಷೆ, ಗೋಡಂಬಿ, ಬಾದಾಮಿ ಚೂರುಗಳು - ಅರ್ಧ ಕಪ್

 

ತಯಾರಿಸುವ ವಿಧಾನ

ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಗ್ಲೂಕೋಸ್ ಬಿಸ್ಕಿಟ್ ಗಳನ್ನು ತುಂಡು ತುಂಡು ಮಾಡಿ ಹಾಕಿ ಸಣ್ಣ ಉರಿಯಲ್ಲಿ ಕೆಂಪಗಾಗುವಂತೆ ಹುರಿದುಕೊಳ್ಳಿ. ನಂತರ ತುಪ್ಪದಲ್ಲಿ ಹುರಿದ ಬಿಸ್ಕಿಟ್ ಅನ್ನು ಮಿಕ್ಸಿ ಜಾರಿಗೆ ಹಾಕಿ ಹುಡಿ ಮಾಡಿಕೊಳ್ಳ ಬೇಕು. ಬಿಸ್ಕಿಟ್ ಹುಡಿಯನ್ನು ಹಾಲಿನ ಹುಡಿ ಮತ್ತು ಹಾಲಿನ ಜೊತೆ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. 

ಮತ್ತೊಂದು ಬಾಣಲೆಗೆ ಸಕ್ಕರೆ ಹಾಕಿ ಸ್ವಲ್ಪ ನೀರು ಹಾಕಿ ಪಾಕ ಮಾಡಿಕೊಳ್ಳಿ. ಪಾಕ ತುಸು ಗಟ್ಟಿಯಾದ ಬಳಿಕ ಮೊದಲು ಮಾಡಿಟ್ಟ ಮಿಶ್ರಣವನ್ನು ಹಾಕಿ ಕೈಯಾಡಿಸುತ್ತಾ ಇರಿ. ಪಾಕ ದಪ್ಪವಾಗುತ್ತಿದ್ದಂತೆ ಒಲೆ ಆರಿಸಿ. ತಟ್ಟೆಯೊಂದಕ್ಕೆ ತುಪ್ಪವನ್ನು ಸವರಿ ಮಿಶ್ರಣವನ್ನು ಹಾಕಿ ಸ್ವಲ್ಪ ತಣಿಯುತ್ತಿದ್ದಂತೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ಡ್ರೈಫ್ರೂಟ್ಸ್ ಗಳಿಂದ ಅಲಂಕರಿಸಿದರೆ ರುಚಿಕರವಾದ ಬಿಸ್ಕಿಟ್ ಬರ್ಫಿ ಸವಿಯಲು ಸಿದ್ಧ.