ಬೆತ್ತಲಾದ ಮರ

ಬೆತ್ತಲಾದ ಮರ

ಕವನ

ಸುತ್ತಮುತ್ತ ನೀರನೀಡೆ

ಹೊಳೆಯು ಒಂದು ಹರಿದಿದೆ

ದೊಡ್ಡ ಮರದ ರೆಂಬೆ ಕೊಂಬೆ

ಹೊಳೆಯ ಬದಿಗೆ ಚಾಚಿದೆ

 

ವೃಕ್ಷ ತನ್ನ ತಲೆಯನೆತ್ತಿ

ನೀರಿಗಾಗಿ ಅರಸಿದೆ

ಜಲದ ಕಡೆಗೆ ಬೇರು ಸರಿಯೆ

ಗುರುತು ಹಾಕಿ ಕೊಟ್ಟಿತೇ?

 

ಮರವು ಪೂರ್ತಿ ಎಲೆಗಳಿರದೆ

ಕಾಣುತಿಹುದು ಬೆತ್ತಲು

ಕಜ್ಜಿಯಂತೆ ತುಂಬಿಕೊಂಡ

ಮುಳ್ಳು ಮೈಯ ಮುಚ್ಚಲು

 

ಕಾಣುತಿಹುದು ಟಿಸಿಲ ತುದಿಗೆ

ಚಂದ ಹೂವು ಬಿಟ್ಟಿದೆ

ನಾಳೆಗರಳಿ ನಗಲು ಮೊಗ್ಗು

ಸರದಿಯಲ್ಲಿ ಕಾದಿದೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್