ಲಾಲ್ ಬಹಾದ್ದೂರ್ ಶಾಸ್ತ್ರೀಜಿ

ಲಾಲ್ ಬಹಾದ್ದೂರ್ ಶಾಸ್ತ್ರೀಜಿ

ಕವನ

ಮಿತ್ರರಾದ ಗಾಂಧೀಜಿಯ ಜೊತೆಗೂಡಿ ಸ್ವತಂತ್ರ 

ದಕ್ಕಿಸಿ ನುಡಿದರು ಶಾಸ್ತ್ರೀಜಿ

ಶತ್ರುಗಳ ಎದೆಯನ್ನು ಸೀಳಿಸಿ ಸದ್ದು ಆಡಗಿಸಿ

ದುಡಿದರು ಶಾಸ್ತ್ರೀಜಿ

 

ತನುವನ್ನು ದೇಶದ ಉನ್ನತಿಗೆ ಸಹಕರಿಸಿದವರಿಗೆ

ಗೌರವ ಸಲ್ಲಿಕೆ ನೀಡದಿದ್ದರೇಗೆ 

ಜನರನ್ನು ಎಚ್ಚರಿಸಲು ಜೈಜವಾನ್ ಜೈಕಿಸಾನ್ 

ಘೋಷಣೆ ಮಾಡಿದರು ಶಾಸ್ತ್ರೀಜಿ

 

ಸರಕಾರದ ಹಣವನ್ನೂ ಪ್ರಜೆಗಳಿಗಾಗಿ ಮೀಸಲಿಟ್ಟ 

ಮಹಾ ಘನತೆಯ ವಾಮನರು

ಬರಗಾಲ ಬಂದಾಗ ಒಂದೊತ್ತು ಆಹಾರ ತ್ಯಜಿಸಿ ನೋಡಿದರು ಶಾಸ್ತ್ರೀಜಿ 

 

ಹದಿನೇಳು ತಿಂಗಳ ಕಾಲ ಪ್ರಧಾನಿ ಹುದ್ದೆ 

ಅಲಂಕರಿಸಿದ ಬಹುದ್ದೂರರು

ಹದಿಹರೆಯದವರು ಬೆರಗಾಗಿ ನಿಲ್ಲುವಂತೆ ಮಂತ್ರ 

ದಂಡ ಹಿಡಿದರು ಶಾಸ್ತ್ರೀಜಿ 

 

ಮೂರ್ತಿ ಚಿಕ್ಕದೆ ಕೀರ್ತಿ ದೊಡ್ಡದೆಂದು ಸಾಧಿಸಿ ತೋರಿಸಿದರು ಚಂದ್ರ

ಭರ್ತಿಯಾಗಿ ನೂರು ವರ್ಷ ತುಂಬದೆ ದುಃಖದಿಂದ 

ಮಡಿದರು ಶಾಸ್ತ್ರೀಜಿ.

 

-ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್