ಮಸಾಲಾ ಬ್ರೆಡ್

ಮಸಾಲಾ ಬ್ರೆಡ್

ಬೇಕಿರುವ ಸಾಮಗ್ರಿ

ಕಡಲೇ ಹಿಟ್ಟು - ಒಂದೂವರೆ ಕಪ್, ಅಕ್ಕಿ ಹಿಟ್ಟು - ೧ ಕಪ್, ಮೆಣಸಿನ ಹುಡಿ - ೨ ಚಮಚ, ಎಳ್ಳು - ೨ ಚಮಚ, ಕರಿಯಲು ಎಣ್ಣೆ, ಬ್ರೆಡ್ ಸ್ಲೈಸ್ - ೬-೮, ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಒಂದು ಬೌಲ್ ಗೆ ಕಡಲೇ ಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಮೆಣಸಿನ ಹುಡಿ, ಕೊತ್ತಂಬರಿ ಸೊಪ್ಪು, ಎಳ್ಳು, ಎಣ್ಣೆ ಮತ್ತು ನೀರು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟು ತೀರಾ ತೆಳುವಾಗದಿರುವಂತೆ ನೋಡಿ. ಸ್ವಲ್ಪ ಗಟ್ಟಿಯಾಗಿ ಪೇಸ್ಟ್ ನಂತೆ ಇರಲಿ. ನಂತರ ಬ್ರೆಡ್ ಸ್ಲೈಸ್ ನ ೨ ಭಾಗಕ್ಕೆ ಕಲಸಿದ ಹಿಟ್ಟನ್ನು ಸ್ವಲ್ಪ ಹಚ್ಚಿ. ನಂತರ ಅದನ್ನು ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಸಾಸ್ ಅಥವಾ ಕೆಚಪ್ ಜೊತೆ ಸವಿಯಲು ಚೆನ್ನಾಗಿರುತ್ತದೆ.

ಬೇಕಿದ್ದರೆ ಕಲಸಿದ ಹಿಟ್ಟಿಗೆ ಬೇಯಿಸಿದ ಆಲೂಗಡ್ಡೆ ಹುಡಿ ಮಾಡಿ ಮಿಕ್ಸ್ ಮಾಡಿಕೊಳ್ಳಬಹುದು. ಜೊತೆಗೆ ತುರಿದ ಕ್ಯಾರೆಟ್, ಬೇಯಿಸಿದ ಬಟಾಣಿ, ಸಣ್ಣಗೆ ಹೆಚ್ಚಿದ ಎಲೆಕೋಸು, ಕ್ಯಾಪ್ಸಿಕಮ್ ಮುಂತಾದ ತರಕಾರಿಗಳನ್ನು ಬೆರೆಸಬಹುದು.