ಮಂಡಕ್ಕಿ ಚಿಕ್ಕಿ

ಮಂಡಕ್ಕಿ ಚಿಕ್ಕಿ

ಬೇಕಿರುವ ಸಾಮಗ್ರಿ

ಮಂಡಕ್ಕಿ (ಚುರುಮುರಿ) ೪ ಕಪ್, ಬಾದಾಮಿ ಚೂರುಗಳು ಅರ್ಧ ಕಪ್, ಕುಂಬಳಕಾಯಿ ಬೀಜಗಳು ೨ ಚಮಚ, ಬೆಲ್ಲ ೨ ಕಪ್, ತುಪ್ಪ ಅರ್ಧ ಕಪ್, ಏಲಕ್ಕಿ ಹುಡಿ ೧ ಚಮಚ.

ತಯಾರಿಸುವ ವಿಧಾನ

ಮೊದಲಿಕೆ ಮಂಡಕ್ಕಿ ಹುರಿದಿಟ್ಟುಕೊಂಡಿರಿ. ನಂತರ ಬಾದಾಮಿ, ಕುಂಬಳಕಾಯಿ ಬೀಜಗಳನ್ನು ಹುರಿಯಿರಿ. ಒಂದು ಪಾತ್ರೆಗೆ ಬೆಲ್ಲ, ನೀರನ್ನು ಹಾಕಿ, ಬೆಲ್ಲ ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ತುಪ್ಪವನ್ನು ಸೇರಿಸಿ. ಈಗ ನೊರೆಯಾಗುವವರೆಗೆ ಕುದಿಸಿ. ಹುರಿದ ಮಂಡಕ್ಕಿ ಮತ್ತು ಏಲಕ್ಕಿ ಹುಡಿ, ಬಾದಾಮಿ, ಕುಂಬಳಕಾಯಿ ಬೀಜ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಒಂದು ಬಟ್ಟಲಿಗೆ ತುಪ್ಪವನ್ನು ಸವರಿ ಅದಕ್ಕೆ ಬೇಯಿಸಿದ ಮಿಶ್ರಣವನ್ನು ಹಾಕಿ ತಣ್ಣಗಾಗಲು ಬಿಡಿ. ಒಂದು ನಿಮಿಷ ಸ್ವಲ್ಪ ತಣ್ಣಗಾದ ಬಳಿಕ ಇನ್ನೂ ಸ್ವಲ್ಪ ಬಿಸಿ ಇರುವಾಗಲೇ ಚಿಕ್ಕಿಯ ಆಕಾರಕ್ಕೆ ಕತ್ತರಿಸಿದರೆ ಸೊಗಸಾದ ಮಂಡಕ್ಕಿ ಚಿಕ್ಕಿ ಸವಿಯಲು ಸಿದ್ದ.