ಸ್ಟೇಟಸ್ ಕತೆಗಳು (ಭಾಗ ೬೪೪) - ಸೂತ್ರ

ಸ್ಟೇಟಸ್ ಕತೆಗಳು (ಭಾಗ ೬೪೪) - ಸೂತ್ರ

ನನ್ನದು ಒಂದು ದೇಹ ಈ ದೇಹದ ಒಳಗೆ ಅಸಂಖ್ಯಾತ ನರಗಳು, ರಕ್ತದ ಪ್ರತಿಯೊಂದು ಭಾಗಗಳು ಅವುಗಳ ಕೆಲಸವನ್ನು ಅವು ಮಾಡುತ್ತಲೇ ಇದ್ದಾವೆ. ಇದನ್ನ ನಾನು ನನ್ನ ಜೊತೆಗಿರುವ ಯಾವುದಾದರೂ ವಸ್ತುವಿಗೆ ಹೋಲಿಸಬಹುದಾ ಅಂತ ನೋಡಿದರೆ ಹೌದು ಸಾಧ್ಯವಿದೆ. ಕೈಯಲ್ಲಿರುವ ಮೊಬೈಲ್ ಹಿಡಿದು ಕೊಳ್ಳೋಣ ಮೊಬೈಲ್ ಅನ್ನು ಆಫ್ ಮಾಡಿದ್ರು ಕೂಡ ಅದರ ಒಳಗೆ ಕೆಲಸಗಳು ನಡಿತಾನೆ ಇರುತ್ತದೆ. ನಾವು ಮಲಗಿದ್ದಾಗ ನಮ್ಮ ದೇಹದೊಳಗೆ ಕೆಲಸ ನಡಿತದಲ್ಲ ಹಾಗೆ, ಮೊಬೈಲನ್ನು ಒಂದು ಸಲ ಆನ್ ಮಾಡಿದಾಗ ಎಲ್ಲವೂ  ಒಂದು ಕ್ಷಣ ಸಮಯ ತೆಗೆದುಕೊಂಡು ನಂತರ ಪ್ರತಿಯೊಂದು ಕೆಲಸ ಮಾಡಲು ಆರಂಭವಾಗುತ್ತದೆ ನಾವು ಪ್ರತಿ ದಿನ ಬೆಳಗ್ಗೆ ಎದ್ದು ನಮ್ಮ ದಿನಚರಿಯನ್ನ ಆರಂಭ ಮಾಡುತ್ತೇವೋ ಹಾಗೆ. ಹಾಗೆ ಫೋನು ಯಾವತ್ತೂ ನಿಲ್ಲುತ್ತದೆ ಅಂದರೆ ಯಾವಾಗ ನಾವದರ ಬ್ಯಾಟರಿಯನ್ನ ತೆಗೆದು ಹಾಕುತ್ತೇವೋ ಆವಾಗ. ಹಾಗೆ ನಮ್ಮೊಳಗೆ ಇರುವ ಜೀವ ನಮ್ಮನ್ನ ತೊರೆದು ಹೊರಟಾಗ ದೇಹ ಶವವಾಗುತ್ತದೆ. ಆಗಾಗ ಬ್ಯಾಟರಿಯನ್ನ ಚಾರ್ಜ್ ಮಾಡಿದ ಹಾಗೆ ನಾವು ನಮ್ಮ ದೇಹದ ಚೈತನ್ಯವನ್ನು ಹೆಚ್ಚಿಸಿಕೊಳ್ಳೋಕೆ ಆರೋಗ್ಯ ವರ್ಧಕ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕಾಗಿದೆ .ಹಾಗಾಗಿ ನಾವು ಬಳಸುವ ವಸ್ತುವೆ ನಮ್ಮ ಬದುಕಿನ ರೀತಿಗಳನ್ನು ತಿಳಿಸುತ್ತದೆ ನಮ್ಮ ಕೆಲಸ ಅನುಸರಿಸುವುದಷ್ಟೇ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ